ಉಡುಪಿ ಜಿಲ್ಲೆಯಲ್ಲಿ ಈಗ ಐಸಿಯು ಬೆಡ್‌ಗಳ ಬೇಡಿಕೆ ತೀವ್ರ ಇಳಿಮುಖ!
Team Udayavani, Nov 1, 2020, 5:55 AM IST
ಉಡುಪಿ: ಕೊರೊನಾ ಸೋಂಕಿತರು ಅದರಲ್ಲೂ ವಿಶೇಷವಾಗಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಐಸಿಯು ಬೆಡ್‌ಗಳನ್ನು ಪೂರೈಸಲು ತೀವ್ರ ಸಮಸ್ಯೆ ಎದುರಿಸುತ್ತಿದ್ದ ಉಡುಪಿ ಜಿಲ್ಲೆಯಲ್ಲಿ ಈಗ ಐಸಿಯು ಬೆಡ್‌ಗಳ ಬೇಡಿಕೆ ತೀವ್ರ ಇಳಿಮುಖವಾಗಿದೆ.
ಮಾರ್ಚ್ ಕೊನೆಯ ವೇಳೆ ಆರಂಭಗೊಂಡ ಕೊರೊನಾ ಸೋಂಕು ಜುಲೈ, ಆಗಸ್ಟ್, ಸೆಪ್ಟಂಬರ್ ವೇಳೆ ತೀವ್ರವಾಯಿತು. ಇದೀಗ ಎಂಟನೆಯ ತಿಂಗಳು ಪ್ರವೇಶವಾಗುವಾಗ ಸಮಸ್ಯೆ ಪರಿಹಾರವಾಗುವ ಲಕ್ಷಣ ಗೋಚರಿಸುತ್ತಿದೆ. ಆಗಸ್ಟ್ ವೇಳೆ ಐಸಿಯು ಬೆಡ್‌ಗಳನ್ನು ಪೂರೈಸಲಾಗದೆ ತೀವ್ರ ಸಮಸ್ಯೆ ಎದುರಿಸುತ್ತಿದ್ದ ಜಿಲ್ಲಾಡಳಿತಕ್ಕೆ ಇದೀಗ ನೆಮ್ಮದಿ ಮೂಡಿದೆ. ಜನರಲ್ಲಿ ಕೊರೊನಾ ಪರೀಕ್ಷೆ ನಡೆಸಲು ಉಂಟಾದ ಜಾಗೃತಿ, ಗಂಟಲ ದ್ರವ ಸಂಗ್ರಹಕ್ಕೆ ಬೇಕಾದ ಮೂಲಭೂತ ಸೌಕರ್ಯದ ಒದಗಣೆ, ಆರೋಗ್ಯ ವಿಭಾಗದ ನೌಕರರ ಪರಿಶ್ರಮದಿಂದ ಈ ಹಂತಕ್ಕೆ ಬರಲು ಕಾರಣವಾಗಿದೆ.
ಶೇ. 30ರಷ್ಟು ಬೇಡಿಕೆ
ಕೊರೊನಾ ತೀವ್ರ ಸಮಸ್ಯೆ ಇದ್ದವರಿಗೆ ಮಾತ್ರ ಎ. 1ರಿಂದ ಶುಶ್ರೂಷೆ ನೀಡುತ್ತಿದ್ದ ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ನಾಲ್ಕೈದು ದಿನಗಳಿಂದ ಐಸಿಯು ಬೆಡ್‌ನಲ್ಲಿ ಯಾವುದೇ ರೋಗಿ ಇಲ್ಲ. ಎಲ್ಲ 130 ಬೆಡ್‌ಗಳಲ್ಲೂ ಕೊರೊನಾ ಸೋಂಕಿತರು ಇದ್ದ ಆಸ್ಪತ್ರೆಯಲ್ಲಿ ಅ. 31ರಂದು 26 ರೋಗಿಗಳಷ್ಟೆ ಇದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲೂ ಸುಮಾರು 40 ಐಸಿಯು ಬೆಡ್‌ಗಳಲ್ಲಿ ರೋಗಿಗಳಿದ್ದರೆ ಅ. 31ರಂದು 15 ಕೊರೊನಾ ಸೋಂಕಿತರು ಮಾತ್ರ ಇದ್ದಾರೆ. ಇಲ್ಲಿ ಸುಮಾರು 300 ರೋಗಿಗಳು ಇರುತ್ತಿದ್ದರೆ ಅ. 31ರಂದು 45 ಸೋಂಕಿತರು ಮಾತ್ರ ಇದ್ದಾರೆ. ಜಿಲ್ಲಾಸ್ಪತ್ರೆಯ ಐಸಿಯು ಬೆಡ್‌ಗಳಲ್ಲಿ ಕೊರೊನಾ ಸೋಂಕಿತರನ್ನು ಉಪಚರಿಸುತ್ತಿಲ್ಲ. ಇಲ್ಲಿ ಶಂಕಿತರನ್ನು ಉಪಚರಿಸಿ ಅನಂತರ ಸೋಂಕು ದೃಢಪಟ್ಟರೆ ನಿಯೋಜಿತ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇದನ್ನೂ ಓದಿ:ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ: ಒಟ್ಟು 9 ಆರೋಪಿಗಳ ಬಂಧನ
ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಈಗಾಗಲೇ ಬೆಳಗ್ಗೆ 9ರಿಂದ ಅಪರಾಹ್ನ 1ರ ವರೆಗೆ ಹೊರರೋಗಿ ವಿಭಾಗದ (ಒಪಿಡಿ) ಸೇವೆಯನ್ನು ಒದಗಿಸಲಾಗುತ್ತಿದೆ. ಕೊರೊನಾ ಸೋಂಕಿತರು ಕಡಿಮೆ ಇರುವ ಕಾರಣ ಸೋಮವಾರದಿಂದ ಬೆಳಗ್ಗೆ 9ರಿಂದ ಸಂಜೆ 5 ಗಂಟೆ ವರೆಗೆ ಪೂರ್ಣ ಸಮಯ ಒಪಿಡಿ ಸೇವೆಯನ್ನು ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ 80 ಬೆಡ್‌ಗಳಿರುವ ಒಂದು ಮಹಡಿ ಪೂರ್ತಿ ಖಾಲಿ ಇರುವುದರಿಂದ ಇಲ್ಲಿ ಕೊರೊನಾ ಸೋಂಕಿತರಲ್ಲದ ಇತರ ರೋಗಿಗಳನ್ನು ಉಪಚರಿಸಲು ಚಿಂತನೆ ನಡೆಸಲಾಗುತ್ತಿದೆ ಎನ್ನುತ್ತಾರೆ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ| ಶಶಿಕಿರಣ್ ಉಮಾಕಾಂತ್.
ಉಡುಪಿ ಜಿಲ್ಲೆಯ ಸರಕಾರಿ
ಮತ್ತು ಖಾಸಗಿ ಆಸ್ಪತ್ರೆಗಳ ಐಸಿಯು ಬೆಡ್‌ಗಳಲ್ಲಿ ಶೇ.30ರಷ್ಟು ಮಾತ್ರ ಬೇಡಿಕೆ ಇದೆ. ಎಲ್ಲ ಆಸ್ಪತ್ರೆಗಳ ಲ್ಲಿಯೂ ಕೊರೊನಾ ಸೋಂಕಿತರು ದಾಖಲಾಗುವುದು ಇಳಿಮುಖವಾಗಿದೆ.
-ಡಾ| ಸುಧೀರ್‌ಚಂದ್ರ ಸೂಡ, ಆರೋಗ್ಯಾಧಿಕಾರಿ, ಉಡುಪಿ ಜಿಲ್ಲೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.