ಇಂದು ವಿಶ್ವ ಪ್ರವಾಸೋದ್ಯಮ ದಿನ; ಪ್ರವಾಸೋದ್ಯಮ ಮರು ಚಿಂತನೆ

ದೇಶದ ಆರ್ಥಿಕ ಪ್ರಗತಿಗೆ ಪ್ರವಾಸೋದ್ಯಮ ಪಾತ್ರ ಬಹಳ ಪ್ರಾಮುಖ್ಯವಾಗಿದೆ

Team Udayavani, Sep 27, 2022, 10:13 AM IST

ಇಂದು ವಿಶ್ವ ಪ್ರವಾಸೋದ್ಯಮ ದಿನ; ಪ್ರವಾಸೋದ್ಯಮ ಮರು ಚಿಂತನೆ

ಪ್ರವಾಸೋದ್ಯಮವು ದೇಶದ ಪ್ರಗತಿಗೆ ಮತ್ತು ಆರ್ಥಿಕತೆಗೆ ಬಹಳ ದೊಡ್ಡ ಕೊಡುಗೆಯನ್ನು ನೀಡುವುದರೊಂದಿಗೆ, ಪ್ರವಾಸಿಗರ ಮತ್ತು ಸ್ಥಳೀಯರ ನಡುವೆ
ಸಾಂಸ್ಕೃತಿಕ ನಿಮಯವನ್ನು ಪೋಷಿಸುತ್ತದೆ, ಲಕ್ಷಾಂತರ ಮಂದಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಉದ್ಯೋಗ ಸೃಷ್ಟಿ ಮಾಡುವುದರೊಂದಿಗೆ ಸಮುದಾಯದ
ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಕೂಡಾ ಸಹಕರಿಸುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಯುನೈಟೆಡ್‌ ನೇಶನ್ಸ್‌ ವರ್ಲ್ಡ್ ಟೂರಿಸಂ ಆರ್ಗನೈಸೇಶನ್‌-ವಿಶ್ವ ಪ್ರವಾಸೋದ್ಯಮವನ್ನು ಸಮರ್ಥನೀಯವಾಗಿ ಸರ್ವರಿಗೂ ತಲುಪಿಸಲು ಪ್ರಯತ್ನಿಸುತ್ತಿದೆ.

ಪ್ರತಿ ವರುಷದಂತೆ ಈ ಬಾರಿ ಕೂಡಾ ಇಂದು (ಸೆಪ್ಟೆಂಬರ್‌ 27)ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಇಂಡೋನೇಷ್ಯಾದ ಬಾಲಿಯಲ್ಲಿ ಪ್ರವಾಸೋದ್ಯಮ-ಮರು ಚಿಂತನೆ ಧ್ಯೇಯವಾಕ್ಯದೊಂದಿಗೆ ವಿಶ್ವ ಪ್ರವಾಸೋದ್ಯಮ ಸಂಘಟನೆಯ ಅಧಿಕೃತ
ಕಾರ್ಯಕ್ರಮಗಳೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಪ್ರವಾಸೋದ್ಯಮ – ಮರು ಚಿಂತನೆ
ವಿಶ್ವದಾದ್ಯಂತ ಕೋವಿಡ್‌ ಮಹಾಮಾರಿಯಿಂದಾಗಿ ಎಲ್ಲಾ ವ್ಯವಹಾರಗಳು ಸಾಕಷ್ಟು ನಷ್ಟಕ್ಕೊಳಗಾಗಿವೆ.ಅದರಲ್ಲೂ ಪ್ರವಾಸೋದ್ಯಮ ನೆಲಕಚ್ಚಿ ಹೋಗಿದೆ.
ರೆಸಾರ್ಟ್‌ಗಳು, ಹೋಟೆಲ್‌ಗ‌ಳು, ರೆಸ್ಟೋರೆಂಟ್‌ಗಳು, ವಿಮಾನ, ಬಸ್‌, ಕಾರ್‌ ಮತ್ತಿತರ ಸಾರಿಗೆ ಸಂಸ್ಥೆಗಳು, ಥೀಮ್‌ ಪಾರ್ಕ್‌ಗಳು ಮತ್ತಿತರ ಪ್ರವಾಸೋದ್ಯಮಕ್ಕೆ ನೇರವಾಗಿ, ಪರೋಕ್ಷವಾಗಿ ಸಂಬಂಧಿಸಿದ ಚಟುವಟಿಕೆಗಳು ಭಾರಿ ನಷ್ಟಕ್ಕೆ ಒಳಗಾಗಿವೆ.

ವಿಶ್ವ ಪ್ರವಾಸೋದ್ಯಮ ದಿನಾಚರಣೆ : ಸೆಪ್ಟೆಂಬರ್‌27
1980ರಲ್ಲಿ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಯುನೈಟೆಡ್‌ ನೇಶನ್ಸ್‌ ವರ್ಲ್ಡ್ ಟೂರಿಸಂ ಆರ್ಗನೈಸೇಷನ್‌ ಪ್ರಾರಂಭಿಸಿದ ವಿಶ್ವ ಪ್ರವಾಸೋದ್ಯಮ ದಿನಾಚರಣೆ – ಈಗ ಪ್ರತಿ ವರುಷ ಸೆಪ್ಟೆಂಬರ್‌ 27ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಎಲ್ಲಾ ದೇಶಗಳಲ್ಲೂ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಸ್ಥಳೀಯ ಉತ್ಸವಗಳಂತೆ ಆಚರಿಸಲಾಗುತ್ತಿದೆ. ತನ್ಮೂಲಕ ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗಳ ಮೇಲೆ ಪ್ರವಾಸೋದ್ಯಮದ ಪರಿಣಾಮದ ಕುರಿತು ಜನ ಜಾಗೃತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದೊಂದು ಜಾಗತಿಕ ಪ್ರವಾಸೋದ್ಯಮದ ಇತಿಹಾಸದಲ್ಲಿ ವಿಶಿಷ್ಠ ಮೈಲುಗಲ್ಲು ಎಂದು ಪರಿಗಣಿಸಲಾಗಿದೆ. ಪ್ರತಿ ವರುಷ ವಿವಿಧ ಧ್ಯೇಯ ವಾಕ್ಯಗಳ ಮೂಲಕ ಜನಜಾಗೃತಿ ಮಾಡಲಾಗುತ್ತಿದೆ.ಈ ಬಾರಿಯ ಧ್ಯೇಯ ವಾಕ್ಯ : ಪ್ರವಾಸೋದ್ಯಮ- ಮರು ಚಿಂತನೆ.

ಬೆಂಗಳೂರಿನಂತಹ ಮಹಾನಗರದಲ್ಲಿ ಕೂಡಾ ಸುಮಾರು 400ಕ್ಕೂ ಅಧಿಕ ಹೋಟೆಲ್‌, ರೆಸ್ಟೊರೆಂಟ್‌ಗಳು ಶಾಶ್ವತವಾಗಿ ಮುಚ್ಚಿವೆ, ಸಾವಿರಾರು ಮಂದಿ
ಉದ್ಯೋಗವನ್ನು ಕಳೆದು ಕೊಂಡಿರುವರು.ಈಗ ಕಳೆದೆರಡು ತಿಂಗಳುಗಳಿಂದ ನಿಧಾನವಾಗಿ ವ್ಯವಹಾರಗಳು ಚೇತರಿಸಿಕೊಳ್ಳತೊಡಗಿವೆ.ಈ ಸಂಕ್ರಮಣ ಕಾಲದಲ್ಲಿ ಪ್ರವಾಸೋದ್ಯಮವನ್ನು ಪುನಃ ಮೊದಲಿನ ಸ್ಥಾನಕ್ಕೆ ಕೊಂಡೊಯ್ಯಲು ಮರು ಚಿಂತನೆ ಮಾಡಲೇಬೇಕಾದ ಅನಿವಾರ್ಯತೆ ಉಂಟಾಗಿದೆ.

ಪ್ರಸ್ತುತ ದೇಶದ ಜಿ.ಡಿ.ಪಿ.ಗೆ 6.8% ಕೊಡುಗೆ ನೀಡುತ್ತಿರುವ ಪ್ರವಾಸೋದ್ಯಮ 2028ರಲ್ಲಿ 10.35%ಕ್ಕೆ ತಲುಪಬಹುದೆಂಬ ನಿರೀಕ್ಷೆಯಿದೆ. ಅಂತೆಯೇ ದೇಶದ
ಪ್ರವಾಸೋದ್ಯಮ ಆದಾಯ ಅಂದಾಜು 420 ಸಾವಿರ ಕೋಟಿ (50.9 ಮಿಲಿಯನ್‌ ಡಾಲರ್‌) ತಲುಪಲಿದೆ. ಭಾರತದ ಸಮಗ್ರ ಉದ್ಯೋಗಗಳಲ್ಲಿ 13% ಕ್ಕೂ ಅಧಿಕ ಮಂದಿ ಪ್ರವಾಸೋದ್ಯಮದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ತೊಡಗಿಸಿಕೊಂಡಿರುವರು (2019 – 9 ಕೋಟಿ ಉದ್ಯೋಗಿಗಳು).

ಒಟ್ಟಿನಲ್ಲಿ ಪ್ರವಾಸೋದ್ಯಮದ ಮರು ಚಿಂತನೆಯ ಮೂಲಕ ಪ್ರವಾಸೋದ್ಯಮದ ಸಮರ್ಥತೆಯನ್ನು ಗುರುತಿಸುವ ಕೆಲಸವಾಗಬೇಕು. ಉದ್ಯೋಗ, ಶಿಕ್ಷಣ, ಕುಶಲ
ಕಲೆಗಳ ನಿರ್ಮಾಣ ಮತ್ತು ದೇಶದ ಆರ್ಥಿಕ ಪ್ರಗತಿಗೆ ಪ್ರವಾಸೋದ್ಯಮ ಪಾತ್ರ ಬಹಳ ಪ್ರಾಮುಖ್ಯವಾಗಿದೆ ಎನ್ನುವುದನ್ನು ಸಿದ್ಧಪಡಿಸುವುದು ಇಂದಿನ ಅಗತ್ಯತೆ.

ಉಡುಪಿ ಹೋಮ್‌ಸ್ಟೇ:ಈ ಹೋಮ್‌ಸ್ಟೇಯ ಪರಿಕಲ್ಪನೆ ಬಹಳ ಪುರಾತನವಾದುದು. ವೇದ ಕಾಲದಿಂದಲೂ ಈ ಪರಿಕಲ್ಪನೆ ಇತ್ತು. ನಮ್ಮ ನಮ್ಮ ಮನೆಯಲ್ಲಿ ಹೆಚ್ಚುವರಿಯಾಗಿರುವ ಒಂದೆರಡು ಕೊಠಡಿಗಳನ್ನು ಸರಕಾರಿ ನಿಯಮಾವಳಿ ಮತ್ತು ಉತ್ತಮ ಮೂಲಭೂತ ಸೌಲಭ್ಯಗಳನ್ನು ಅಳವಡಿಸಿ, ಅತಿಥಿಗಳಿಗೆ ನೀಡಿ, ಅವರಿಗೆ ನಮ್ಮದೇ ಊಟೋಪಹಾರಗಳನ್ನು ಉಣಬಡಿಸಿ, ಆಚಾರ ವಿಚಾರಗಳನ್ನು ನಿಮಯ ಮಾಡಿಕೊಂಡರೇ ಅದೇ ಹೋಮಸ್ಟೇಯ ಸಂಕ್ಷಿಪ್ತ ಪರಿಚಯ. ಇದರಿಂದ ನಿರ್ವಾಹಕ ಕುಟುಂಬದ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನಿಯಮಾವಳಿಗಳಂತೆ ಮಾಲಿಕರು
ವಾಸ ಮಾಡಿಕೊಂಡಿರುವ ಮನೆಗಳಲ್ಲಿ ಕನಿಷ್ಟ 2, ಗರಿಷ್ಟ 5 ಕೊಠಡಿಗಳನ್ನು ಒದಗಿಸಿ, ಇಲಾಖೆಯ ಮಾನ್ಯತೆ ಪಡೆದರೆ ನಿಮ್ಮ ಹೋಮ್‌ಸ್ಟೇ ಸಿದ್ಧ.

ಬದಲಾಗುತ್ತಿರುವ ಭಾರತದ ಆರ್ಥಿಕತೆ:ಮಧ್ಯಮ ವರ್ಗದ ಜನರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತಿದ್ದು, ಆದಾಯ ದ್ವಿಗುಣಗೊಳ್ಳುತ್ತಿದೆ.ಈ ಸಂದರ್ಭದಲ್ಲಿ ಪ್ರವಾಸೋದ್ಯಮ – ಮರು ಚಿಂತನೆಗಾಗಿ ಬಹಳಷ್ಟು ಬದಲಾವಣೆಗಳನ್ನು ಮಾಡಬೇಕಿದೆ (ಸ್ಥಳೀಯ ಮಟ್ಟದಲ್ಲಿ ಹಾಗೂ ಸರಕಾರದ ಮಟ್ಟದಲ್ಲಿ).
*ಹತ್ತಾರು ವರುಷಗಳಿಂದ ಸರಕಾರಕ್ಕೆ ಸೂಕ್ತ ಸಮಯದಲ್ಲಿ ತೆರಿಗೆ ಪಾವತಿಸಿ ಕಾರ್ಯಾಚರಿಸುತ್ತಿರುವ ಪ್ರವಾಸೋದ್ಯಮ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ, ಜಿ.ಎಸ್‌.ಟಿ. ಗೊಂದಲಗಳ ನಿವಾರಣೆ, ಮೂಲಭೂತ ಸೌಲಭ್ಯಗಳನ್ನು ಪುನರ್‌ ರಚಿಸಲು ಸೂಕ್ತ ಆರ್ಥಿಕ ಸಹಾಯವನ್ನು ಸರಕಾರ ಧನಸಹಾಯ ಮತ್ತು ಧೀರ್ಘ‌ಕಾಲದ ಸಾಲದ ಮೂಲಕ ಪುನರ್‌ ರಚನೆಗೆ ಸಹಾಯ ನೀಡುವುದು.
* ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹೊಸ ಆವಿಷ್ಕಾರ ಕೇಂದ್ರಗಳ ಸ್ಥಾಪನೆ, ಸ್ಟಾರ್ಟ್‌ ಅಪ್ ಗಳ ಪ್ರಾಯೋಜನೆ.
*ಭಾರತ ಪ್ರಸ್ತುತ ವಿಶ್ವದ ಡಿಜಿಟಲ್‌ ಜಗತ್ತಿನಲ್ಲಿ ಮುಂಚೂಣಿಯಲ್ಲಿದೆ. ಭರದಿಂದ ಉನ್ನತಿಗೇರುತ್ತಿರುವ ಡಿಜಿಟಲ್‌ ಜ್ಞಾನವನ್ನು ಪ್ರವಾಸೋದ್ಯಮಕ್ಕೆ ಅಳವಡಿಸಲು ಸಹಕಾರ ನೀಡುವುದು.
* ವಿದ್ಯಾ ಸಂಸ್ಥೆಗಳು, ಸರಕಾರ, ಖಾಸಗಿ ಸಂಸ್ಥೆಗಳು ಮತ್ತು ತಾಂತ್ರಿಕ ನಿಪುಣರು – ಪ್ರವಾಸೋದ್ಯಮದಲ್ಲಿ ಭವಿಷ್ಯದ ಕೆಲಸದ ಅವಕಾಶಗಳಿಗೆ ಜನರನ್ನು ಸಿದ್ಧಪಡಿಸುವುದು.
* ಪ್ರಸ್ತುತವಿರುವ ವಿದ್ಯಾರ್ಹತೆ ಮತ್ತು ಕೆಲಸದ ವಾಸ್ತವತೆಯ ನಡುವೆ ಇರುವ ಅಸಮರ್ಪಕ ಹೊಂದಾಣಿಕೆಯನ್ನು ಸರಿಪಡಿಸಬೇಕು.
* ಹೋಮ್‌ಸ್ಟೇ ಪರಿಕಲ್ಪನೆಗೆ ಜಾಸ್ತಿ ಒತ್ತು ನೀಡಿ, ತನ್ಮೂಲಕ ಗ್ರಾಮೀಣ ಜನರ, ಮಹಿಳೆಯರ, ಯುವಜನರ ಆರ್ಥಿಕತೆಯನ್ನು ಭದ್ರಪಡಿಸುವ ಕೆಲಸಗಳು ಆಗಬೇಕು.
*ಪ್ರವಾಸೋದ್ಯಮ – ದೇಶದ ಅತಿ ದೊಡ್ಡ ಉದ್ಯೋಗ ಅವಕಾಶ ನೀಡುವ ಉದ್ಯಮವೆಂದು ಪರಿಗಣಿಸುವುದು. ಬಹುಶಃ ಈ ಪಟ್ಟಿ ಇನ್ನೂ ದೊಡ್ಡದಿದೆ….
ಮರವಂತೆ ನಾಗರಾಜ ಹೆಬ್ಟಾರ್‌
ಅಧ್ಯಕ್ಷರು, ಉಡುಪಿ ಜಿಲ್ಲಾ ಟ್ರಾವೆಲ್‌ ಏಜೆಂಟ್ಸ್‌ ಎಸೋಸಿಯೇಶನ್‌

ಟಾಪ್ ನ್ಯೂಸ್

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.