‘ಲೋಕಲ್ ಫೈಟ್’ಗೆ ಇಂದು ಮತದಾನ

61 ನಗರ ಸ್ಥಳೀಯ ಸಂಸ್ಥೆಗಳ 1,296 ವಾರ್ಡ್‌ಗಳಿಗೆ ಮತದಾನ

Team Udayavani, May 29, 2019, 6:00 AM IST

Voting 2

ಬೆಂಗಳೂರು: ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯದ 61 ನಗರ ಸ್ಥಳೀಯ ಸಂಸ್ಥೆಗಳಿಗೆ ಬುಧವಾರ (ಮೇ 29) ಮತದಾನ ನಡೆಯಲಿದೆ. ರಾಜ್ಯದ 22 ಜಿಲ್ಲೆಗಳ 8 ನಗರಸಭೆ, 32 ಪುರಸಭೆ ಹಾಗೂ 21 ಪಟ್ಟಣ ಪಂಚಾಯಿತಿಗಳು ಸೇರಿ 61 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 1,296 ವಾರ್ಡ್‌ಗಳಲ್ಲಿ ಮೇ 29ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ತನಕ ಮತದಾನ ನಡೆಯಲಿದೆ. 4,360 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದು, ಸುಮಾರು 14.74 ಲಕ್ಷ ಮತದಾರರು ಈ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

ಇದೇ ವೇಳೆ ತುಮಕೂರು ಮಹಾನಗರ ಪಾಲಿಕೆಯ ವಾರ್ಡ್‌ ಸಂಖ್ಯೆ 22 ಮತ್ತು ಬಿಬಿಎಂಪಿಯ ಸಗಾಯಪುರಂ ಮತ್ತು ಕಾವೇರಿಪುರಂ ವಾರ್ಡ್‌ಗಳು, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ನಗರಸಭೆಯ ವಾರ್ಡ್‌ ಸಂಖ್ಯೆ 26, ಬೆಳಗಾವಿ ಜಿಲ್ಲೆ ಸದಲಗಾ ಪುರಸಭೆಯ ವಾರ್ಡ್‌ ಸಂಖ್ಯೆ 19 ಮತ್ತು ಮುಗಳಖೋಡ ಪುರಸಭೆಯ ವಾರ್ಡ್‌ ಸಂಖ್ಯೆ 2ಕ್ಕೆ ಜರುಗಲಿರುವ ಉಪ ಚುನಾವಣೆಗೂ ಮತದಾನ ನಡೆಯಲಿದೆ.

ಇದಲ್ಲದೇ ವಿವಿಧ ಕಾರಣಗಳಿಂದ ತೆರವಾಗಿರುವ ರಾಜ್ಯದ 8 ಜಿಲ್ಲೆಗಳ ಎಂಟು ತಾಲೂಕು ಪಂಚಾಯಿತಿಗಳ 10 ಸ್ಥಾನಗಳಿಗೆ ಮತ್ತು 30 ಜಿಲ್ಲೆಗಳ 191 ಗ್ರಾಪಂಗಳ 202 ಖಾಲಿ ಸ್ಥಾನಗಳ ಉಪ ಚುನಾವಣೆಗೆ ಸಹ ಇದೇ ವೇಳೆ ಮತದಾನ ನಡೆಯಲಿದೆ.

22 ಜಿಲ್ಲೆಗಳಲ್ಲಿ ಚುನಾವಣೆ: ಉಡುಪಿ, ಬಾಗಲಕೋಟೆ, ರಾಯಚೂರು, ಕೊಪ್ಪಳ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ 2018ರ ಆಗಸ್ಟ್‌ನಲ್ಲಿ ಚುನಾವಣೆ ನಡೆಸಲಾಗಿದೆ. ರಾಮನಗರ, ಕೊಡಗು, ಬೆಳಗಾವಿ, ಕಲಬುರಗಿ ಜಿಲ್ಲೆಯ ಚುನಾವಣೆ ನಡೆಸಲು ಬಾಕಿ ಇರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಹೈಕೋರ್ಟ್‌ನಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಎರಡನೇ ಹಂತದಲ್ಲಿ ಚುನಾವಣೆ ಇರುವುದಿಲ್ಲ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಚಾಮರಾಜನಗರ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೀದರ್‌, ಬಳ್ಳಾರಿ, ಯಾದಗಿರಿ ಸೇರಿ 22 ಜಿಲ್ಲೆಗಳಲ್ಲಿ 2ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯ ಚುನಾವಣಾ ಆಯೋಗವು 2018ರ ಸೆಪ್ಟೆಂಬರ್‌ವರೆಗೆ ಅವಧಿ ಮುಕ್ತಾಯವಾಗುವ ಒಟ್ಟು 109 ನಗರ ಸ್ಥಳೀಯ ಸಂಸ್ಥೆಗಳಿಗೆ ಮೊದಲ ಹಂತದಲ್ಲಿ 2018ರ ಆಗಸ್ಟ್‌ನಲ್ಲಿ ಚುನಾವಣೆ ನಡೆಸಿತ್ತು. ಈಗ 2019ರ ಮಾರ್ಚ್‌ರಿಂದ ಜುಲೈವರೆಗೆ ಅವಧಿ ಮುಕ್ತಾಯವಾಗುವ ಒಟ್ಟು 103 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಬೆಂಗಳೂರು, ಧಾರವಾಡ, ಕಲಬುರಗಿ ಹೈಕೋರ್ಟ್‌ ಪೀಠಗಳಲ್ಲಿ ವ್ಯಾಜ್ಯಗಳಿರುವ 39 ನಗರ ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ, ಉಳಿದ 63 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಮೇ 2ರಂದು ವೇಳಾಪಟ್ಟಿ ಪ್ರಕಟಿಸಿತ್ತು.

ಈ ಮಧ್ಯೆ ನೆಲಮಂಗಲ ಪುರಸಭೆ ಮತ್ತು ಸೊರಬ ಪಟ್ಟಣ ಪಂಚಾಯಿತಿ ಚುನಾವಣೆ ಕುರಿತು ಹೈಕೋರ್ಟ್‌ ನಲ್ಲಿ ತಕರಾರು ಅರ್ಜಿ ದಾಖಲಾಗಿದ್ದ ಹಿನ್ನೆಲೆಯಲ್ಲಿ ಈ ಎರಡೂ ಕಡೆ ಜೂ.1ಕ್ಕೆ ಮತದಾನ ನಡೆಯಲಿದೆ. ಇದಲ್ಲದೇ 30 ಮಂದಿ ಅವಿರೋಧವಾಗಿ ಅಯ್ಕೆಗೊಂಡಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ 61 ನಗರ ಸ್ಥಳೀಯ ಸಂಸ್ಥೆಗಳ 1,296 ವಾರ್ಡ್‌ ಗಳಿಗೆ ಮೇ 29ರಂದು ಮತದಾನ ನಡೆಯಲಿದೆ.

ಎಲ್ಲೆಲ್ಲಿ ಚುನಾವಣೆ ?

8 ನಗರಸಭೆ: ಹಿರಿಯೂರು, ಹರಿಹರ, ಶಿಡ್ಲಘಟ್ಟ, ಸಾಗರ, ತಿಪಟೂರು, ನಂಜನಗೂಡು, ಬಸವಕಲ್ಯಾಣ, ಶಹಾಪುರ. 32 ಪುರಸಭೆ: ಆನೇಕಲ್, ದೇವನಹಳ್ಳಿ, ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು, ಬಾಗೇಪಲ್ಲಿ, ಶಿಕಾರಿಪುರ, ಪಾವಗಡ, ಕುಣಿಗಲ್, ಕೆ.ಆರ್‌. ನಗರ, ಬನ್ನೂರು, ಕಡೂರು, ಮೂಡಬಿದಿರೆ, ಮಳವಳ್ಳಿ, ಕೆ.ಆರ್‌. ಪೇಟೆ, ಶ್ರೀರಂಗಪಟ್ಟಣ, ಗುಂಡ್ಲುಪೇಟೆ, ಬಾಗೇವಾಡಿ, ಇಂಡಿ, ತಾಳಿಕೋಟೆ, ನವಲಗುಂದ, ಮುಂಡರಗಿ, ನರಗುಂದ, ಬ್ಯಾಡಗಿ, ಶಿಗ್ಗಾಂವ, ಭಟ್ಕಳ, ಭಾಲ್ಕಿ, ಹುಮ್ನಾಬಾದ್‌, ಚಿಟಗುಪ್ಪ, ಸಂಡೂರು, ಹರಪನಹಳ್ಳಿ, ಹೂವಿನಹಡಗಲಿ. 21 ಪಟ್ಟಣ ಪಂಚಾಯಿತಿ: ಮೊಳಕಾಲ್ಮೂರು, ಹೊಳಲ್ಕೆರೆ, ಶಿರಾಳಕೊಪ್ಪ, ಹೊಸನಗರ, ತುರುವೇಕೆರೆ, ಕೊಪ್ಪ, ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ, ಮೂಲ್ಕಿ, ಸುಳ್ಯ, ಆಲೂರು, ಅರಕಲಗೂಡು, ಯಳಂದೂರು, ಹನೂರು, ಕಲಘಟಗಿ, ಆಳ್ನಾವರ, ಹೊನ್ನಾವರ, ಸಿದ್ದಾಪುರ, ಔರಾದ್‌, ಕಮಲಾಪುರ.

ಎಡಗೈ ಮಧ್ಯ ಬೆರಳಿಗೆ ಶಾಯಿ

ಶಿವಮೊಗ್ಗ ಜಿಲ್ಲೆ ಹೊರತುಪಡಿಸಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರಿಗೆ ಎಡಗೈ ಮಧ್ಯ ಬೆರಳಿಗೆ ಶಾಯಿ ಹಚ್ಚಲಾಗುವುದು. ಆದರೆ, ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹತ್ತಿರದಲ್ಲೇ ಯಾವುದಾದರೂ ಚುನಾವಣೆ ನಡೆದು ಮಧ್ಯ ಬೆರಳಿಗೆ ಶಾಯಿ ಹಾಕಿದ್ದರೆ, ಬೇರೆ ಬೆರಳಿಗೆ ಶಾಯಿ ಹಾಕುವ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

61ನಗರ ಸ್ಥಳೀಯ ಸಂಸ್ಥೆಗಳು
8 ನಗರ ಸಭೆ (247 ವಾರ್ಡ್‌)
32 ಪುರಸಭೆ (734 ವಾರ್ಡ್‌)
21 ಪಟ್ಟಣ ಪಂಚಾಯಿತಿ (315 ವಾರ್ಡ್‌)
ಮತದಾರರು:14.79 ಲಕ್ಷ
ಅಭ್ಯರ್ಥಿಗಳು:4,360ನಗರ ಸ್ಥಳೀಯ ಸಂಸ್ಥೆಗಳು ಆಯಾ ಪ್ರದೇಶದ ಸ್ಥಳೀಯ ಸರ್ಕಾರಗಳಿದ್ದಂತೆ. ನಾಗರಿಕ ಮೂಲಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಈ ಸಂಸ್ಥೆಗಳ ಮೇಲಿರುತ್ತದೆ. ಪ್ರತಿಯೊಬ್ಬ ಮತದಾರ ಸಕ್ರಿಯವಾಗಿ ಭಾಗವಹಿಸಿ ತನ್ನ ಕರ್ತವ್ಯ ಮತ್ತು  ಜವಾಬ್ದಾರಿ ನಿರ್ವಹಿಸಬೇಕು. ಅತಿ ಹೆಚ್ಚು ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಬೇಕು.

● ಪಿ.ಎನ್‌. ಶ್ರೀನಿವಾಸಾಚಾರಿ, ರಾಜ್ಯ ಚು‌ನಾಣಾ ಆಯುಕ್ತ

ಟಾಪ್ ನ್ಯೂಸ್

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Jammu and Kashmir: Vehicle falls into gorge

Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

Vavar Mosque: Sabarimala pilgrims should not go to Vavar Mosque: BJP MLA

Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ

Sydney Test: Virat reminds Australian audience of sandpaper case

Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್‌ ಕೇಸ್‌ ನೆನಪು ಮಾಡಿದ ವಿರಾಟ್‌|Video

Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!

Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

BNG-winter

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

Womens-Commssion

Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!

HDK

JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್‌.ಡಿ.ಕುಮಾರಸ್ವಾಮಿ

Kalaburagi-BJP-Protest

Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್‌ ರಾಜೀನಾಮೆಗೆ ಬಿಜೆಪಿ ಆಗ್ರಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

shreyas manju’s Vishnupriya movie releasing on Feb 21

ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ

2(1

Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್‌

1(1

Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.