ಟೋಕಿಯೊ ಒಲಿಂಪಿಕ್ಸ್ : ಬೆಂಬಿಡದ ಕೋವಿಡ್ : ಐದಕ್ಕೂ ಅಧಿಕ ಕೋವಿಡ್ ಪ್ರಕರಣ ಪತ್ತೆ
Team Udayavani, Jul 20, 2021, 12:11 AM IST
ಟೋಕಿಯೊ: ಜಾಗತಿಕ ಕ್ರೀಡಾಕೂಟ ವಾದ ಒಲಿಂಪಿಕ್ಸ್ ಕೂಗಳತೆಯಷ್ಟೇ ಸನಿಹದಲ್ಲಿದೆ. ಇದರೊಂದಿಗೆ ಕೊರೊನಾ ಕೂಡ ಸವಾರಿ ಮುಂದು ವರಿಸುತ್ತಲೇ ಇದೆ. ಸೋಮವಾರ ಐದಕ್ಕೂ ಅಧಿಕ ಕೋವಿಡ್ ಪ್ರಕರಣ ಪತ್ತೆಯಾಗಿರುವುದನ್ನು ಆಯೋಜಕರು ದೃಢಪಡಿಸಿದ್ದಾರೆ. ಇದರಲ್ಲಿ ಇಬ್ಬರು ಕ್ರೀಡಾಪಟುಗಳು ಓರ್ವ ಒಲಿಂಪಿಕ್ಸ್ ಸಿಬಂದಿ ಮತ್ತು ಇಬ್ಬರು ಗುತ್ತಿಗೆದಾರರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಐವರ ಪೈಕಿ ಓರ್ವ ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ಸಂಬಂಧಿಸಿದ ವ್ಯಕ್ತಿ ಜಪಾನ್‌ನ ಚಿಬಾ ನಗರಕ್ಕೆ ಸೇರಿದವರಾಗಿದ್ದಾರೆ. ಗುತ್ತಿಗೆದಾರ ಸೈತಾಮಾದವರು. ಮತ್ತೋರ್ವ ಪತ್ರಕರ್ತ. ಕೊಕೊ ಗಾಫ್ಗೆ ಕೊರೊನಾ ಅಮೆರಿಕದ ಯುವ ಟೆನಿಸ್ ಆಟಗಾರ್ತಿ ಕೊಕೊ ಗಾಫ್ ಕೊರೊನಾ ಸೋಂಕಿನಿಂದಾಗಿ ಒಲಿಂಪಿಕ್ಸ್ ನಿಂದ ದೂರ ಉಳಿಯಲಿದ್ದಾರೆ.
“ದುರದೃಷ್ಟವಶಾತ್ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಬಗ್ಗೆ ಬೇಸರವಿದೆ. ದೇಶವನ್ನು ಪ್ರತಿನಿಧಿಸುವ ಅವಕಾಶ ಕೊರೊನಾದಿಂದ ಕೈತಪ್ಪಿದೆ. ಅಮೆರಿಕವನ್ನು ಪ್ರತಿನಿಧಿಸುವ ನಮ್ಮ ಒಲಿಂಪಿಕ್ಸ್ ಕುಟುಂಬಕ್ಕೆ ನನ್ನ ಹಾರೈಕೆಗಳು. ಅತ್ಯುತ್ತಮ ಪ್ರದರ್ಶನ ನೀಡಿ ಹೆಚ್ಚು ಪದಕಗಳೊಂದಿಗೆ ಹಾಗೂ ಸುರಕ್ಷಿತವಾಗಿ ದೇಶಕ್ಕೆ ಮರಳಿ’ ಎಂದು ಗಾಫ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ :ಮನೆಯ ಯಜಮಾನನಿಂದಲೇ ಕಳ್ಳತನ : ಘಟನೆ ನಡೆದ ಕೆಲವೇ ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು
ಅಮೆರಿಕ ಜಿಮ್ನಾಸ್ಟ್‌ಗೆ ಪಾಸಿಟಿವ್
ಅಮೆರಿಕ ತಂಡದ ಮಹಿಳಾ ಜಿಮ್ನಾಸ್ಟ್ ಒಬ್ಬರಿಗೆ ಒಲಿಂಪಿಕ್ ತರಬೇತಿ ಶಿಬಿರದಲ್ಲಿ ಕರೋನ ವೈರಸ್ ಸೊಂಕು ತಗುಲಿದೆ ಮತ್ತು ತಂಡದ ಇನ್ನೊಬ್ಬ ಸದಸ್ಯ ರನ್ನು ಐಸೋಲೇಶನ್‌ನಲ್ಲಿ ಇರಿಸಲಾಗಿದೆ ಎಂದು ಜಪಾನಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೀಚ್ ವಾಲಿಬಾಲ್‌ಗೂ ಆತಂಕ
ಒಲಿಂಪಿಕ್ಸ್ ಬೀಚ್ ವಾಲಿಬಾಲ್‌ನಲ್ಲಿ ಸ್ಪರ್ಧಿಸಲಿ ರುವ ಜೆಕ್ ತಂಡಕ್ಕೆ ಕೊರೊನಾ ಆತಂಕ ಎದುರಾಗಿದೆ. ಆಂಡ್ರೆಜ್ ಪೆರುಸಿಕ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕ್ರೀಡಾಗ್ರಾಮಕ್ಕೆ ಬಂದ ಬಳಿಕ ನಡೆಸಲಾದ ಕೋವಿಡ್ ಟೆಸ್ಟ್ ವೇಳೆ ಇವರಲ್ಲಿ ಪಾಸಿಟಿವ್ ಫಲಿತಾಂಶ ಕಂಡುಬಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಗಾಯದಿಂದ ಹಿಂದೆ ಸರಿದ ಇಟಲಿಯ ಮ್ಯಾಟೊ ಬೆರೆಟಿನಿ
ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದ ಇಟಲಿಯ ಮ್ಯಾಟೊ ಬೆರೆಟಿನಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿ¨ªಾರೆ. ಮಾಂಸಖಂಡದಲ್ಲಿ ಸೆಳೆತ ಕಾಣಿಸಿಕೊಂಡಿರುವುದರಿಂದ ಅವರು ಟೋಕಿಯೋಗೆ ಹೋಗುವುದಿಲ್ಲ ಎಂದು ಇಟಾಲಿಯನ್ ಒಲಿಂಪಿಕ್ಸ್ ಸಮಿತಿ ತಿಳಿಸಿದೆ.
ವಿಶ್ವ ರ್‍ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿರುವ ಬೆರೆಟಿನಿ ವಿಂಬಲ್ಡನ್ ಫೈನಲ್ ಪ್ರವೇಶಿಸಿದ್ದ ಇಟಲಿಯ ಮೊದಲ ಆಟಗಾರನೆನಿಸಿದ್ದರು. ಅಲ್ಲಿ ನೊವಾಕ್ ಜೊಕೋವಿಕ್ ಎದುರು ಸೋತಿದ್ದರು.
ಭಾರತೀಯರ ಅಭ್ಯಾಸ ಆರಂಭ
ಒಲಿಂಪಿಕ್ಸ್ ಇತಿಹಾಸದಲ್ಲೇ ಗರಿಷ್ಠ ಪದಕ ಸಾಧನೆಯ ಗುರಿಯನ್ನು ಹೊತ್ತು ಟೋಕಿಯೊ ತಲುಪಿದ ಭಾರತದ ಮೊದಲ ಕ್ರೀಡಾ ತಂಡ ಸೋಮವಾರ ಅಭ್ಯಾಸ ಆರಂಭಿಸಿದೆ.
ಆರ್ಚರಿಗಳಾದ ಅತನು ದಾಸ್, ದೀಪಿಕಾ ಕುಮಾರಿ, ಟೆಬಲ್ ಟೆನಿಸಗರಾದ ಜಿ. ಸಥಿಯನ್, ಶರತ್ ಕಮಲ್, ಶಟ್ಲರ್ ಪಿ.ವಿ. ಸಿಂಧು, ಸಾಯಿ ಪ್ರಣೀತ್, ಜಿಮ್ನಾಸ್ಟ್ ಪ್ರಣತಿ ನಾಯಕ್ ಮೊದಲಾದವರು ಮೊದಲ ಸುತ್ತಿನ ಅಭ್ಯಾಸ ನಡೆಸಿದರು.
ಒಲಿಂಪಿಕ್ಸ್ ಸುರಕ್ಷಿತ: ತಜ್ಞರ ಅಭಿಪ್ರಾಯ
ಕೋವಿಡ್ ಪ್ರಕರಣಗಳು ನಿತ್ಯವೂ ವರದಿಯಾಗುತ್ತಿದ್ದರೂ ಒಲಿಂಪಿಕ್ಸ್ ನಡೆಯುವ ಸ್ಥಳ ಸುರಕ್ಷಿತ ಎಂದು ಆರೋಗ್ಯ ತಜ್ಞ ಬ್ರಯಾನ್ ಮೆಕ್‌ಲೊಸ್ಕಿ ಅಭಿಪ್ರಾಯಪಟ್ಟಿದ್ದಾರೆ.
“ಸದ್ಯ ವರದಿಯಾಗುತ್ತಿರುವ ಪ್ರಕರಣಗಳು ನಿರೀಕ್ಷಿತ. ಪ್ರಕರಣಗಳನ್ನು ಆದಷ್ಟು ತಹಬದಿಗೆ ತರುವುದಕ್ಕಾಗಿ ನಿತ್ಯವೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಸೋಂಕು ಬೇಗನೆ ಪತ್ತೆಯಾಗುತ್ತಿದ್ದು ಇತರ ಕ್ರೀಡಾಪಟುಗಳಿಂದ ಅವರನ್ನು ದೂರ ಇರಿಸಲು ಸಾಧ್ಯವಾಗುತ್ತಿದೆ’ ಎಂದು ಮೆಕ್‌ಲೊಸ್ಕಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.