ಟೋಕಿಯೊ ಒಲಂಪಿಕ್ಸ್ : ತಾರೆಯರ ಅಂಗಳದಲ್ಲಿ ಹೊಳಪೇ ನಾಪತ್ತೆ!
Team Udayavani, Jul 21, 2021, 6:40 AM IST
ಒಲಿಂಪಿಕ್ಸ್ ಗೆ ಗೈರಾಗಿದ್ದಾರೆ ಫೆಡರರ್, ಸೆರೆನಾ ವಿಲಿಯಮ್ಸ್, ನೇಮಾರ್‌ರಂತಹ ತಾರೆಯರು.
ರೋಜರ್ ಫೆಡರರ್‌ಗೆ ಗಾಯ
ಟೆನಿಸ್ ಜಗತ್ತಿನ ದಂತಕಥೆ, 20 ಬಾರಿ ಗ್ರ್ಯಾನ್‌ಸ್ಲಾéಮ್ ಗೆದ್ದಿರುವ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್, ವಿಂಬಲ್ಡನ್‌ನಲ್ಲಿ ಆಡಿದ ವೇಳೆ ತನಗೆ ಗಾಯವಾಗಿದೆ, ಆದ್ದರಿಂದ ಆಡುವುದಿಲ್ಲವೆಂದಿದ್ದಾರೆ.
ಸೆರೆನಾ ಆಡಲ್ಲ ಅಷ್ಟೇ
ಮಹಿಳಾ ಟೆನಿಸ್‌ನ ಅನಿಭಿಷಿಕ್ತ ರಾಣಿ, 23 ಬಾರಿ ಸಿಂಗಲ್ಸ್ ಗ್ರ್ಯಾನ್‌ಸ್ಲಾéಮ್ ಗೆದ್ದಿರುವ ಸೆರೆನಾ ವಿಲಿಯಮ್ಸ್ ಈ ಬಾರಿ ತಾನು ಅಮೆರಿಕವನ್ನು ಒಲಿಂಪಿಕ್ಸ್ ನಲ್ಲಿ ಪ್ರತಿನಿಧಿಸುವುದಿಲ್ಲ ಎಂದಿದ್ದಾರೆ. ತಾನು ಪಾಲ್ಗೊಳ್ಳದಿರುವುದಕ್ಕೆ ಹಲವು ಕಾರಣಗಳಿವೆ, ಒಟ್ಟಾರೆ ಬೇಡೆವೆನಿಸಿದೆ ಎಂದಿದ್ದಾರೆ.
ನಡಾಲ್‌ಗೆ ಭವಿಷ್ಯದ ಚಿಂತೆ
ಫ್ರೆಂಚ್ ಓಪನ್ ಟೆನಿಸ್‌ನಲ್ಲಿ ಆಘಾತಕಾರಿಯಾಗಿ ಸೋತ ಅನಂತರ ಸ್ಪೇನಿನ ರಫೆಲ್ ನಡಾಲ್, ತಾನು ವಿಂಬಲ್ಡನ್, ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲ್ಲ ಎಂದರು. ತನಗೆ ವೃತ್ತಿಜೀವನದಲ್ಲಿ ದೀರ್ಘಕಾಲ ಮುಂದುವರಿಯುವುದು ಮುಖ್ಯ, ಸದ್ಯ ತನ್ನ ದೇಹ ಸ್ಪಂದಿಸುತ್ತಿಲ್ಲ ಎಂಬ ಕಾರಣ ನೀಡಿ ಟೋಕಿಯೊದಿಂದ ಹಿಂದೆ ಸರಿದಿದ್ದಾರೆ.
ನೇಮಾರ್‌ಗೆ ಕ್ಲಬ್‌ನಿಂದ ಅನುಮತಿಯಿಲ್ಲ!
ಬ್ರಝಿಲ್ ಫುಟ್‌ಬಾಲ್ ತಂಡದ ನಾಯಕ ಒಲಿಂಪಿಕ್‌ನಲ್ಲಿ ಸ್ಪರ್ಧಿಸುತ್ತಿಲ್ಲ. ಕೊಪಾ ಅಮೆರಿಕ ಫುಟ್‌ಬಾಲ್ ಕೂಟದಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದ ನೇಮಾರ್‌ಗೆ, ಅವರ ಫುಟ್‌ಬಾಲ್ ಕ್ಲಬ್ ಪಿಎಸ್‌ಜಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿಲ್ಲ. ಇದೇ ದಾರಿಯನ್ನು ಫ್ರಾನ್ಸ್‌ನ ಕಿಲಿಯನ್ ಎಂಬಪೆ, ಈಜಿಪ್ಟ್ ಮೊಹಮ್ಮದ್ ಸಲಾಹ್ ಕೂಡ ಅನುಸರಿಸಿದ್ದಾರೆ.
ಕ್ಯಾರೋಲಿನಾ ಮರಿನ್‌ಗೆ ಗಾಯ
ಸ್ಪೇನಿನ ಖ್ಯಾತ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಕ್ಯಾರೋಲಿನಾ ಮರಿನ್ ಗಾಯವಾಗಿದೆ. ಮಂಡಿಯಲ್ಲೂ ಸಮಸ್ಯೆಯಾಗಿದೆ. ಇದೇ ಕಾರಣದಿಂದ ಈಕೆ ತಾನಾಡುವುದಿಲ್ಲ ಎಂದಿದ್ದಾರೆ.
ಹಿಮಾದಾಸ್‌ಗೂ ಗಾಯವೇ ಅಡ್ಡಿ
ಅಸ್ಸಾಂನ ಹಿಮಾದಾಸ್‌ಗೆ ಕೇವಲ 21 ವರ್ಷ. ಈಕೆ 20 ವಯೋಮಿತಿಯೊಳಗಿನ ವಿಶ್ವ ಚಾಂಪಿಯನ್‌ಶಿಪ್‌ನ 400 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದಾರೆ. ಹಾಗೆಯೇ 2018ರ ಏಷ್ಯಾಡ್‌ನ ಮಿಶ್ರ ಮತ್ತು ಮಹಿಳಾ ರಿಲೇಯಲ್ಲಿ 2 ಚಿನ್ನ ಗೆದ್ದಿದ್ದಾರೆ. ಒಲಿಂಪಿಕ್ಸ್‌ನಲ್ಲೂ
ಇವರ ಬಗ್ಗೆ ಭಾರೀ ನಿರೀಕ್ಷೆಗಳಿದ್ದವು. ಆದರೆ ರಾಷ್ಟ್ರೀಯ ಕ್ರೀಡಾಕೂಟವೊಂದರಲ್ಲಿ ಆಡುವಾಗ ಮಂಡಿನೋವಿಗೆ ತುತ್ತಾಗಿ ತೀವ್ರ ನಿರಾಶೆಗೊಳಗಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.