ಶೂಟಿಂಗ್: ಮನು ಭಾಕರ್, ರಾಹಿ ಸರ್ನೋಬತ್ ಹೋರಾಟ ಅಂತ್ಯ
Team Udayavani, Jul 30, 2021, 10:22 PM IST
ಟೋಕಿಯೊ: ಚೊಚ್ಚಲ ಒಲಿಂಪಿಕ್ಸ್‌ನಲ್ಲೇ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಶೂಟರ್‌ಗಳಾದ ಮನು ಭಾಕರ್ ಹಾಗೂ ರಾಹಿ ಸರ್ನೋಬತ್ ಶುಕ್ರವಾರವೂ ಗುರಿ ತಪ್ಪಿ ಪದಕ ರೇಸ್‌ನಿಂದ ಹೊರಗುಳಿದರು.
ವನಿತೆಯರ 10 ಮೀ. ಏರ್ ಪಿಸ್ತೂಲ್ ವಿಭಾಗ ದಲ್ಲಿ ನಿರಾಸೆ ಅನುಭವಿಸಿದ್ದ ಮನು ಭಾಕರ್, 25 ಮೀ. ಪಿಸ್ತೂಲ್ ಸ್ಪರ್ಧೆಯ ದ್ವಿತೀಯ ಹಂತದ ರ್ಯಾಪಿಡ್ ರೌಂಡ್ ಅರ್ಹತಾ ಸುತ್ತಿನಲ್ಲೂ ಹಿನ್ನಡೆ ಅನುಭವಿಸಿದರು. 582 ಅಂಕ ಪಡೆದು 15ನೇ ಸ್ಥಾನಿಯಾಗಿ ಫೈನಲ್ ರೇಸ್‌ನಿಂದ ಹೊರಬಿದ್ದರು. ಇದೇ ಸುತ್ತಿನಲ್ಲಿದ್ದ ರಾಹಿ ಸರ್ನೋಬತ್ ಇನ್ನಷ್ಟು ಕೆಳ ಹಂತಕ್ಕೆ ಕುಸಿದರು. 573 ಅಂಕ ಸಂಪಾದಿಸಿ 32ನೇ ಸ್ಥಾನಿಯಾದರು.
ಈ ಫಲಿತಾಂಶದೊಂದಿಗೆ ಮನು ಮತ್ತು ರಾಹಿ ಟೋಕಿಯೋದಿಂದ ಬರಿಗೈಯಲ್ಲಿ ಮರಳುವ ಸಂಕಟಕ್ಕೆ ಸಿಲುಕಿದರು. ಇವರಲ್ಲಿ ಮನು ಭಾಕರ್ ಟೋಕಿಯೊ ಗೇಮ್ಸ್‌ನ ಮೂರೂ ವಿಭಾಗಗಳಲ್ಲಿ ಪಾಲ್ಗೊಂಡ ಭಾರತದ ಏಕೈಕ ಶೂಟರ್ ಆಗಿದ್ದರು.
ಇದನ್ನೂ ಓದಿ :ದೆಹಲಿಗೆ ಹೋದ ಮಾತ್ರಕ್ಕೆ ಮಂತ್ರಿ ಆಗಲ್ಲ: ರೇಣುಕಾಚಾರ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.