ಟೋಕಿಯೊ ಒಲಿಂಪಿಕ್ಸ್ : ಪಿವಿ ಸಿಂಧುಗೆ ಕಂಚಿನ ಪದಕ : ಪ್ರಧಾನಿ ಅಭಿನಂದನೆ
Team Udayavani, Aug 1, 2021, 6:00 PM IST
ಟೋಕಿಯೊ: ಟೋಕಿಯೊ ಒಲಂಪಿಕ್ಸ್ ನ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ ವಿಭಾಗದಲ್ಲಿ ಭಾರತದ ಖ್ಯಾತ ಆಟಗಾರ್ತಿ ಪಿವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ.
ರವಿವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಸಿಂಧು ಚೀನಾದ ಹೀ ಬಿಂಗ್ಜಿಯಾವೊ ವಿರುದ್ಧ 21-13, 21-15 ನೇರ ಸೆಟ್ ಗಳಿಂದ ಗೆಲುವು ಸಾಧಿಸಿದರು.
ಇದರೊಂದಿಗೆ ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಎರಡನೇ ಪದಕ ಬಂದಂತಾಗಿದೆ. ಸಿಂಧು ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ವೇಟ್ ಲಿಫ್ಟಿಂಗ್ ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದರು. ಇದೀಗ ಸಿಂಧು ಎರಡನೇ ಪದಕ ಗೆದ್ದು ಭಾರತದ ಕೀರ್ತಿ ಎತ್ತಿ ಹಿಡಿದಿದ್ದಾರೆ.
ಇದರೊಂದಿಗೆ ಸಿಂಧು ಒಲಿಂಪಿಕ್ಸ್ ನಲ್ಲಿ ಸತತ ಎರಡನೇ ಬಾರಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿದ ಸಿಂಧು ಎದುರಾಳಿಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾದರು ಹಾಗಾಗಿ ಮೊದಲ ಸೆಟ್ ನಲ್ಲಿ 21-13 ಅಂತರಗಳಿಂದ ಗೆಲುವು ಸಾಧಿಸಿದರು.
ದ್ವಿತೀಯ ಸೆಟ್ ನಲ್ಲೂ ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ ಸಿಂಧುಗೆ ಎದುರಾಳಿಯೂ ಅಷ್ಟೇ ಪ್ರಬಲವಾಗಿ ಆಟವಾಡಿದ ಪರಿಣಾಮ ಪಂದ್ಯ ರೋಚಕತೆಗೆ ತಲುಪಿತು ಆದರೆ ಕೊನೆಯಲ್ಲಿ ಹಿಡಿತ ಸಾಧಿಸಿದ ಸಿಂಧು ಎದುರಾಳಿಯನ್ನು 21-15ರ ಅಂತರದಿಂದ ಗೆದ್ದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
We are all elated by the stellar performance by @Pvsindhu1. Congratulations to her on winning the Bronze at @Tokyo2020. She is India’s pride and one of our most outstanding Olympians. #Tokyo2020 pic.twitter.com/O8Ay3JWT7q
— Narendra Modi (@narendramodi) August 1, 2021
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.