ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

Team Udayavani, Jul 23, 2021, 11:20 PM IST

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಟೋಕಿಯೊ: ಭಾರತದ ಸ್ಟಾರ್‌ ಆರ್ಚರ್‌ ದೀಪಿಕಾ ಕುಮಾರಿ ವನಿತೆಯರ ವೈಯಕ್ತಿಕ ರ್‍ಯಾಂಕಿಂಗ್‌ ರೌಂಡ್‌ನ‌ಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ ಸುಲಭ ಎದುರಾಳಿ ದೊರೆತಿದ್ದಾರೆ.

ರ್‍ಯಾಂಕಿಂಗ್‌ ಸುತ್ತಿನಲ್ಲಿ ಕೊರಿಯನ್ನರೇ ಪ್ರಾಬಲ್ಯ ಮೆರೆದರು. ಮೊದಲ 3 ಸ್ಥಾನವನ್ನು ಇವರೇ ಆಕ್ರಮಿಸಿಕೊಂಡರು. ಮೊದಲ ಒಲಿಂಪಿಕ್ಸ್‌ ಕಾಣುತ್ತಿರುವ 20 ವರ್ಷದ ಆ್ಯನ್‌ ಸಾನ್‌ 680 ಅಂಕಗಳೊಂದಿಗೆ ಅಗ್ರಸ್ಥಾನಿಯಾದರು. ವಿಶ್ವದ ನಂ.1 ಖ್ಯಾತಿಯ ದೀಪಿಕಾ 663 ಅಂಕ ಸಂಪಾದಿಸಿದರು. ಅರ್ಧ ಹಾದಿ ಕ್ರಮಿಸುವಾಗ (36 ಬಾಣ) ದೀಪಿಕಾ 334 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದರು.

ಮೊದಲ ಸುತ್ತಿನ ಸ್ಪರ್ಧೆಯಲ್ಲಿ ದೀಪಿಕಾ ಭೂತಾನ್‌ನ 193ನೇ ರ್‍ಯಾಂಕಿಂಗ್‌ ಆರ್ಚರ್‌ ಕರ್ಮಾ ವಿರುದ್ಧ ಸ್ಪರ್ಧೆಗೆ ಇಳಿಯಲಿದ್ದಾರೆ. ರ್‍ಯಾಂಕಿಂಗ್‌ ಸುತ್ತಿನಲ್ಲಿ ಕರ್ಮಾ 56ನೇ ಸ್ಥಾನ ಪಡೆದಿದ್ದರು.

ದೀಪಿಕಾ ಕ್ವಾರ್ಟರ್‌ ಫೈನಲ್‌ ಪ್ರವೇಶಿದರೆ ಅಲ್ಲಿ ಆ್ಯನ್‌ ಸಾನ್‌ ಎದುರಾಗುವ ಸಾಧ್ಯತೆ ಇದೆ. ಇವರಿಬ್ಬರು ಒಮ್ಮೆಯಷ್ಟೇ ಮುಖಾಮುಖೀಯಾಗಿದ್ದರು. ಅದು ಇಲ್ಲೇ ನಡೆದ 2019ರ ಒಲಿಂಪಿಕ್‌ ಟೆಸ್ಟ್‌ ಸ್ಪರ್ಧೆಯಾಗಿತ್ತು. ಇದರಲ್ಲಿ ದೀಪಿಕಾಗೆ ಹಿನ್ನಡೆಯಾಗಿತ್ತು.

ಇದನ್ನೂ ಓದಿ :ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಪುರುಷರಿಗೂ 9ನೇ ಸ್ಥಾನ
ಪುರುಷರ ಟೀಮ್‌ ಹಾಗೂ ಮಿಕ್ಸೆಡ್‌ ರ್‍ಯಾಂಕಿಂಗ್‌ ಸುತ್ತಿನಲ್ಲಿ ಭಾರತ 9ನೇ ಸ್ಥಾನಿಯಾಗಿದೆ. ಅಚ್ಚರಿಯೆಂದರೆ, ಮೊದಲ ಒಲಿಂಪಿಕ್ಸ್‌ ಕಾಣುತ್ತಿರುವ ಪ್ರವೀಣ್‌ ಜಾಧವ್‌ ಅನುಭವಿ ಅತನು ದಾಸ್‌ ಮತ್ತು ತರುಣ್‌ದೀಪ್‌ ರಾಯ್‌ ಅವರನ್ನು ಮೀರಿ ನಿಂತದ್ದು. ಆದರೆ ಪ್ರಧಾನ ಸುತ್ತಿನಲ್ಲಿ ಎರಡೂ ವಿಭಾಗಗಳಿಗೆ ಕಠಿನ ಸವಾಲು ಎದುರಾಗದೆ.

ಮಿಶ್ರ ತಂಡಕ್ಕೆ 8ನೇ ರ್‍ಯಾಂಕಿಂಗ್‌ನ ಚೈನೀಸ್‌ ತೈಪೆ ಎದುರಾಗಿದೆ. ಬಳಿಕ ಕ್ವಾರ್ಟರ್‌ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಕೊರಿಯಾ ಕಾದು ಕುಳಿತಿದೆ.

ಪುರುಷರ ತಂಡಕ್ಕೆ ಆರಂಭದಲ್ಲಿ ಕಜಾಕ್‌ಸ್ಥಾನ ಎದುರಾಗಲಿದ್ದು, ಕ್ವಾರ್ಟರ್‌ ಫೈನಲ್‌ನಲ್ಲಿ ಕೊರಿಯಾ ಸಿಗಲಿದೆ. ಕೊರಿಯಾಕ್ಕೆ ಮೊದಲ ಸುತ್ತಿನ ಬೈ ಸಿಕ್ಕಿದೆ.

ವೈಯಕ್ತಿಕ ವಿಭಾಗದಲ್ಲಿ ಮೂರೂ ಬಿಲ್ಗಾರರು 30ರ ಆಚೆಯ ಸ್ಥಾನ ಪಡೆದು ನಿರಾಸೆ ಮೂಡಿಸಿದರು. ಪ್ರವೀಣ್‌ ಜಾಧವ್‌ 31, ಅತನು ದಾಸ್‌ 35 ಹಾಗೂ ತರುಣ್‌ದೀಪ್‌ ರಾಯ್‌ 37ನೇ ಸ್ಥಾನ ಪಡೆದರು. ಈ ಮೂವರು ಕ್ರಮವಾಗಿ 656, 653 ಹಾಗೂ 652 ಅಂಕ ಸಂಪಾದಿಸಿದರು.

ಮಿಕ್ಸೆಡ್‌ನ‌ಲ್ಲಿ ದೀಪಿಕಾ-ಪ್ರವೀಣ್‌
ಪುರುಷರ ವಿಭಾಗದಲ್ಲಿ 31ನೇ ಸ್ಥಾನ ಪಡೆದ ಪ್ರವೀಣ್‌ ಜಾಧವ್‌ ಮಿಕ್ಸೆಡ್‌ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ ಜತೆ ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಅತನು ದಾಸ್‌ ಈ ವಿಭಾಗದಲ್ಲಿ ದೀಪಿಕಾ ಜೋಡಿ ಎಂದು ನಿರ್ಧರಿಸಲಾಗಿತ್ತಾದರೂ ಶುಕ್ರವಾರದ ಸ್ಪರ್ಧೆಯಲ್ಲಿ ಪ್ರವೀಣ್‌ಗಿಂತ ಕೆಳಸ್ಥಾನ ಸಂಪಾದಿಸಿದ ಕಾರಣ ಈ ಅವಕಾಶದಿಂದ ವಂಚಿತರಾದರು.

ಟಾಪ್ ನ್ಯೂಸ್

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.