ಶಿಶುವಿನ ಚಿಕಿತ್ಸೆಗೆ ಟೋಕ್ಯೋ ಪದಕ ಹರಾಜು!
Team Udayavani, Aug 18, 2021, 11:00 PM IST
ವಾರ್ಸಾ (ಪೋಲೆಂಡ್): ಇತ್ತೀಚೆಗೆ ಟೋಕ್ಯೋ ಒಲಿಂಪಿಕ್ಸ್ ವನಿತಾ ಜಾವೆಲಿನ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಪೋಲೆಂಡ್‌ನ ಮರಿಯಾ ಆಂಡ್ರೆಸಿಕ್ ತಮ್ಮ ಪದಕವನ್ನು ಹರಾಜು ಹಾಕಿದ್ದಾರೆ. ಎಂಟು ತಿಂಗಳ ಮಗುವಿನ ಹೃದಯ ಚಿಕಿತ್ಸೆಗಾಗಿ ಆರ್ಥಿಕ ನೆರವು ಒದಗಿಸುವ ಸಲುವಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದರು. ಈ ಪದಕ 125,000 ಡಾಲರ್ ಮೊತ್ತಕ್ಕೆ ಹರಾಜಾಯಿತು.
ಇದನ್ನು ಪೋಲೆಂಡಿನ ಖ್ಯಾತ ಝಪ್ಕಾ ಕನ್ವೇನಿಯನ್ಸ್ ಸ್ಟೋರ್ ಕಂಪೆನಿ’ ಖರೀದಿಸಿತು. ಆದರೆ ಬಿಡ್ ಗೆದ್ದ ಬಳಿಕ ಅದು ಮಾನವೀಯತೆ ಮೆರೆಯಿತು. ಈ ಪದಕವನ್ನು ತಾವೇ ಇರಿಸಿಕೊಳ್ಳುವಂತೆ ಮರಿಯಾ ಆಂಡ್ರೆಸಿಕ್‌ಗೆ ಸೂಚಿಸಿ, ಸ್ಟಾನ್‌ಫೋರ್ಡ್ ಯುನಿವರ್ಸಿಟಿ ಹಾಸ್ಪಿಟಲ್’ನಲ್ಲಿ ಮಗುವಿನ ಶಸ್ತ್ರಚಿಕಿತ್ಸೆಗೆ ತಾನು ವ್ಯವಸ್ಥೆ ಮಾಡುವುದಾಗಿ ಹೇಳಿತು!
ಇದನ್ನೂ ಓದಿ:ಕಲಾಪದಿಂದ ಪಲಾಯನ ಮಾಡಿದ ಕಾಂಗ್ರೆಸ್‍ನಿಂದ ಜನತೆಯ ದಾರಿ ತಪ್ಪಿಸುವ ವ್ಯರ್ಥ ಪ್ರಯತ್ನ
ರಿಯೋದಲ್ಲಿ 4ನೇ ಸ್ಥಾನ:
ಮರಿಯಾ ಆಂಡ್ರೆಸಿಕ್ 64.61 ಮೀ. ದೂರದ ಸಾಧನೆಯೊಂದಿಗೆ ಈ ಬೆಳ್ಳಿ ಪದಕ ಜಯಿಸಿದ್ದರು. ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಆಂಡ್ರೆಸಿಕ್ 4ನೇ ಸ್ಥಾನ ತಲುಪಿ ನಿರಾಸೆ ಅನುಭವಿಸಿದ್ದರು. ಮೇ ತಿಂಗಳಲ್ಲಿ 71.40 ಮೀ. ಸಾಧನೆಯೊಂದಿಗೆ ವಿಶ್ವದಾಖಲೆ ನಿರ್ಮಿಸಿದರೂ ಟೋಕ್ಯೋ ದಲ್ಲಿ ಈ ಫಾರ್ಮ್ ಕಂಡುಕೊಳ್ಳಲು ವಿಫಲರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.