Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

ಇಂದು ವಿಶ್ವ ಪ್ರವಾಸೋದ್ಯಮ ದಿನ; ಏಕಕಾಲದಲ್ಲಿ 16 ಮಂದಿ ಕುಳಿತು ಆಹಾರ ಸೇವಿಸುವ ಅವಕಾಶ

Team Udayavani, Sep 27, 2024, 7:50 AM IST

Sky-dia

ಪಣಂಬೂರು ಬೀಚ್‌ ಬಳಿಕ ಕುಂದಾಪುರದ ತ್ರಾಸಿಯ ಕಡಲ ಕಿನಾರೆಯು ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ (ಗಗನದಲ್ಲಿ ಊಟ) ತಾಣ ವಾಗಲಿದೆ. ನೆಲ ಮಟ್ಟದಿಂದ ಸುಮಾರು 60-70 ಅಡಿ ಎತ್ತರದಲ್ಲಿ ತ್ರಾಸಿ- ಮರವಂತೆ ಕಡಲು- ಸೌಪರ್ಣಿಕಾ ನದಿ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಅತ್ಯದ್ಭುತ ಸೊಬಗನ್ನು ಕಣ್ತುಂಬಿಕೊಳ್ಳುವ ಜತೆಗೆ, ರುಚಿಕ ರವಾದ ತಿನಿಸುಗಳನ್ನು ಸವಿ ಯುವ ಅವಕಾಶ ಇದಾಗಿದೆ.

ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಯಿಂದ ಕಾರ್ಯಾದೇಶ ನೀಡ ಲಾಗಿದ್ದು, ಅದಕ್ಕೆ ಬೇಕಾದ ಅನುಮತಿ, ಸುರಕ್ಷೆ ಕ್ರಮಗಳ ಪರಿಶೀಲನೆಯೂ ಆಗಿದೆ. ಇದಕ್ಕೆ ಅಗತ್ಯ ಸಿದ್ಧತೆಗಳೂ ನಡೆಯು ತ್ತಿದ್ದು, 15-20 ದಿನಗಳೊಳಗೆ ಈ “ಸ್ಕೈ ಡೈನಿಂಗ್‌’ ಆರಂಭಗೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ತ್ರಾಸಿ – ಮರವಂತೆ ಬೀಚ್‌ ಮತ್ತಷ್ಟು ಆಕರ್ಷಣೀಯವಾಗಲಿದೆ.

ಏನಿದು ಸ್ಕೈ ಡೈನಿಂಗ್‌?
ಟೀಮ್‌ ಮಂತ್ರಾಸ್‌ ಇಂಟರ್‌ನ್ಯಾಶನಲ್‌ ಸಂಸ್ಥೆಯು ಸ್ಕೈ ಡೈನಿಂಗ್‌ ಯೋಜನೆಯನ್ನು ನಿರ್ವಹಿಸಲಿದೆ. ಪಾರದರ್ಶಕ ಗಾಜು ಮತ್ತು ಕಬ್ಬಿಣದಿಂದ ನಿರ್ಮಿಸಲಾದ ಕ್ಯಾಬಿನ್‌ ಅನ್ನು ಕ್ರೇನ್‌ ಬಳಸಿ ಸುಮಾರು 60-70 ಅಡಿ ಎತ್ತರಕ್ಕೆ ಏರಿಸಲಾಗುತ್ತದೆ. ಏಕಕಾಲದಲ್ಲಿ 16 ಮಂದಿ ಕುಳಿತು ಆಹಾರ ಸೇವಿಸುವ ಅವಕಾಶವಿದೆ. ಇಷ್ಟು ಎತ್ತರದಿಂದ ಕಡಲು, ಹೆದ್ದಾರಿ, ನದಿಯ ವಿಹಂಗಮ ನೋಟವನ್ನು ಸವಿಯುವುದರ ಜತೆಗೆ ಸಂಗೀತ ವನ್ನು ಆಸ್ವಾದಿಸಿಕೊಳ್ಳಬಹುದು. ಅಡುಗೆ ಮತ್ತು ತಾಂತ್ರಿಕ ಸಿಬಂದಿಗೆ ಪ್ರತ್ಯೇಕ ಕ್ಯಾಬಿನ್‌ ಇರಲಿದೆ. ಸ್ಕೈ ಡೈನಿಂಗ್‌ ಇತ್ತೀಚೆಗಿನ ದಿನಗಳಲ್ಲಿ ದೇಶಾದ್ಯಂತ ಜನಪ್ರಿಯತೆ ಗಳಿಸುತ್ತಿದ್ದು, ರಾಜ್ಯದಲ್ಲಿ ಇನ್ನಷ್ಟೇ ಪ್ರಸಿದ್ಧಿ ಪಡೆಯಬೇಕಿದೆ.

ತ್ರಾಸಿ – ಮರವಂತೆ ಬೀಚ್‌ ರಾಜ್ಯದ ಅತ್ಯಂತ ಸುಂದರ ಹಾಗೂ ವಿಶಿಷ್ಟವಾದ ಕಡಲ ತೀರ. ಸ್ಕೈ ಡೈನಿಂಗ್‌ ಮೂಲಕ ಅಪರೂಪವಾದ ವರಾಹ ಶ್ರೀ ಮಹಾ ರಾಜ ಸ್ವಾಮಿ ದೇವಸ್ಥಾನ, ಮೀನುಗಾರಿಕೆ ದೋಣಿಗಳು, ಹೊರ ಬಂದರು, ಮರವಂತೆ ಕುದ್ರುವನ್ನು ಕೂಡ ವೀಕ್ಷಿಸ ಬಹುದು. ಹೆದ್ದಾರಿಯಲ್ಲಿ ಸಂಚರಿಸುವ ಪಯಣಿಗರನ್ನು ಆಕರ್ಷಿಸುತ್ತಿದ್ದ ಬೀಚ್‌ ಈ ಸ್ಕೈ ಡೈನಿಂಗ್‌ನಿಂದಾಗಿ ಮತ್ತಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯಬಹುದು.

“ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಖಾಸಗಿಯವರಿಗೆ ಕಾರ್ಯಾದೇಶ ನೀಡಲಾಗಿದ್ದು, ಅವರು ಸಿದ್ಧತೆ ಆರಂಭಿಸುತ್ತಿದ್ದಾರೆ. ಅಗತ್ಯ ಸುರಕ್ಷೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ 15 ದಿನಗಳೊಳಗೆ ಆರಂಭಗೊಳ್ಳುವ ನಿರೀಕ್ಷೆಯಿದೆ. ಇದು ಬೀಚ್‌ ಪ್ರವಾಸೋದ್ಯಮ ನಿಟ್ಟಿನಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಹೆಜ್ಜೆಯಾಗಿದೆ.”
– ಕುಮಾರ್‌ ಸಿ.ಯು. ಸ.ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ಉಡುಪಿ

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

2-bng

Bengaluru: ಮದುವೆ ಮರೆಮಾಚಿದಕ್ಕೆ 59 ತುಂಡು ಮಾಡಿ ಹತ್ಯೆ

MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್

MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್

World Tourism Day: ಹಂಪಿ ಪಯಣದ ಹ್ಯಾಪಿ ಕಥನ

World Tourism Day: ಹಂಪಿ ಪಯಣದ ಹ್ಯಾಪಿ ಕಥನ

SEMI-Cond

World Digital Revolution: ಜಾಗತಿಕ ರಾಜಕಾರಣಕ್ಕೆ ಸೆಮಿಕಂಡಕ್ಟರ್‌

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

8-uv-fusion

School Memories: ತರಗತಿಯಲ್ಲಿ ಉಪ್ಪುಖಾರ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3-thirthahalli

Thirthahalli: ಹಣ ಇಟ್ಟು ಇಸ್ಪೀಟ್ ಆಡುತ್ತಿದ್ದವರ ಬಂಧನ!

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

K. Lakshminarayanana: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

2-bng

Bengaluru: ಮದುವೆ ಮರೆಮಾಚಿದಕ್ಕೆ 59 ತುಂಡು ಮಾಡಿ ಹತ್ಯೆ

MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್

MCD ಸ್ಥಾಯಿ ಸಮಿತಿ ಸ್ಥಾನಕ್ಕೆ ಇಂದೇ ಚುನಾವಣೆ… ಮಧ್ಯಾಹ್ನ 1 ಗಂಟೆಗೆ ಮುಹೂರ್ತ ಫಿಕ್ಸ್

World Tourism Day: ಹಂಪಿ ಪಯಣದ ಹ್ಯಾಪಿ ಕಥನ

World Tourism Day: ಹಂಪಿ ಪಯಣದ ಹ್ಯಾಪಿ ಕಥನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.