TPG Passes Away: ಬಿಪಿಎಲ್ ಸಮೂಹ ಸಂಸ್ಥೆ ಸ್ಥಾಪಕ ಟಿ.ಪಿ.ಗೋಪಾಲನ್ ನಂಬಿಯಾರ್ ನಿಧನ
ಪ್ರಧಾನಿ ನರೇಂದ್ರ ಮೋದಿ, ಟಿಪಿಜಿ ಅಳಿಯ ರಾಜೀವ್ ಚಂದ್ರಶೇಖರ್ ಸೇರಿ ಹಲವು ಗಣ್ಯರಿಂದ ಸಂತಾಪ
Team Udayavani, Oct 31, 2024, 10:17 PM IST
ಬೆಂಗಳೂರು: ಎಂಭತ್ತರ ದಶಕದಲ್ಲಿ ದೇಶದಲ್ಲೇ ಮನೆ ಮಾತಾಗಿದ್ದ ಬಿಪಿಎಲ್ (BPL) ಸಮೂಹ ಸಂಸ್ಥೆಯ ಸ್ಥಾಪಕ, ದೇಶದ ಖ್ಯಾತ ಕೈಗಾರಿಕೋದ್ಯಮಿ ಟಿ.ಪಿ. ಗೋಪಾಲನ್ ನಂಬಿಯಾರ್ (94 ವರ್ಷ) ನಿಧನ ಹೊಂದಿದ್ದಾರೆ.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಗುರುವಾರ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ನಂಬಿಯಾರ್ ಅವರು ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಮಾವ ಆಗಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕೇರಳದ ಪಾಲಕ್ಕಾಡ್‌ನಲ್ಲಿ ಜನಿಸಿದ ನಂಬಿಯಾರ್, 1963ರಲ್ಲಿ ರಕ್ಷಣಾ ಪಡೆಗಳಿಗೆ ಕೆಲವು ಉಪಕರಣಗಳನ್ನು ಉತ್ಪಾದಿಸಲು “ಬ್ರಿಟಿಷ್ ಫಿಸಿಕಲ್ ಲ್ಯಾಬೊರೇಟರೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಬಿಪಿಎಲ್) ಸ್ಥಾಪಿದರು. ಈ ಮೂಲಕ ಸ್ವಾತಂತ್ರ್ಯ ನಂತರದ ಭಾರತದ ಎಲೆಕ್ಟ್ರಾನಿಕ್ ಉದ್ಯಮದ ಪ್ರವರ್ತಕ ಎಂಬ ಖ್ಯಾತಿ ಗಳಿಸಿದರು.
ಬಿಪಿಎಲ್ ಎಲೆಕ್ಟ್ರಾನಿಕ್ ಉಪಕರಣಗಳು ಎಪ್ಪತ್ತು ಹಾಗೂ ಎಂಭತ್ತರ ದಶಕದಲ್ಲಿ ಇಡೀ ದೇಶದಲ್ಲಿ ಮನೆ ಮಾತಾಗಿತ್ತು. ಗ್ರಾಹಕ ನೆಚ್ಚಿನ ಹಾಗೂ ವಿಶ್ವಸಾರ್ಹ ಆಯ್ಕೆ ಬಿಪಿಎಲ್ ಆಗಿತ್ತು. ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಪ್ರಪಂಚದ ಬೇರೆ ದೇಶಗಳಿಗೂ ನಂಬಿಯಾರ್ ಉದ್ಯಮವನ್ನು ವಿಸ್ತರಿಸಿದ್ದರು. ಪತ್ನಿ ತಂಕಮ್, ಪುತ್ರ ಅಜಿತ್, ಪುತ್ರಿ ಅಂಜು, ಸೊಸೆ ಮೀನಾ, ಅಳಿಯ ರಾಜೀವ್ ಚಂದ್ರಶೇಖರ್, ಮೊಮ್ಮಕ್ಕಳಾದ ಶ್ರೇಯಾ, ದೇವಿಕಾ, ವೇದ್ ಮತ್ತಿತರರನ್ನು ನಂಬಿಯಾರ್ ಅಗಲಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಭಾರತೀಯ ಎಲೆಕ್ಟ್ರಾನಿಕ್ಸ್ ಕಂಪನಿ ಬಿಪಿಎಲ್ ಗ್ರೂಪ್‌ನ ಅಧ್ಯಕ್ಷ ಟಿಪಿಜಿ ನಂಬಿಯಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅವರನ್ನು ಆವಿಷ್ಕಾರ ಪ್ರವರ್ತಕ ಮತ್ತು ಕೈಗಾರಿಕೋದ್ಯಮಿ ಎಂದು ಬಣ್ಣಿಸಿರುವ ಮೋದಿ, ಭಾರತವನ್ನು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ನಿರ್ಮಿಸುವಲ್ಲಿ ನಂಬಿಯಾರ್ ಮಹತ್ವದ ಕೊಡುಗೆ ನೀಡಿರುವುದಾಗಿ ಸ್ಮರಿಸಿದ್ದಾರೆ.
ಟಿಪಿಜಿ ಅಳಿಯ ರಾಜೀವ್ ಚಂದ್ರಶೇಖರ್ ಕಂಬನಿ:
ಟಿಪಿಜಿ ಎಂದು ಕರೆಯಲಾಗುತ್ತಿದ್ದ ಟಿ.ಪಿ. ಗೋಪಾಲನ್ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾವ ಕೂಡ ಆಗಿದ್ದಾರೆ. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜೀವ್ ಚಂದ್ರಶೇಖರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಮಾವನ ನಿಧನದ ಸುದ್ದಿ ಹಂಚಿಕೊಂಡು. ನನ್ನ ಮಾವ ಟಿಪಿಜಿ ನಂಬಿಯಾರ್ ನಿಜವಾದ ದೂರದೃಷ್ಟಿಯುಳ್ಳವರಾಗಿದ್ದರು ಮತ್ತು ಭಾರತದ ಅತ್ಯಂತ ವಿಶ್ವಾಸಾರ್ಹವಾದ ಗ್ರಾಹಕ ಬ್ರ್ಯಾಂಡ್ ವೊಂದನ್ನು ಬೆಳೆಸಿದ್ದರು. ಅದು ಇಂದಿಗೂ ಜನಪ್ರಿಯವಾಗಿದೆ. Believe In The Best. ನನ್ನ ಚುನಾವಣಾ ಪ್ರಚಾರ ಕಾರ್ಯ ಕೈಬಿಟ್ಟು ಕುಟುಂಬದೊಂದಿಗೆ ಇರಲು ಬೆಂಗಳೂರಿಗೆ ಹಿಂತಿರುಗುತ್ತಿದ್ದೇನೆ ಎಂದು ಚಂದ್ರಶೇಖರ್ ಟ್ವೀಟ್ ಮಾಡಿದ್ದರು.
It is with great sadness that I inform all abt the passing away of my father-in-law TPG Nambiar, Chairman BPL Group. #OmShanthi 🙏🏻
He was a true visionary and built one of Indias most trusted consumer brands that remains popular to this day. #BelieveInTheBest
I am pausing my… pic.twitter.com/fmq5qrMbss
— Rajeev Chandrasekhar 🇮🇳 (@RajeevRC_X) October 31, 2024
ಎಂಬಿಪಾ ಸಂತಾಪ:
ಕೈಗಾರಿಕೋದ್ಯಮಿ ನಂಬಿಯಾರ್ ನಿಧನಕ್ಕೆ ಕಂಬನಿ ಮಿಡಿದಿರುವ ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, “ನಂಬಿಯಾರ್ ಅವರು ಭಾರತ ಮಾತ್ರವಲ್ಲ, ಕರ್ನಾಟಕದ ಎಲೆಕ್ಟ್ರಾನಿಕ್ ಉದ್ಯಮದಲ್ಲಿ ಹೊಸತನ ಪ್ರಾರಂಭಿಸಿದ ಶಕ ಪುರುಷರಾಗಿದ್ದರು. ಅವರಿಂದಾಗಿ ಉದ್ಯಮ ಪ್ರಪಂಚದಲ್ಲಿ ಪರಂಪರೆಯೇ ಸೃಷ್ಟಿಯಾಯಿತು. ಅವರ ನಿಧನದಿಂದ ನಾವು ದೂರದೃಷ್ಟಿಯುಳ್ಳ ಓರ್ವ ಧೀಮಂತ ಉದ್ಯಮಿ ಕಳೆದುಕೊಂಡಿದ್ದೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.