Train travel: ವಂದೇ ಭಾರತ್‌ ಸ್ಲೀಪರ್‌ ಕೋಚ್‌: ತಾಸಿಗೆ 160 ಕಿ.ಮೀ.ವೇಗ

ಪ್ರಯಾಣಿಕರಿಗೆ ತೊಂದರೆ ಆಗದಂತೆ ಸುರಕ್ಷತಾ ವಿನ್ಯಾಸ ರೂಪಿಸಲಾಗಿದೆ

Team Udayavani, Sep 2, 2024, 6:43 AM IST

Vandhe-Bharah

ಬೆಂಗಳೂರು: ಮಧ್ಯಮ ವರ್ಗದವರಿಗೆ ವಿಶ್ವ ದರ್ಜೆಯ ರೈಲು ಪ್ರಯಾಣದ ಅನುಭವ ನೀಡುವ ಉದ್ದೇಶದಿಂದ ವಂದೇ ಭಾರತ್‌ ಸ್ಲೀಪರ್‌ ಕೋಚ್‌  ರೈಲು ವಿನ್ಯಾಸಗೊಳಿಸಲಾಗಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿ‌ನ್‌ ವೈಷ್ಣವ್‌ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲಿನ 2 ಮೂಲ ಮಾದರಿ (ಪ್ರೋಟೋ ಟೈಪ್‌)ಯನ್ನು ಪರಿಶೀಲಿಸಿದ ಬಳಿಕ ರವಿವಾರ ಪ್ರಾಯೋಗಿಕ ಚಾಲನೆ ನೀಡಿದರು.

ಭಾರತ್‌ ಅರ್ಥ್ ಮೂವರ್ಸ್‌ ಲಿಮಿಟಿಡ್‌ (ಬಿಇಎಂಎಲ್‌) ವಂದೇ ಭಾರತ್‌ ಸ್ಲಿàಪರ್‌ ಕೋಚ್‌ಗಳನ್ನು ವಿನ್ಯಾಸ ಮಾಡಿದೆ. ನಿದ್ರಿಸಲು ಆರಾಮದಾಯಕ ಹಾಸಿಗೆ, ವಿಶಾಲವಾದ ಸ್ಥಳಾವಕಾಶ, ಗಾಳಿ ಬೆಳಕು ಹೊಂದಿದೆ. ಬೋಗಿಯನ್ನು ಸಂಪೂರ್ಣವಾಗಿ ಸ್ಟೀಲ್‌ನಿಂದ ನಿರ್ಮಿಸಿದ್ದು ಅಪಘಾತವಾದರೂ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಆಗದಂತೆ ಸುರಕ್ಷತಾ ವಿನ್ಯಾಸ ರೂಪಿಸಲಾಗಿದೆ.

ಒಳಾಂಗಣದಲ್ಲಿ ಗ್ಲಾಸ್‌ ಫೈಬರ್‌ ರೈನ್‌ಫೋಸ್ಡ್ì ಪ್ಲಾಸ್ಟಿಕ್ಸ್‌ ಬಳಸಲಾಗಿದೆ. ಏರೋಡೈನಾಮಿಕ್‌ ಡಿಸೈನ್‌ ಅಳವಡಿಸಿಕೊಳ್ಳಲಾಗಿದೆ. ಸೆನ್ಸಾರ್‌ ಆಧಾರಿತ ಅಂತರ್‌ ಸಂವಹನ ವ್ಯವಸ್ಥೆ, ರೀಡಿಂಗ್‌ ಹಾಗೂ ವಾಕಿಂಗ್‌ ಲೈಟ್ಸ್‌, ಅಡುಗೆ ತಯಾರಿಸಲು ವಿಶೇಷ ಕೊಠಡಿ ಇದೆ. ಇಲ್ಲಿ ಓವೆನ್‌, ಫ್ರಿಡ್ಜ್, ನೀರು ಕಾಯಿಸುವ ವ್ಯವಸ್ಥೆ ಇದೆ. ಜತೆಗೆ ಕಸದ ತೊಟ್ಟಿ ಇದೆ.

ವಂದೇ ಭಾರತ್‌ ರೈಲು ಪ್ರತೀ ಗಂಟೆಗೆ 160 ಕಿ.ಮೀ. ಚಲಿಸಲಿದೆ. ರೈಲ್ವೇ ನಿಲ್ದಾಣದಲ್ಲಿ ನಿಲುಗಡೆ ಸಮಯ ಹೊರತುಪಡಿಸಿ ಸುಮಾರು 800ರಿಂದ 1200 ಕಿ.ಮೀ. ದೂರವನ್ನು ಕೇವಲ ಏಳೂವರೆ ಗಂಟೆಯಲ್ಲಿ ಕ್ರಮಿಸಲಿದೆ. ಆದರೆ ಪ್ರಸ್ತುತ ಪರೀಕ್ಷೆಯ ಅವಧಿಯಲ್ಲಿ ಗಂಟೆಗೆ 180 ಕಿ.ಮೀ. ವೇಗದಲ್ಲಿ ಓಡಲಿದೆ. ಸ್ಲೀಪರ್‌ ಕೋಚ್‌ ವಂದೇ ಭಾರತ್‌ ರೈಲಿನಲ್ಲಿ 16 ಬೋಗಿಗಳಿವೆ. ಈ ರೈಲು ವಿಶೇಷವಾಗಿ ರೈಲು ಪ್ರಯಾಣಕ್ಕಾಗಿ ವಿನ್ಯಾಸ ಮಾಡಲಾಗಿದೆ.

ಇದರಲ್ಲಿದೆ ಬಿಸಿ ನೀರು ಸ್ನಾನದ ವ್ಯವಸ್ಥೆ
ವಂದೇ ಭಾರತ್‌ ಸ್ಲೀಪರ್‌ ಕೋಚ್‌ ರೈಲಿನ ಎಸಿ 1 ಬೋಗಿನಲ್ಲಿ ಬಿಸಿ ನೀರು ಸ್ನಾನದ ವ್ಯವಸ್ಥೆ ಇದೆ. ಮ್ಯಾಡುಲರ್‌ ಪ್ಯಾಂಟ್ರಿ, ವಿಶೇಷ ಚೇತನರನ್ನು ಗಮನದಲ್ಲಿಟ್ಟು ಕೋಚ್‌ ಹಾಗೂ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಸ್ವಯಂ ಚಾಲಿತ ಡೋರ್‌ ವ್ಯವಸ್ಥೆ, ವಿಶೇಷವಾಗಿ ಮೊಬೈಲ್‌ ಹೋಲ್ಡರ್‌, ಚಾರ್ಜ್‌ ಪಾಯಿಂಟ್‌, ಆಹಾರ ಸೇವಿಸುವ ಫೋಲ್ಡ್‌ ಟೇಬಲ್‌, ಅಪಘಾತ ನಿಯಂತ್ರಕ ಕವಚ, ವಿಶೇಷವಾಗಿ ಡ್ರೆ„ವಿಂಗ್‌ ಟ್ರೆ„ಲರ್‌ ಬೋಗಿಯಲ್ಲಿ ಆರ್‌ಪಿಎಫ್‌ ಸೇರಿ ಭದ್ರತಾ ಸಿಬಂದಿಯ ಶ್ವಾನದಳ ತಂಗಲು ಡಾಗ್‌ ಬಾಕ್ಸ್‌’ ಇಡಲಾಗಿದೆ. ಅಗತ್ಯವಿದ್ದರೆ ಪ್ರಯಾಣಿಕರ ಸಾಕು ನಾಯಿಗೂ ಅವಕಾಶ ನೀಡಲಿದ್ದಾರೆ. ವಿಶಾಲವಾದ ಲಗೇಜ್‌ ಕೊಠಡಿ ಸೇರಿದಂತೆ ಇತರ ಸೌಲಭ್ಯ ಹೊಂದಿದೆ.

ಟಾಪ್ ನ್ಯೂಸ್

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

CET/NEET: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ

CET/NEET: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ

Sangolli ರಾಯಣ್ಣಗೂ, ಸಿಎಂಗೂ ಎಲ್ಲಿಯ ಸಂಬಂಧ: ರವಿ ಕುಮಾರ್‌ ಕಿಡಿ

Sangolli ರಾಯಣ್ಣಗೂ, ಸಿಎಂಗೂ ಎಲ್ಲಿಯ ಸಂಬಂಧ: ರವಿ ಕುಮಾರ್‌ ಕಿಡಿ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

R.Ashok, ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್‌ ದಾಖಲು

R.Ashok, ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್‌ ದಾಖಲು

davanagere

Davanagere: ಮರಳು ತೆಗೆದ ವಿಚಾರದಲ್ಲಿ ಘರ್ಷಣೆ… ಓರ್ವ ಮೃತ್ಯು, ಇನ್ನೋರ್ವ ಗಂಭೀರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CET/NEET: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ

CET/NEET: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ

Sangolli ರಾಯಣ್ಣಗೂ, ಸಿಎಂಗೂ ಎಲ್ಲಿಯ ಸಂಬಂಧ: ರವಿ ಕುಮಾರ್‌ ಕಿಡಿ

Sangolli ರಾಯಣ್ಣಗೂ, ಸಿಎಂಗೂ ಎಲ್ಲಿಯ ಸಂಬಂಧ: ರವಿ ಕುಮಾರ್‌ ಕಿಡಿ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

davanagere

Davanagere: ಮರಳು ತೆಗೆದ ವಿಚಾರದಲ್ಲಿ ಘರ್ಷಣೆ… ಓರ್ವ ಮೃತ್ಯು, ಇನ್ನೋರ್ವ ಗಂಭೀರ

HC-KAR

High court: ಅಕ್ರಮ ಮದ್ಯ ವಶ ಪ್ರಕರಣ:ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

CET/NEET: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ

CET/NEET: 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Sangolli ರಾಯಣ್ಣಗೂ, ಸಿಎಂಗೂ ಎಲ್ಲಿಯ ಸಂಬಂಧ: ರವಿ ಕುಮಾರ್‌ ಕಿಡಿ

Sangolli ರಾಯಣ್ಣಗೂ, ಸಿಎಂಗೂ ಎಲ್ಲಿಯ ಸಂಬಂಧ: ರವಿ ಕುಮಾರ್‌ ಕಿಡಿ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.