ಭಾರತಕ್ಕೆ ಕಾಲಿಟ್ಟ ಟೆಸ್ಲಾ ಪ್ರತಿಸ್ಪರ್ಧಿ ಟ್ರೈಟನ್
Team Udayavani, Jun 26, 2021, 10:16 PM IST
ನವದೆಹಲಿ: ಜಾಗತಿಕ ಕಾರು ಉತ್ಪಾದನಾ ಕ್ಷೇತ್ರದಲ್ಲಿ ಟೆಸ್ಲಾ ಕಂಪನಿಯ ಪ್ರತಿಸ್ಪರ್ಧಿ ಎಂದೇ ಬಿಂಬಿತವಾಗಿರುವ ಟ್ರೈಟನ್ ಇಲೆಕ್ಟ್ರಿಕ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ತೆಲಂಗಾಣದ ಜಹೀರಾಬಾದ್‌ನಲ್ಲಿ ಸದ್ಯದಲ್ಲೇ ತನ್ನ ಕಾರು ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ.
ಈ ಕುರಿತಂತೆ, ತೆಲಂಗಾಣ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದಕ್ಕೆ, ಕಂಪನಿಯ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಎಂ. ಮನ್ಸೂರ್ ಹಾಗೂ ತೆಲಂಗಾಣ ಸರ್ಕಾರದ ಐಟಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಜಯೇಶ್ ರಂಜನ್, ಶನಿವಾರದಂದು ತೆಲಂಗಾಣದ ಐಟಿ ಸಚಿವ ಕೆ.ಟಿ. ರಾಮರಾವ್ ಸಮ್ಮುಖದಲ್ಲಿ ಸಹಿ ಹಾಕಿದ್ದಾರೆ.
2,100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾರು ಉತ್ಪಾದನಾ ಘಟಕದಲ್ಲಿ 25,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದ್ದು, ಘಟಕ ಶುರುವಾದ ಐದು ವರ್ಷದಲ್ಲಿ 50,000 ವಾಹನಗಳನ್ನು ತಯಾರಿಸುವ ಗುರಿಯನ್ನು ಟ್ರೈಟನ್ ಹೊಂದಿದೆ.
ಇದನ್ನೂ ಓದಿ :ತಮಿಳುನಾಡಿನ 21 ಜಿಲ್ಲೆಗಳಲ್ಲಿ 100 ರೂ. ದಾಟಿದೆ ಪೆಟ್ರೋಲ್ ದರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.