Explainer-US Result: ಅಧ್ಯಕ್ಷ ಗಾದಿ ಯಾರಿಗೆ; ಟ್ರಂಪ್ ಮುನ್ನಡೆ, 7 ರಾಜ್ಯಗಳು ನಿರ್ಣಾಯಕ!
ಈ ಚುನಾವಣೆಯಲ್ಲಿ ಟ್ರಂಪ್ ಅಥವಾ ಹ್ಯಾರಿಸ್ ಯಾರೇ ಗೆಲುವು ಸಾಧಿಸಿದರೂ ಅದು ಐತಿಹಾಸಿಕ
ನಾಗೇಂದ್ರ ತ್ರಾಸಿ, Nov 6, 2024, 11:22 AM IST
ಅಮೆರಿಕದ ಮುಂದಿನ ಅಧ್ಯಕ್ಷ ಗಾದಿಗೆ ಏರಲು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟ್ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ತೀವ್ರ ಹಣಾಹಣಿ ನಡೆದಿದ್ದು, ಸದ್ಯದ ಫಲಿತಾಂಶದ ಟ್ರೆಂಡ್ ಪ್ರಕಾರ ರಿಪಬ್ಲಿಕನ್ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿರುವುದಾಗಿ ವರದಿ ತಿಳಿಸಿದೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 23 ರಾಜ್ಯಗಳಲ್ಲಿನ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದು, 230 ಎಲೆಕ್ಟ್ರೊಲ್ ಮತಗಳನ್ನು ಪಡೆದಿದ್ದು, ಡೆಮಾಕ್ರಟ್ ಪಕ್ಷದ ಕಮಲಾ ಹ್ಯಾರಿಸ್ 210 ಎಲೆಕ್ಟ್ರೊರಲ್ ಮತ ಗಳಿಸಿದ್ದಾರೆ.
ಮತಪತ್ರ ಬಳಸಿ ಚುನಾವಣೆ ನಡೆಸುತ್ತಿರುವುದರಿಂದ ಅಂತಿಮ ಫಲಿತಾಂಶ ಘೋಷಣೆಯಾಗುವುದು ತಡವಾಗಲಿದೆ. ಸುಮಾರು 24. 3 ಕೋಟಿ ಮತದಾರರಿದ್ದು, ನವೆಂಬರ್ 2ರವರೆಗೆ 7.5 ಕೋಟಿಗೂ ಹೆಚ್ಚು ಮಂದಿ ಆನ್ ಲೈನ್ ಮೂಲಕ ಹಕ್ಕು ಚಲಾಯಿಸಿದ್ದಾರೆ ಎಂದು ಪ್ಲೋರಿಡಾ ವಿವಿ ತಿಳಿಸಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದ ಆಗ್ನೇಯ ಭಾಗದಲ್ಲಿರುವ ಉತ್ತರ ಕೆರೋಲಿನಾ, ಅರಿಝೋನಾ, ಮಿಚಿಗನ್, ಪೆನ್ನಿಸ್ಲುವೇನಿಯಾ, ವಿಸ್ಕೋನ್ ಸಿನ್ ಮತ್ತು ಜಾರ್ಜಿಯಾದಲ್ಲಿ ಟ್ರಂಪ್ ಮುನ್ನಡೆ ಸಾಧಿಸಿರುವುದಾಗಿ ವರದಿ ವಿವರಿಸಿದೆ.
ಕುತೂಹಲದ ಸಂಗತಿ ಯಾವುದೆಂದರೆ ಅಮೆರಿಕದ ಅಧ್ಯಕ್ಷ ಗಾದಿಗೆ ಏರಲು ಜಯಗಳಿಸಲು ಪ್ರಮುಖ ರಾಜ್ಯಗಳ ಎಲೆಕ್ಟ್ರೊರಲ್ ಮತ ಪ್ರಾಮುಖ್ಯತೆ ವಹಿಸುತ್ತವೆ ಎಂಬುದು ಗಮನಾರ್ಹ ವಿಚಾರವಾಗಿದೆ. ಈ ರಾಜ್ಯಗಳಲ್ಲಿ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಗೆ ಸಮಬಲದ ಬೆಂಬಲ ವ್ಯಕ್ತವಾಗಿದೆ. ಯಾರು ಜಯಗಳಿಸುತ್ತಾರೆ, ಯಾರು ಸೋಲುತ್ತಾರೆ ಎಂಬುದನ್ನು ಈ ರಾಜ್ಯಗಳೇ ನಿರ್ಣಾಯಕ!
ನಿರ್ಣಾಯಕ ರಾಜ್ಯಗಳು ಯಾವುದು?
ಸ್ವಿಂಗ್ ರಾಜ್ಯಗಳು ಎಂದು ಗುರುತಿಸಲಾದ ಮಿಚಿಗನ್, ಅರಿಝೋನಾ(11), ಉತ್ತರ ಕೆರೋಲಿನಾ(16), ಪೆನ್ಸಿಲ್ವೇನಿಯಾದ 19 ಎಲೆಕ್ಟ್ರೊರಲ್ ಕಾಲೇಜು ಮತಗಳು, ಜಾರ್ಜಿಯಾದ 16 ಎಲೆಕ್ಟ್ರೊರಲ್ ಮತ, ವಿಸ್ಕೊನ್ಸಿನ್ ನ 10, ನೆವಾಡಾದ 6 ಎಲೆಕ್ಟ್ರೊರಲ್ ಕಾಲೇಜು ಮತಗಳು ಅಭ್ಯರ್ಥಿಗಳ ಗೆಲುವಿಗೆ ನಿರ್ಣಾಯಕವಾಗಲಿದೆ.
ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನಿರ್ಗಮಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಧ್ಯಕ್ಷ ಗಾದಿಗೆ ಏರಲು ಬೇಕಾದ ಮ್ಯಾಜಿಕ್ ನಂಬರ್ 270 ಎಲೆಕ್ಟ್ರೊರಲ್ ಕಾಲೇಜ್ ಮತಗಳನ್ನು ಯಾರು ಪಡೆಯುತ್ತಾರೋ ಅವರ ಶ್ವೇತಭವನ ಪ್ರವೇಶಿಸದ ಹಾದಿ ಸುಗಮವಾಗಲಿದೆ.
ಹಾಲಿ ಟ್ರೆಂಡ್ಸ್ ಪ್ರಕಾರ ಡೊನಾಲ್ಡ್ ಟ್ರಂಪ್ 232 ಮತಗಳ ಮುನ್ನಡೆ ಸಾಧಿಸಿದ್ದು, ಕಮಲಾ ಹ್ಯಾರಿಸ್ 216 ಮತಗಳ ಮುನ್ನಡೆ ಪಡೆದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯಗಳ ಪ್ರಜಾಪ್ರಭುತ್ವ, ಆರ್ಥಿಕತೆ ಮತ್ತು ಗರ್ಭಪಾತ ಪ್ರಮುಖ ವಿಷಯಗಳಾಗಿದ್ದು, ಇದರ ಆಧಾರದ ಮೇಲೆ ಅಮೆರಿಕದ ಮತದಾರರು ಮತ ಚಲಾಯಿಸಿದ್ದಾರೆ.
ಈಗಾಗಲೇ ದೇಶದ 40ರಿಂದ 50 ರಾಜ್ಯಗಳಲ್ಲಿನ ಮತದಾನ ಪೂರ್ಣಗೊಂಡಿದೆ. ಇನ್ನೇನಿದ್ದರು ನಿರ್ಣಾಯಕ ರಾಜ್ಯಗಳಾದ ಅರಿಝೋನಾ, ಜಾರ್ಜಿಯಾ, ಮಿಚಿಗನ್, ನೆವಾಡಾ, ಉತ್ತರ ಕೆರೋಲಿನಾ, ವಿಸ್ಕೊನ್ಸಿನ್, ಪೆನ್ಸಿಲ್ವೇನಿಯಾದ ಫಲಿತಾಂಶ ಹೊರಬೀಳಬೇಕಾಗಿದೆ.
ಸಿಬಿಎಸ್ ನ್ಯೂಸ್ ಪೋಲ್ ನ ಮಾಹಿತಿ ಪ್ರಕಾರ, ಹತ್ತರಲ್ಲಿ ಆರು ಮಂದಿ ರಾಜ್ಯದ ಪ್ರಜಾಪ್ರಭುತ್ವದ ಬಗ್ಗೆ ಮೊದಲ ಆದ್ಯತೆ ನೀಡಿದ್ದು, ನಂತರದಲ್ಲಿ ಶೇ.5ರಷ್ಟು ಜನರು ಗರ್ಭಪಾತ ತಡೆ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದು, ಹತ್ತರಲ್ಲಿ ಒಬ್ಬರು ಆರ್ಥಿಕತೆ ಬಗ್ಗೆ ಒಲವು ತೋರಿರುವುದಾಗಿ ವರದಿ ಬಹಿರಂಗಪಡಿಸಿದೆ.
ಈ ಚುನಾವಣೆಯಲ್ಲಿ ಟ್ರಂಪ್ ಅಥವಾ ಹ್ಯಾರಿಸ್ ಯಾರೇ ಗೆಲುವು ಸಾಧಿಸಿದರೂ ಅದು ಐತಿಹಾಸಿಕವಾಗಲಿದೆ. ಕಮಲಾ ಹ್ಯಾರಿಸ್ ಜಯಗಳಿಸಿದರೆ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.
ಗೆಲುವಿಗೆ ಬೇಕು 270 ಮತ:
ಅಮೆರಿಕ ಸಂಸತ್ ನಲ್ಲಿ 538 ಸದಸ್ಯರಿದ್ದು, ಅಧ್ಯಕ್ಷ ಚುನಾವಣೆ ಗೆಲ್ಲಲು 270 ಎಲೆಕ್ಟ್ರೊರಲ್ ಮತಗಳ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.