ಅಮೆರಿಕ ಕೋವಿಡ್-19 ಸಮರ: ಮಾವನಿಗೆ ಅಳಿಯನ ಸಾಥ್
Team Udayavani, Apr 5, 2020, 1:05 PM IST
ವಾಷಿಂಗ್ಟನ್: ಬಹುಶಃ ಅಮೆರಿಕವನ್ನು ಕೋವಿಡ್-19ದಿಂದ ಉಳಿಸಲು ಬರೀ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಕಾಗದು. ಅದಕ್ಕೇ ಈಗ ಅವರ ಅಳಿಯನೂ ಮಾವನಿಗೆ ಸಾಥ್ ನೀಡಿದ್ದಾರೆ. ಟ್ರಂಪ್ ಅಳಿಯ ಜೇರೆಡ್ ಕುಶ್ನರ್ ಕೈ ಜೋಡಿಸಿದ್ದು, ರಾಜ್ಯ ಸರಕಾರಗಳಿಗೆ ಹಾಗೂ ಅಮೆರಿಕನ್ನರಲ್ಲಿ ಧೈರ್ಯ ತುಂಬುವ ಕೆಲಸ ಮಾಡತೊಡಗಿದ್ದಾರೆ.
“39ರ ಹರೆಯದ ಯುವಕ ಕುಶ್ನರ್‌ವಾಷಿಂಗ್ಟನ್‌ಗೆ ಹೊಸಬರೇನಲ್ಲ. ಈ ಮೊದಲು ಅವರು ಸರಕಾರದ ಮಟ್ಟದಲ್ಲಿ ಸೇವೆ ಸಲ್ಲಿಸಿದ ಅನುಭವವಿಲ್ಲ. ಟ್ರಂಪ್ ಅವರ ಪುತ್ರಿ ಇವಾಂಕಾ ಅವರೊಂದಿಗೆ ವಿವಾಹವಾಗಿದ್ದ ಅವರ ಹೊಣೆ 2016ರ ಚುನಾವಣೆಯ ಅನಂತರ ಇನ್ನಷ್ಟು ಹೆಚ್ಚಾಗಿತ್ತು. ಯಾವುದೇ ವೈದ್ಯಕೀಯ ಅನುಭವವಿಲ್ಲ. ಯಾವುದೇ ಚುನಾವಣೆಗೆ ನಿಂತು ಚುನಾಯಿತರಾಗಿಲ್ಲ. ಮಿಲಿಟರಿ ಸೇವೆ ಬಗ್ಗೆ ಪರಿವೇ ಇಲ್ಲದ ಕುಶ್ನರ್, ತಾವಾಗಿಯೇ ಮಹತ್ತರ ಜವಾಬ್ದಾರಿ ಹೊರಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ವೇತ ಭವನದ ಪ್ರಮುಖರಾಗಿ ಕಾರ್ಯ ನಿರ್ವಹಿಸಲಾರಂಭಿಸಿದ್ದಾರೆ.
ಪರಿಸ್ಥಿತಿಯನ್ನು ಎದುರಿಸೋಣ
ಕೋವಿಡ್-19 ಸೋಂಕು ಹರಡುವಿಕೆ ಸಂಬಂಧ ಪಟ್ಟಂತೆ ದೈನಂದಿನ ಕಿರು ಮಾಧ್ಯಮ ಗೋಷ್ಠಿಯಲ್ಲಿ ಟ್ರಂಪ್ ಜತೆ ಕುಶ್ನರ್ ಪಾಲ್ಗೊಂಡಿದ್ದು, ಅಮೆರಿಕ ಇತಿಹಾಸದಲ್ಲೇ ಎದುರಾಗಿರುವ ದೊಡ್ಡ ಬಿಕ್ಕಟ್ಟನ್ನು ಸಮರ್ಥ ವಾಗಿ ಎದುರಿಸುವ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅವರ ಉಪಸ್ಥಿತಿ ಅಲ್ಲಿನ ಸಭೆಗೆ ಆಶ್ಚರ್ಯ ತಂದಿದ್ದು, ಕುಶ°ರ್‌ಗೆ ಬಿಕ್ಕಟ್ಟನ್ನು ಪರಿಹರಿಸುವ ನಾಯಕತ್ವ ಗುಣ ಇದೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.
ಚಿಂತಕರ ಸಲಹೆ
ಕ್ರಿಯಾತ್ಮಕ ಚಿಂತಕನಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿ ಕುಶ್ನರ್, ಕೋವಿಡ್-19 ನಿಯಂತ್ರಣಕ್ಕಾಗಿ ಒಂದು ಗುಪ್ತವಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂಬ ವದಂತಿ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಇದೀಗ ಇವರ ಉಪಸ್ಥಿತಿಯಿಂದ ಆ ವದಂತಿಗೆ ಜೀವ ಬಂದಿದೆ. ಟ್ರಂಪ್ ಸಲಹೆ ಮೇರೆಗೆ ದೇಶದ ಉತ್ತಮ ಚಿಂತಕರೊಂದಿಗೆ ಅಮೂಲ್ಯ ಸಲಹೆಗಳನ್ನು ಕೇಳಿ ಯೋಜನೆ ರೂಪಿಸುವಲ್ಲಿ ಕುಶ್ನರ್ ಪಾತ್ರ ವಹಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.