ಮಂಗಳವಾರದ ರಾಶಿ ಫಲ: ಹಣಕಾಸಿನ ವಿಚಾರದಲ್ಲಿ ಅಜಾಗ್ರತೆ ಸಲ್ಲದು, ದಾಂಪತ್ಯ ಸುಖ ತೃಪ್ತಿದಾಯಕ
Team Udayavani, Nov 29, 2022, 7:33 AM IST
ಮೇಷ: ಅಧಿಕಾರ, ಸುಖಮಯ ಅಸ್ತಿತ್ವ ಶಾರೀರಿಕ ಬಲ ವರ್ಚಸ್ಸು ವೃದ್ಧಿ. ನಿರೀಕ್ಷಿತ ಧನಾರ್ಜನೆ. ಸಹೋದರಾದಿ ವರ್ಗದವರಿಗೆ ಅಭಿವೃದ್ಧಿ. ದಾಂಪತ್ಯ ಸುಖದಲ್ಲಿ ಅಭಿವೃದ್ಧಿ. ಮಕ್ಕಳ ವಿಚಾರದಲ್ಲಿ ಸಾಹನ ಪ್ರವೃತ್ತಿ. ಉದ್ಯೋಗ ವಿಚಾರದಲ್ಲಿ ಉನ್ನತಿ.
ವೃಷಭ: ಶಾರೀರಿಕ ಮಾನಸಿಕ ಆರೋಗ್ಯ ಸ್ಥಿರ. ಗೌರವದಿಂದ ಕೂಡಿದ ಧನಾರ್ಜನೆ. ಸಹೋದರ ವರ್ಗದವರಿಗೂ ಉನ್ನತ ಸ್ಥಾನ ಸುಖ. ಸಾಂಸಾರಿಕ ಸುಖ ತೃಪ್ತಿದಾಯಕ. ಮಕ್ಕಳ ವಿಚಾರದಲ್ಲಿ ಮನೋರಂಜನೆ. ವ್ಯವಹಾರಸ್ಥರಿಗೆ ಗೌರವ ಪೂಜ್ಯತೆ.
ಮಿಥುನ: ದೈಹಿಕ ಆರೋಗ್ಯ ಸ್ಥಿರ. ಹಣಕಾಸಿನ ವಿಚಾರದಲ್ಲಿ ಅಜಾಗ್ರತೆ ಸಲ್ಲದು. ಸಹೋದರಾದಿ ವರ್ಗದವರಿಗೂ ಸಾಹಸ ಪ್ರವೃತ್ತಿ ಮಾಡದಿರಿ. ದಾಂಪತ್ಯ ಸುಖ ತೃಪ್ತಿದಾಯಕ. ಮಕ್ಕಳ ವಿಚಾರದಲ್ಲಿ ಸಂತೋಷ. ಉದ್ಯೋಗದಲ್ಲಿ ಸ್ಥಿರತೆ.
ಕರ್ಕ: ಅರೋಗ್ಯದಲ್ಲಿ ಅಭಿವೃದ್ಧಿ, ಮನಃ ಸಂತೋಷ. ಉತ್ತಮ ಧನಾರ್ಜನೆ. ಸಹೋದರಾಗಿ ಸುಖ. ದಾಂಪತ್ಯದಲ್ಲಿ ಅನುರಾಗ ಪ್ರಯಾಣ. ಮಕ್ಕಳ ವಿಚಾರದಲ್ಲಿ ಮನೋರಂಜನೆ. ಪಾಲುದಾರಿಕಾ ಕ್ಷೇತ್ರ ವಿದೇಶ ವ್ಯವಹಾರದಲ್ಲಿ ಪ್ರಗತಿ.
ಸಿಂಹ: ಆರೋಗ್ಯ ಬಗ್ಗೆ ಗಮನಹರಿಸಿ. ಅನಿರೀಕ್ಷಿತ ಧನಾಗಮನ. ಬಂಧುಗಳಿಂದ ಸಹಾಯ. ದಾಂಪತ್ಯದಲ್ಲಿ ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳ ವಿಚಾರದಲ್ಲಿ ಪ್ರಗತಿ. ಉದ್ಯೋಗ ಕ್ಷೇತ್ರದಲ್ಲಿ ಜ್ಞಾನದಿಂದ ಧೃಡತೆ ಸಾಧಿಸಿದ ತೃಪ್ತಿ. ನಿರೀಕ್ಷಿತ ಸ್ಥಾನ ಸುಖ.
ಕನ್ಯಾ: ಆರೋಗ್ಯ ಸ್ಥಿರ. ಹಣಕಾಸಿನ ವಿಚಾರದಲ್ಲಿ ಪ್ರಗತಿ ಇದ್ದರೂ ಸಾಹಸ ಸಲ್ಲದು. ಬಂಧುಗಳಿಂದ ಸಹಾಯ ನಿರೀಕ್ಷೆ ಬೇಡ. ದಾಂಪತ್ಯ ಸುಖ ತೃಪ್ತಿದಾಯಕ. ಉದ್ಯೋಗ ಕಾರ್ಯಕ್ಷೇತ್ರದಲ್ಲಿ ಉತ್ತಮ ಬದಲಾವಣೆ ಅಭಿವೃದ್ಧಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ತುಲಾ: ಹಠಮಾರಿತನ ಸಲ್ಲದು. ನಿಮ್ಮಲ್ಲಿರುವ ವಿದ್ಯೆ ವಿನಯದಿಂದ ಹೆಚ್ಚಿನ ಯಶಸ್ಸು ಸಂಭವ. ಉತ್ತಮ ಧನಾರ್ಜನೆ. ಗೃಹೋಪಯೋಗಿ ವಸ್ತುಗಳ ಸಂಗ್ರಹಕ್ಕಾಗಿ ಧನವ್ಯಯ. ದಾಂಪತ್ಯದಲ್ಲಿ ಪರಸ್ಪರ ಅನುರಾಗ, ಪ್ರೋತ್ಸಾಹ ಅಗತ್ಯ.
ವೃಶ್ಚಿಕ: ಗುರುಹಿರಿಯರ ಮಾರ್ಗದರ್ಶನ ದಿಂದ ಕೂಡಿದ ಕಾರ್ಯವೈಖರಿ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಅಭಿವೃದ್ಧಿ. ದೂರದ ವ್ಯವಹಾರಗಳಿಂದ ಧನಾರ್ಜನೆ. ವಿದ್ಯಾರ್ಥಿಗಳಿಗೆ ವಿದೇಶಿ ನೆಲದಲ್ಲಿ ಅಭ್ಯಸಿಸುವವರಿಗೆ ಹೆಚ್ಚಿದ ಪ್ರಗತಿ.
ಧನು: ನಿರೀಕ್ಷಿತ ಸ್ಥಾನ ಗೌರವ ವೃದ್ಧಿ. ಆರೋಗ್ಯ ಉತ್ತಮ. ಹಿರಿಯರಿಂದಲೂ ಮೇಲಧಿಕಾರಿಗಳಿಂದಲೂ ಉತ್ತಮ ಸಹಕಾರ ಪ್ರೋತ್ಸಾಹ ಲಭ್ಯ. ದಾಂಪತ್ಯದಲ್ಲಿ ಅನುರಾಗ ಪ್ರೋತ್ಸಾಹ ವೃದ್ಧಿ. ಮಕ್ಕಳಿಂದ ಹೆಚ್ಚಿದ ಸುಖ.
ಮಕರ: ಆಸ್ತಿ ವಾಹನಾದಿ ವಿಚಾರದಲ್ಲಿ ಬದಲಾವಣೆ ಸಂಭವ. ಬಂಧು ಮಿತ್ರರಲ್ಲಿ ವ್ಯವಹರಿಸುವಾಗ ದುಡುಕದಿರಿ. ತಾಳ್ಮೆಯಿಂದ ನಿರ್ಣಯ ನೀಡಿ. ಆರೋಗ್ಯ ಗಮನಿಸಿ. ಮಕ್ಕಳಿಂದ ಹೆಚ್ಚಿದ ಸಂತೋಷ. ದಾಂಪತ್ಯ ತೃಪ್ತಿದಾಯಕ.
ಕುಂಭ: ಸಹೋದ್ಯೋಗಿಗಳಿಂದಲೂ ಸಹೋದರ ಸಮಾನರಿಂದಲೂ ಸಂದಭೋì ಚಿತ ಸಹಕಾರ ಲಭ್ಯ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಸಂಪತ್ತು. ದೀರ್ಘ ಪ್ರಯಾಣದ ವ್ಯವಹಾರದಲ್ಲಿ ಧನಲಾಭ. ವಾಕ್‌ಪಟುತ್ವ ವೃದ್ಧಿ. ಹಿರಿಯರ ಆಶೀರ್ವಾದದಿಂದ ಯಶಸ್ಸು.
ಮೀನ: ಆರೋಗ್ಯ ಗಮನಿಸಿ. ಉದಾಸೀನತೆ ತೋರದಿರಿ. ಸರಿಯಾದ ನಿಯಮ, ಆಹಾರ, ವ್ಯಾಯಾಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಸಾಂಸಾರಿಕ ಸುಖ ವೃದ್ಧಿ. ಉತ್ತಮ ಧನಾರ್ಜನ. ಗುರುಹಿರಿಯರ ಮಾರ್ಗದರ್ಶನ ಪಾಲಿಸುವುದರಿಂದ ಶ್ರೇಯಸ್ಸು ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.