ಕೋವಿಡ್: ಕೈದಿಗಳಿಗೆ ತಾತ್ಕಾಲಿಕ ಬಿಡುಗಡೆ
Team Udayavani, Apr 15, 2020, 6:45 PM IST
ಟರ್ಕಿ: ಜೈಲುಗಳಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಪ್ಪಿಸಲು ಮೂರನೇ ಒಂದು ಭಾಗದ ಕೈದಿಗಳನ್ನು ಮುಕ್ತಗೊಳಿಸಲು ಟರ್ಕಿಯ ಸಂಸದರು ಒಪ್ಪಿದ್ದಾರೆ.
ಆದರೆ ಭಯೋತ್ಪಾದನೆ ಆರೋಪದ ಮೇಲೆ ಜೈಲಿನಲ್ಲಿದ್ದ ದೇಶದ್ರೋಹಿಗಳನ್ನೂ ಸರಕಾರಿ ವಿರೋಧಿಗಳನ್ನು ಹೊರತು ಪಡಿಸಿದ್ದಕ್ಕಾಗಿ ಈ ಕ್ರಮವನ್ನು ಟೀಕಿಸಲಾಯಿತು.
ದೀರ್ಘಕಾಲದ ಜನ ದಟ್ಟಣೆಯನ್ನು ಕಡಿಮೆ ಮಾಡಲು ಕಳೆದವಾರ ಪ್ರಸ್ತಾಪಿಸಲಾದ ಯೋಜನೆಯಲ್ಲಿ 45,000 ಕೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡುವುದಾಗಿ ಎಂದು ಅಧ್ಯಕ್ಷÒ ರಿಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದರು. ಸೋಮವಾರ 17 ಕೈದಿಗಳು ಕೋವಿಡ್ 19 ವೈರಸ್ ಸೋಂಕಿತರಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಆದ್ದರಿಂದ ಕಾರಾಗೃಹಗಳಲ್ಲಿ ವೈರಸ್ ಏಕಾಏಕಿ ಉಲ್ಬಣಗೊಳ್ಳಬಹುದೆಂಬ ಆತಂಕಕ್ಕೆ ಕಾರಣವಾಗಿದೆ. ಟರ್ಕಿಯ ಮಾನವ ಹಕ್ಕುಗಳ ಸಂಘವು ಕಳೆದ ವಾರ 60 ವರ್ಷಕ್ಕಿ ಂತ ಮೇಲ್ಪಟ್ಟ ಗಂಭೀರ ಕಾಯಿಲೆ ಇರುವ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಕೋರಿತ್ತು.
ಭಯೋತ್ಪಾದಕ ಸಂಘಟನೆಯ ಆರೋಪದಡಿ ಟರ್ಕಿಯ ಎರಡನೆ ಅತಿದೊಡ್ಡ ವಿರೋಧ ಪಕ್ಷದ ಅಧ್ಯಕ್ಷ ಸೆಲಹ ಟ್ಟಿನ್ ಡೆಮಿರ್ಟಾಸ್ ರಿಗೆ ಕ್ಷಮಾಧಾನ ಸಿಕ್ಕಿಲ್ಲ. ಯುರೋಪಿನ ಅತಿದೊಡ್ಡ ಜೈಲು ಟರ್ಕಿಯಲ್ಲಿ ಸುಮಾರು 2,94,000 ಕೈದಿಗಳನ್ನು ಹೊಂದಿದೆ. 2019 ರ ಅಂಕಿ ಅಂಶಗಳ ಪ್ರಕಾರ 65 ವರ್ಷ ವಯಸ್ಸಿನ 3,500 ಕೈದಿಗಳಿದ್ದಾರೆ. ಕಾನೂನಿನ ಪ್ರಕಾರ ಕೈದಿಗಳನ್ನು ಆರ ಂಭದಲ್ಲಿ ಮೇ 31ರೊಳಗೆ ಬಿಡುಗಡೆ ಮಾಡುವ ಸಂಭವವಿದೆ. ಇದೇ ರೀತಿ ಹಲವು ದೇಶಗಳಲ್ಲಿ ಜೈಲುಗಳಲ್ಲಿನ ಕೈದಿಗಳನ್ನು ಸೋಂಕು ಹರಡುವುದನ್ನು ತಡೆಗಟ್ಟುವ ಕ್ರಮದ ಹಿನ್ನೆಲೆಯಲ್ಲಿ ಅವಧಿ ಮುನ್ನವೇ ಬಿಡುಗಡೆಗೊಳಿಸಲಾಗುತ್ತಿದೆ. ಅದೇ ಕ್ರಮವನ್ನು ಈಗ ಟರ್ಕಿ ಸರಕಾರವೂ ಅನುಸರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Viral: ಜನಪ್ರಿಯ ಟಿಕ್ ಟಾಕ್ ತಾರೆಯ ಖಾಸಗಿ ವಿಡಿಯೋ ಲೀಕ್.. ಭಾರೀ ವೈರಲ್
ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್ ನಿಧನ
US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.