ಟಿ.ವಿ. ಪಾಠಕ್ಕೆ 12 ಹೊಸ ಚಾನೆಲ್; ಮನೆಯಲ್ಲೇ ಕುಳಿತು ಶಾಲಾ ಪಾಠ ಕಲಿಕೆಗೆ ಅವಕಾಶ
Team Udayavani, May 9, 2020, 6:25 AM IST
ಹೊಸದಿಲ್ಲಿ: ನಗರಗಳ ಶಾಲೆಗಳು ಆನ್ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿದ್ದರೆ, ಅದೆಷ್ಟೋ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಆ ಭಾಗ್ಯ ಇಲ್ಲ. ಅದಕ್ಕಾಗಿಯೇ ಕೇಂದ್ರ ಮಾನವ ಸಂಪದ ಅಭಿವೃದ್ಧಿ ಸಚಿವಾಲಯ 12 ಹೊಸ ಚಾನೆಲ್ಗಳನ್ನು ಆರಂಭಿಸಲು ನಿರ್ಧರಿಸಿದೆ.
ಉದ್ದೇಶಿತ 12 ಡೈರೆಕ್ಟ್-ಟು-ಹೋಂ (ಡಿಟಿಎಚ್) ಚಾನೆಲ್ ಗಳು ಒಂದೊಂದು ತರಗತಿಗೆ ಮೀಸಲಿರುತ್ತವೆ ಎಂದು ಸಚಿವಾಲಯ ತಿಳಿಸಿದೆ. ಈಗಾಗಲೇ ಆನ್ಲೈನ್ ಮೂಲಕ ಪಾಠ ನಡೆ ಯು ತ್ತಿದ್ದರೂ ಅಂತರ್ಜಾಲ ಸಂಪರ್ಕದ ಅಲಭ್ಯ ಮತ್ತು ನಿಧಾನ ಗತಿಯ ಇಂಟರ್ ನೆಟ್ ನಿಂದಾಗಿ ಲಕ್ಷಾಂ ತರ ವಿದ್ಯಾರ್ಥಿಗಳಿಗೆ ಅದು ತಲುಪುತ್ತಿಲ್ಲ. ಹೀಗಾಗಿ ಒನ್ ಕ್ಲಾಸ್, ಒನ್ ಚಾನೆಲ್ ಯೋಜನೆ ಆರಂಭಿಸಲಾಗಿದೆ.
ಮನೆಯಲ್ಲೇ ಕಲಿಕೆ
ಶಾಲೆಗಳು ಎಂದು ಆರಂಭವಾಗುತ್ತವೆ ಎಂಬ ಅನಿಶ್ಚಿತತೆಯ ನಡುವೆ ಈ ಹೊಸ ಚಾನೆಲ್ಗಳು ಮಕ್ಕಳಿಗೆ ಮನೆ ಯಲ್ಲಿಯೇ ಕಲಿಕೆಯ ವಾತಾವರಣ ಸೃಷ್ಟಿಸಲಿವೆ.
ಪ್ರತಿಯೊಂದು ಚಾನೆಲ್ನಲ್ಲಿ ಏನೇನು ವಿಷಯ ಇರ ಬೇಕೆಂದು ಶಿಕ್ಷಣ ಇಲಾಖೆ ನಿರ್ಧರಿಸಲಿದೆ. ಜತೆಗೆ ವಿಷಯ ಅಭಿವೃದ್ಧಿಪಡಿಸಲು ಎನ್ಸಿಇಆರ್ಟಿ ಮತ್ತು ಸಿಬಿಎಸ್ಇ ಸಂಸ್ಥೆಗಳ ತಜ್ಞರ ನೆರವು ಪಡೆಯಲು ಇಲಾಖೆ ಚಿಂತನೆ ನಡೆಸಿದೆ. 1ರಿಂದ 12ನೇ ತರಗತಿಗೆ ಮೀಸಲಾಗಿರುವ ಈ ಚಾನೆಲ್ಗಳು ಉಚಿತವಾಗಿರಲಿದ್ದು, ಇವು ಆರಂಭವಾದ ಬಳಿಕ ಕೇಬಲ್ ಆಪರೇಟರ್ಗೆ ತಿಳಿಸಿ ಸಂಪರ್ಕ ಪಡೆಯಬಹುದು.
ಕರ್ನಾಟಕದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಮಕ್ಕಳವಾಣಿ ಎಂಬ ಯೂ ಟ್ಯೂಬ್ ಚಾನೆಲನ್ನು ಆರಂಭಿಸಿದ್ದು, ಇದು ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.