ನೆರೆ ಪರಿಹಾರ ತಾರತಮ್ಯ : ಕೇಂದ್ರ – ರಾಜ್ಯ ಸರಕಾರದ ವಿರುದ್ಧ ಟ್ವೀಟಾಂದೋಲನ
Team Udayavani, Oct 13, 2019, 8:59 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ರಾಜ್ಯದಲ್ಲಿ ಭೀಕರ ಪ್ರವಾಹ ಬಂದು ತಿಂಗಳೆರಡು ಕಳೆದರೂ ಕೇಂದ್ರ ಸರಕಾರ ಮಾತ್ರ ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಸ್ಪಂದಿಸಿಲ್ಲ. ಮಧ್ಯಂತರ ಪರಿಹಾರದ ರೂಪದಲ್ಲಿ 1,544.26 ಕೋಟಿ ರೂ.ಗಳನ್ನು ಮಾತ್ರ ಮಂಜೂರು ಮಾಡಿದ್ದು, ಇದು ಕೆಲವೇ ಜಿಲ್ಲೆಗಳಿಗೆ ಹಂಚುವಲ್ಲಿ ಮುಗಿದು ಹೋಗಲಿದೆ. ಕೇಂದ್ರ ಈ ನಡೆಯ ವಿರುದ್ಧ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ತುತ್ತಾಗಿದೆ. ಕೇಂದ್ರ ಸರಕಾರ ಈ ಧೋರಣೆಗೆ ರವಿವಾರ ಟ್ವೀಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
#1LakhcrorePackage2Karnataka ಹ್ಯಾಶ್‌ಟ್ಯಾಗ್ ಮೂಲಕ ಟ್ವೀಟಿಗರು ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ರಾಜ್ಯ ಪ್ರತಿವರ್ಷ 1 ಲಕ್ಷ ಕೋಟಿ ಹಣವನ್ನು ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ಪಾವತಿ ಮಾಡುತ್ತದೆ. ಅತೀ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. ಇಷ್ಟೆಲ್ಲಾ ತೆರಿಗೆಯನ್ನು ರಾಜ್ಯದಿಂದ ಸಂಗ್ರಹಿಸುವ ಕೇಂದ್ರ ಸರಕಾರ ನೆರೆ ಪರಿಹಾರದ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿದೆ ಎಂಬ ಆಕ್ರೋಶಗಳು ಕೇಳಿ ಬಂದಿವೆ.
ನೆರೆ ಮತ್ತು ಬರದಂತಹ ಕಷ್ಟದ ಕಾಲದಲ್ಲಿ ಕರ್ನಾಟಕಕ್ಕೆ ನೆರವು ನೀಡುವುದು ಒಕ್ಕೂಟ ಸರ್ಕಾರದ ಜವಾಬ್ದಾರಿಯಲ್ಲವೇ? ಈ ರೀತಿಯ ಕಷ್ಟ ಸುಖಕ್ಕೆ ಸ್ಪಂದಿಸದೇ ಭಾರತ ಬಲಿಷ್ಠ ರಾಷ್ಟ್ರವಾಗಲು ಸಾಧ್ಯವೇ?#1LakhcrorePackage2Karnataka #ಕರ್ನಾಟಕದ_ತೆರಿಗೆ_ಒಂದು_ವರ್ಷ_ವಾಪಸ್_ಕೊಡಿ pic.twitter.com/UNDETECpD4
— Karnataka Jobs For Kannadigas (@KJFK_Official) October 13, 2019
ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಹಮ್ಮಿಕೊಂಡ ಈ ಅಭಿಯಾದಲ್ಲಿ 2 ಸಾವಿರಕ್ಕೂ ಅಧಿಕ ಟ್ವೀಟ್‌ಗಳು ದಾಖಲಾಗಿವೆ. ಅತೀ ಕಡಿಮೆ ಅವಧಿಯಲ್ಲಿ ಈ ಪ್ರಮಾಣದ ಟ್ವೀಟುಗಳು ಹರಿದು ಬಂದವು. ಜನರು ತಮ್ಮ ಟ್ವೀಟ್‌ನ ಉದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರಕಾರದ ನಡೆಯನ್ನು ಖಂಡಿಸಿದ್ದಾರೆ. ತೆರಿಗೆ ಪಾವತಿಸಲು, ಅಧಿಕಾರಕ್ಕೆ ಬರಲು ಮಾತ್ರ ಕರ್ನಾಟಕ ಬೇಕು. ರಾಜ್ಯದ ಜನರ ವಿಚಾರ ಬಂದಾಗ ನೀವು ಸುಮ್ಮನಾಗಿ ಬಿಡುತ್ತೀರಿ ಎಂದು ರಾಜಕೀಯ ಪಕ್ಷಗಳನ್ನು ಟೀಕಿಸಿದ್ದಾರೆ.
Karnataka generates one of the highest revenue in form of various tax in India,
Karnataka was hit by flood & damaged almost 20+ districts including 16 districts of North Karnataka alone.
Its unfortunate central govt completely ignored our state.#1LakhcrorePackage2Karnataka
— Prathap ಕಣಗಾಲ್ (@Kanagalogy) October 13, 2019
#1LakhcrorePackage2Karnataka Acche Din for India pic.twitter.com/U5VKxwffiD
— shashi kiran (@gooner4glory) October 13, 2019
We are not begging just we are asking our right ..karnataka pays one of the highest tax paying in total states… #1LakhcrorePackage2Karnataka pic.twitter.com/Hz3CX1lpC5
— yashwanth (@Yashwanth1707) October 13, 2019
ನ್ಯಾಯಯುತ ಪರಿಹಾರಕ್ಕಾಗಿ ಆಗ್ರಹಿಸೋಣ ಬನ್ನಿ…#1LakhcrorePackage2Karnataka #ಕರ್ನಾಟಕದ_ತೆರಿಗೆ_ಒಂದು_ವರ್ಷ_ವಾಪಸ್_ಕೊಡಿ pic.twitter.com/7pFA6MaQWX
— SwarajIndiaKarnataka (@swarajindia_KA) October 13, 2019
3 ಬಾರಿ ಪ್ರವಾಹ.. 13 ಬಾರಿ ಬರ.. ಕರ್ನಾಟಕ್ಕಾದ ಈ ನಷ್ಟಕ್ಕೆ ಪರಿಹಾರ ಬೇಡವೇ? ನಮ್ಮಿಂದ ಕೇವಲ ತೆರಿಗೆ ಮಾತ್ರ ಬೇಕೆ? ಕೂಡಲೇ 1 ಲಕ್ಷ ಕೋಟಿ ರೂಗಳ ಪರಿಹಾರ ನೀಡಿ..#1LakhcrorePackage2Karnataka #ಕರ್ನಾಟಕದ_ತೆರಿಗೆ_ಒಂದು_ವರ್ಷ_ವಾಪಸ್_ಕೊಡಿ
— ಮಾದೇಶ್ ಗೌಡ ಕರುನಾಡ ಸೇವಕರು (@ModrMp4qlQ41T5w) October 13, 2019
ಇಂದು ಸಂಜೆ ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಲು ಮನವಿ……#1LakhcrorePackage2Karnataka#ಕರ್ನಾಟಕದ_ತೆರಿಗೆ_ಒಂದು_ವರ್ಷ_ವಾಪಸ್_ಕೊಡಿ pic.twitter.com/Prk1mj3X3Z
— KVS (@kvs_karnataka) October 13, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.