ಮೂರನೇ ಅಲೆ ಎದುರಿಸಲು ಪದ್ಮನಾಭನಗರ ಕ್ಷೇತ್ರದಲ್ಲಿ ಎರಡು ಮಕ್ಕಳ ಆಸ್ಪತ್ರೆ : ಸಚಿವ ಅಶೋಕ್
Team Udayavani, Jul 12, 2021, 9:09 PM IST
ಬೆಂಗಳೂರು : “ನಾವು ಕಳೆದ ಎರಡು ತಿಂಗಳಿಂದ ಆಹಾರ ಕಿಟ್‍ಗಳನ್ನು ಒದಗಿಸುತ್ತಿದ್ದೇವೆ ಮತ್ತು ಇನ್ನೂ ಹದಿನೈದು ದಿನಗಳವರೆಗೆ ಅದನ್ನು ಮುಂದುವರಿಸುತ್ತೇವೆ. ಎಲ್ಲಾ ಸಮುದಾಯಗಳು ಮತ್ತು ಕ್ಷೇತ್ರಗಳ ಜನರಿಗೆ ನಾವು ಕಿಟ್‍ಗಳನ್ನು ಒದಗಿಸಿದ್ದೇವೆ”, ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಸಮುದಾಯಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು “ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ನಾವು ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಪ್ರಮುಖ ಪಾಠವೆಂದರೆ ನಾವೆಲ್ಲರೂ ಒಂದೇ ಕುಟುಂಬದ ಭಾಗವಾಗಿದ್ದೇವೆ ಮತ್ತು ಬಿಕ್ಕಟ್ಟಿನ ಈ ಸಮಯದಲ್ಲಿ ಪರಸ್ಪರ ಸಹಕಾರ ನೀಡುವ ಅವಶ್ಯಕತೆಯಿದೆ.
ಕೆಲವರು ಹೆತ್ತವರ ಶವಗಳನ್ನು ತೆಗೆದುಕೊಂಡು ಹೋಗಲು ನಿರಾಕರಿಸಿದ ಕ್ಷಣಗಳನ್ನು ನಾವು ನೋಡಿದ್ದೇವೆ. ಅನೇಕರು ಚಿತಾಭಸ್ಮವನ್ನು ಪಡೆಯಲು ನಿರಾಕರಿಸಿದರು. ನಾವು ಆ ಅಸ್ಥಿಗಳನ್ನು ಕಾವೇರಿ ಸಂಗಮದಲ್ಲಿ ಬಿಡುವ ಕಾರ್ಯವನ್ನು ಮಾಡಿದ್ದೇವೆ. ಈಗ ತಜ್ಞರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಅದನ್ನು ನಿಭಾಯಿಸಲು ನಾವು ಈಗಲೇ ಸಜ್ಜಾಗುತ್ತಿದ್ದೇವೆ. ಮೊದಲನೇಯದಾಗಿ, ನಾವು ಡಿಸೆಂಬರ್ ವೇಳೆಗೆ ಅರ್ಹ ಫಲಾನುಭವಿಗಳಿಗೆ ಲಸಿಕೆ ಹಾಕುವ ಅವಶ್ಯಕತೆಯಿದೆ. ಎರಡನೇಯದಾಗಿ, ತಜ್ಞರು ಎಚ್ಚರಿಸಿದಂತೆ ಈಗಾಗಲೇ ಎರಡು ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪಿಸಿದ್ದೇವೆ. ಒಂದು ಪೆಟ್ರೋಲ್ ಪಂಪ್ ಬಳಿ ಮತ್ತು ಇನ್ನೊಂದು ಹೊಸಕೆರೆಹಳ್ಳಿ ಬಳಿ. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ” ಎಂದರು.
ಇದನ್ನೂ ಓದಿ : ಅದೊಂದು ಬಣ್ಣಿಸಲಾಗದ ಅನುಭೂತಿ : ಬಾಹ್ಯಾಕಾಶ ಪಯಣದ ಬಗ್ಗೆ ಶಿರಿಷಾ ಮಾತು
ಖ್ಯಾತ ನಟಿ ಮತ್ತು ಕರ್ನಾಟಕ ಅರಣ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಹಾಗೂ ನಟಿ ಎಂ.ಎಸ್.ತಾರಾ, “ಈ ಬಿಕ್ಕಟ್ಟಿನ ಸಮಯದಲ್ಲಿ ಕಂದಾಯ ಸಚಿವ ಶ್ರೀ ಆರ್ ಅಶೋಕ್ ತಮ್ಮ ಜನರೊಂದಿಗೆ ನಿಂತಿದ್ದಾರೆ ಮತ್ತು ಜನರಿಗೆ ಆಹಾರ ಕಿಟ್ ನೀಡುವ ಮೂಲಕ ಅದ್ಭುತ ಸೇವೆ ಮಾಡುತ್ತಿದ್ದಾರೆ ಎಂದು ತಿಳಿದಾಗ ನನಗೆ ಸಂತೋಷವಾಗಿದೆ. ಅವರು ನನ್ನ ಹಿರಿಯ ಸಹೋದರನಂತೆ ಮತ್ತು ಬಡವರಿಗೆ ಅವರು ಮಾಡಿದ ಸೇವೆಯ ಬಗ್ಗೆ ನನಗೆ ಹೆಮ್ಮೆ ಇದೆ”, ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.