ಮಿಜೋರಂನಲ್ಲಿ ಹೊಸ ಇರುವೆ ಪ್ರಭೇದ ಪತ್ತೆ : ಎರಡು ಪ್ರಭೇದ ಪತ್ತೆ ಹಚ್ಚಿದ ಬೆಂಗಳೂರು ತಜ್ಞರು
Team Udayavani, Jun 21, 2021, 10:44 PM IST
ನವದೆಹಲಿ: ಮಿರ್ಮಿಸೆನಾ ಎಂಬ ಜಾತಿಯ ಇರುವೆಯ ಎರಡು ಹೊಸ ಪ್ರಭೇದಗಳು ಮಿಜೋರಂನಲ್ಲಿ ಪತ್ತೆಯಾಗಿವೆ. ಬೆಂಗಳೂರು ಮೂಲದ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕೋಲಜಿ (ಎಟಿಆರ್ಇಇ) ಸಂಸ್ಥೆಯ ತಜ್ಞರು ಈ ಪ್ರಭೇದಗಳನ್ನು ಪತ್ತೆ ಹಚ್ಚಿದ್ದಾರೆ. ಈ ಸಂಶೋಧನೆಯಿಂದಾಗಿ, ಭಾರತದಲ್ಲಿ ಮಿರ್ಮಿಸೆನಾ ಇರುವೆಗಳ ಕುಲಕ್ಕೆ ಸೇರಿದ ಪ್ರಭೇದಗಳ ಸಂಖ್ಯೆ 7ಕ್ಕೇರಿದೆ.
ಏನಿದರ ಪ್ರಭೇದಗಳ ವಿಶೇಷ?
ಇವು ಅಪಾರ ಸಂಖ್ಯೆಯಲ್ಲಿ ಜೀವಿಸುವಂಥವಲ್ಲ. ಒಂದು ಸಣ್ಣ ಗೂಡಿನಲ್ಲಿ ಸುಮಾರು 30ರಿಂದ 150 ಮಾತ್ರ ಒಟ್ಟಿಗೆ ಇರುವಂಥವು. ಇವುಗಳ ಮೈಬಣ್ಣ ಹಳದಿ. ಕಾಲುಗಳ ಅಂಚು ಕಪ್ಪು ಮಿಶ್ರಿತ ಹಳದಿ ಬಣ್ಣದ್ದಾಗಿರುತ್ತದೆ. ಸಮುದ್ರ ಮಟ್ಟದಿಂದ ಸುಮಾರು 1,600ಕ್ಕಿಂತಲೂ ಹೆಚ್ಚು ಎತ್ತರದ ಪ್ರದೇಶಗಳಲ್ಲಿ ಹಾಗೂ ಸದಾ ನೆರಳು ಇರುವ ಪ್ರದೇಶಗಳಲ್ಲಿ ಇವು ಕಂಡುಬರುತ್ತವೆ ಎಂದು ಎಟಿಆರ್ಇಇ ತಜ್ಞ ಕಮಲ್ಜಿತ್ ಎಸ್ ಬಾವಾ ತಿಳಿಸಿದ್ದಾರೆ.
ಭಾರತದಲ್ಲಿ ಇದೇ ಮೊದಲು
ಸಾಮಾನ್ಯವಾಗಿ, ಈ ಪ್ರಭೇದಗಳು ಉತ್ತರ ಅಮೆರಿಕ, ಯೂರೋಪ್, ಉತ್ತರ ಆಫ್ರಿಕಾ, ಕೊರಿಯಾ, ಜಪಾನ್ ಹಾಗೂ ಆಸ್ಟ್ರೇಲಿಯಾದಲ್ಲಿ ಮಾತ್ರ ಕಂಡುಬರುತ್ತಿದ್ದವು. ಭಾರತದಲ್ಲಿ ಈ ಪ್ರಭೇದಗಳು ಪತ್ತೆಯಾಗಿರುವುದು ಇದೇ ಮೊದಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.