ಮತ್ತೆರಡು ವಾರ ಲಾಕ್‌ಡೌನ್‌?

ಈ ಮಾಸಾಂತ್ಯದವರೆಗೆ ಮುಂದುವರಿಕೆ ಸಾಧ್ಯತೆ ; ಕರ್ನಾಟಕ ಸಹಿತ ಕೆಲವು ರಾಜ್ಯಗಳಿಂದ ಮುಂದುವರಿಸಲು ಮನವಿ

Team Udayavani, Apr 8, 2020, 6:15 AM IST

ಮತ್ತೆರಡು ವಾರ ಲಾಕ್‌ಡೌನ್‌?

ಹೊಸದಿಲ್ಲಿ/ಬೆಂಗಳೂರು: ಕೋವಿಡ್ 19 ಪ್ರಸರಣದ ಸರಪಳಿಯನ್ನು ಮುರಿಯುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಘೋಷಿಸಿದ್ದ ದೇಶವ್ಯಾಪಿ 21 ದಿನಗಳ ಲಾಕ್‌ಡೌನ್‌ ಎಪ್ರಿಲ್‌ 14ರ ಬಳಿಕವೂ ಮುಂದುವರಿಯಲಿದೆಯೇ?

ಹೌದು ಎನ್ನುತ್ತಿವೆ ಮೂಲಗಳು. ಹಲವು ರಾಜ್ಯ ಸರಕಾರಗಳು ಮತ್ತು ತಜ್ಞರ ಕೋರಿಕೆಯ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ವಿಸ್ತರಣೆ ಮಾಡುವ ಕುರಿತು ಕೇಂದ್ರ ಸರಕಾರ ಪರಿಶೀಲಿಸುತ್ತಿದೆ ಎಂದು ಸರಕಾರದ ಮೂಲಗಳೇ ಮಾಹಿತಿ ನೀಡಿವೆ. ಈ ಮಾಸಾಂತ್ಯದ ವರೆಗೆ ಮುಂದು ವರಿಯುವ ಸಾಧ್ಯತೆ ಇದೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇಶವ್ಯಾಪಿ 21 ದಿನಗಳ ನಿರ್ಬಂಧ ವಿದ್ದರೂ ಸೋಂಕು ಪೀಡಿತರ ಸಂಖ್ಯೆ ಏರುತ್ತಲೇ ಇದೆ. ದೇಶಾದ್ಯಂತ ಒಟ್ಟು ಪ್ರಕರಣಗಳ ಪೈಕಿ ಮೂರನೇ ಒಂದರಷ್ಟು ಪ್ರಕರಣಗಳನ್ನು ಹೊಂದಿರುವ 7 ರಾಜ್ಯಗಳು ಎ. 14ರ ಬಳಿಕವೂ ಲಾಕ್‌ಡೌನ್‌ ಮುಂದುವರಿಸಬೇಕು ಎಂಬ ಬೇಡಿಕೆಯನ್ನು ಸರಕಾರದ ಮುಂದಿ ಟ್ಟಿವೆ. ಹಲವು ತಜ್ಞರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಕಾರಣ, ಈ ನಿಟ್ಟಿನಲ್ಲಿ ಸರಕಾರ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ. ಆದರೆ ಇನ್ನೂ ಅದು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಊಹೆ ಮಾಡಬೇಡಿ
ಈ ಎಲ್ಲ ಬೆಳವಣಿಗೆಗಳ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಲಾಕ್‌ಡೌನ್‌ ವಿಸ್ತರಣೆಯಾಗುವ ವರದಿಗಳನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಇನ್ನಷ್ಟೇ ವಿಸ್ತೃತ ಚರ್ಚೆ ನಡೆಯಬೇಕಿದೆ. ಚರ್ಚೆಯ ಬಳಿಕವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಲ್ಲಿಯ ವರೆಗೂ ಕಾಯಿರಿ, ಸುಮ್ಮನೆ ಊಹೆ ಮಾಡಿಕೊಳ್ಳ ಬೇಡಿ ಎಂದಿದ್ದಾರೆ. ಜತೆಗೆ ಲಾಕ್‌ ಡೌನ್‌ ಅನ್ನು ಹಂತ ಹಂತವಾಗಿ ಮುಂದುವರಿಸಲಾಗುತ್ತದೆ ಎಂಬ ಮಾಧ್ಯಮ ವರದಿಗಳನ್ನೂ ಅವರು ತಳ್ಳಿ ಹಾಕಿದ್ದಾರೆ.

ವಿಸ್ತರಣೆಗೆ ಬೆಂಬಲ
ಲಾಕ್‌ಡೌನ್‌ ವಿಸ್ತರಣೆಗೆ ನನ್ನ ಬೆಂಬಲ ಇದೆ ಎಂದು ತೆಲಂಗಾಣ ಸಿಎಂ ಹೇಳಿ¨ªಾರೆ. ಕರ್ನಾ ಟಕ, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯ  ಪ್ರ ದೇಶ, ಉತ್ತರಪ್ರದೇಶ, ಅಸ್ಸಾಂ, ಛತ್ತೀಸ್‌ಗಢಗಳೂ ಧ್ವನಿಗೂಡಿಸಿದ್ದು, ಎ.14ರಿಂದ ಸಂಪೂರ್ಣ ನಿರ್ಬಂಧ ತೆರವು ಮಾಡುವುದಿಲ್ಲ ಎಂದಿವೆ.

ಒಬ್ಬ ವ್ಯಕ್ತಿಯಿಂದ 406 ಮಂದಿಗೆ ಸೋಂಕು !
ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂ ಸಿದ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವ ಕೋವಿಡ್ 19 ಸೋಂಕುಪೀಡಿತ ವ್ಯಕ್ತಿಯೊಬ್ಬನಿಂದ 30 ದಿನಗಳಲ್ಲಿ ಸರಾಸರಿ 406 ಮಂದಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದರೆ ಸದ್ಯಕ್ಕೆ ಹಲವು ಕ್ರಮಗಳನ್ನು ಕೈಗೊಂಡಿರುವ ಅಂದರೆ, ಶೇ.70ರಷ್ಟು ಕಠಿನ ಕ್ರಮಗಳು ಜಾರಿಯಲ್ಲಿರುವ ಕಾರಣ ಒಬ್ಬ ವ್ಯಕ್ತಿಯಿಂದ ಗರಿಷ್ಠ 2.5 ಮಂದಿಗೆ ಸೋಂಕು ತಗುಲಬಹುದು ಎಂದು ಸರಕಾರ ಮಂಗಳವಾರ ತಿಳಿಸಿದೆ. ಇದನ್ನು ಆರ್‌- ನಾಟ್‌ (R0) ಎಂಬುದರ ಮೂಲಕ ಅಳೆಯಲಾಗುತ್ತದೆ. “ಆರ್‌ -ನಾಟ್‌’ ಎಂದರೆ ಯಾವುದೇ ಸೋಂಕು ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ದರ. ಇದರ ಮೂಲಕ ಅಧ್ಯಯನ ನಡೆಸಿದಾಗ, ಸೋಂಕುಪೀಡಿತ ನಿರ್ಬಂಧವಿಲ್ಲದೇ ತಿರುಗಾಡುತ್ತಿದ್ದರೆ ಆತನಿಂದ ಒಂದು ತಿಂಗಳಲ್ಲಿ 406 ಮಂದಿಗೆ ಸೋಂಕು ತಗುಲಬಹುದು. ನಿರ್ಬಂಧಗಳನ್ನು ಪಾಲಿಸುತ್ತಿದ್ದರೆ 2.5 ಮಂದಿಗೆ ಮಾತ್ರ ತಗುಲಬಹುದು ಎಂದು ತಿಳಿದುಬಂದಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿದೆ.

ಜಪಾನ್‌ : ತುರ್ತು ಪರಿಸ್ಥಿತಿ
ಕೋವಿಡ್ 19ದಿಂದ ಕಂಗೆಟ್ಟಿರುವ ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಟೋಕಿಯೋ ಸೇರಿದಂತೆ ಆರು ಪ್ರದೇಶಗಳಲ್ಲಿ ಒಂದು ತಿಂಗಳ ಕಾಲ ತುರ್ತು ಪರಿಸ್ಥಿತಿ ಜಾರಿಯಲ್ಲಿ ಇರಲಿದೆ. ದೇಶದ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಮತ್ತು ಜನರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಜಪಾನ್‌ ಪ್ರಧಾನಿ ಶಿನೋ ಅಬೆ ತಿಳಿಸಿದ್ದಾರೆ. ಸದ್ಯ ಜಪಾನ್‌ನಲ್ಲಿ 3,900 ಪ್ರಕರಣಗಳು ಕಂಡುಬಂದಿದ್ದು, 92 ಮಂದಿ ಸಾವನ್ನಪ್ಪಿದ್ದಾರೆ. ಜತೆಗೆ 592 ಮಂದಿ ಗುಣಮುಖರಾಗಿದ್ದಾರೆ.

ಬಡವರಾದ ಸಿರಿವಂತರು!
ಕೋವಿಡ್ 19ದಿಂದಾಗಿ ಚೀನ ಹೊರತು ಪಡಿಸಿ ಜಗತ್ತಿನ ಎಲ್ಲ ಷೇರು ಮಾರುಕಟ್ಟೆಗಳೂ ಪಾತಾಳಕ್ಕೆ ಕುಸಿದಿವೆ. ಹೀಗಾಗಿ ಶೇ.86 ಸಿರಿ ವಂತರು ಭಾರೀ ಪ್ರಮಾಣದ ಆಸ್ತಿ ಕಳೆದುಕೊಂಡಿದ್ದಾರೆ. ಜಗ ತ್ತಿನ ಟಾಪ್‌ 100 ಬಿಲಿಯನೇರ್‌ಗಳು 408 ಶತಕೋಟಿ ಡಾಲರ್‌ಗಳಷ್ಟು ಆಸ್ತಿ ಕಳೆದು ಕೊಂಡಿದ್ದಾರೆ. ಆದರೆ ಚೀನದ 9 ಸಿರಿವಂತರು 13.3 ಶತಕೋಟಿ ಡಾಲರ್‌ಗಳಷ್ಟು ಆಸ್ತಿಯನ್ನು ಹೆಚ್ಚಾಗಿ ಸಂಪಾದಿಸಿ ಕೊಂಡಿದ್ದಾರೆ. ಇದೆಲ್ಲದರ ನಡುವೆ ಶೇ.5ರಷ್ಟು ಸಿರಿ ವಂತರ ಆಸ್ತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ!

13 ಲಕ್ಷ ಮೀರಿದ ಸಂಖ್ಯೆ
ಜಾಗತಿಕವಾಗಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮಂಗಳವಾರ ಸಂಜೆ ವೇಳೆಗೆ ಇದು 13.50 ಲಕ್ಷ ಮೀರಿತ್ತು. ಅಮೆರಿಕದಲ್ಲೇ 3.68 ಲಕ್ಷ ಸೋಂಕುಪೀಡಿತರಿದ್ದು, ಅದು ಹೆಚ್ಚುತ್ತಲೇ ಇದೆ. ಸ್ಪೇನ್‌ ಎರಡನೇ ಸ್ಥಾನದಲ್ಲಿದ್ದು, ಇಲ್ಲಿ 1.36 ಲಕ್ಷ, ಇಟಲಿಯಲ್ಲಿ 1.32 ಲಕ್ಷ, ಜರ್ಮನಿಯಲ್ಲಿ 1.03 ಲಕ್ಷ, ಫ್ರಾನ್ಸ್‌ನಲ್ಲಿ 98 ಸಾವಿರ ಸೋಂಕುಪೀಡಿತರು ಪತ್ತೆಯಾಗಿದ್ದಾರೆ. ವಿಚಿತ್ರವೆಂದರೆ ಈ 5 ದೇಶ ಗಳಲ್ಲೇ 8.40 ಲಕ್ಷ ಸೋಂಕುಪೀಡಿತರು ಇದ್ದಾರೆ.

ಸಾವಿನ ಲೆಕ್ಕಾಚಾರದಲ್ಲೂ ಐರೋಪ್ಯ ದೇಶಗಳು ಮೊದಲ ಸ್ಥಾನ ದ ಲ್ಲಿವೆ. ಇಟಲಿಯಲ್ಲಿ 16 ಸಾವಿರ, ಸ್ಪೇನ್‌ ನಲ್ಲಿ 13 ಸಾವಿರ, ಅಮೆ ರಿಕದಲ್ಲಿ 10 ಸಾವಿರ, ಫ್ರಾನ್ಸ್‌ನಲ್ಲಿ 9 ಸಾವಿರ, ಇಂಗ್ಲೆಂಡ್‌ ನಲ್ಲಿ 5 ಸಾವಿರ ಮಂದಿ ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಅಮೆರಿಕವು ಸಾವಿನಲ್ಲೂ ದಾಖಲೆ ಬರೆದಿದ್ದು, ಇದುವರೆಗೆ 24 ತಾಸುಗಳ ಅವಧಿಯಲ್ಲಿ 1,200 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾ ರೆ ಯಾಗಿ ಜಗತ್ತಿನಾದ್ಯಂತ 75,000ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ.

ಫಾರ್ವರ್ಡ್‌ಗೆ ಮಿತಿ ಹೇರಿದ ವಾಟ್ಸ್‌ಆ್ಯಪ್‌
ಇನ್ನು ಮುಂದೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವನ್ನು ನೀವು ಒಂದು ಸಂಖ್ಯೆ ಅಥವಾ ಗುಂಪಿಗೆ ಮಾತ್ರ ಫಾರ್ವರ್ಡ್‌ ಮಾಡಲು ಸಾಧ್ಯ. ಹೆಚ್ಚು ಜನರಿಗೆ ಕಳಿಸಬೇಕೆಂದರೆ ಒಬ್ಬೊಬ್ಬರಿಗೆ ಪ್ರತ್ಯೇಕವಾಗಿ ಫಾರ್ವರ್ಡ್‌ ಮಾಡುತ್ತಾ ಹೋಗಬೇಕು.

ಕೋವಿಡ್ 19 ಸೋಂಕಿನ ಕುರಿತು ಸುಳ್ಳು ಸುದ್ದಿಗಳನ್ನು ತಡೆಯುವ ಉದ್ದೇಶದಿಂದ ಫಾರ್ವರ್ಡ್‌ ಮಿತಿಯನ್ನು ವಾಟ್ಸ್‌ಆ್ಯಪ್‌ ಸಂಸ್ಥೆ ಕೇವಲ ಒಂದಕ್ಕೆ ಸೀಮಿತಗೊಳಿಸಿದೆ. ಈ ಮಿತಿ ಜಗತ್ತಿನಾದ್ಯಂತ ಅನ್ವಯವಾಗಲಿದೆ.

ಕನಿಷ್ಠ ಐದು ಮಂದಿ ಅಥವಾ ಗುಂಪುಗಳಿಗೆ ತಲುಪಿರುವ ಸಂದೇಶದ ಮುಂದೆ ಬಾಣದ ಗುರುತು ಹಾಕುವ ಮೂಲಕ ಈಗಾಗಲೇ ಫಾರ್ವರ್ಡ್‌ ಸಂದೇಶಗಳನ್ನು ಗುರುತಿಸುವ ಫೀಚರ್‌ ಅನ್ನು ವಾಟ್ಸ್‌ಆ್ಯಪ್‌ ಪರಿಚಯಿಸಿದೆ. ಈಗ ಫಾರ್ವರ್ಡ್‌ ಮಾಡಲಾದ ಸಂದೇಶದ ಮುಂದೆ ಭೂತಗನ್ನಡಿಯ ಐಕಾನ್‌ ಇರಲಿದ್ದು, ಸಂದೇಶವನ್ನು ಮತ್ತೂಬ್ಬರಿಗೆ ಕಳುಹಿಸುವ ಮೊದಲು ಅದನ್ನೊಮ್ಮೆ ಪರಿಶೀಲಿಸಿ ಎಂಬ ಸೂಚನೆಯನ್ನು ಈ ಐಕಾನ್‌ ನೀಡುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಟಾಪ್ ನ್ಯೂಸ್

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.