ಉದಯವಾಣಿ “ಚಿಣ್ಣರ ಬಣ್ಣ 2024′: ನ.2-3ರಂದು ಎರಡನೇ ಹಂತದ ಸ್ಪರ್ಧೆ
ಅ.27ರ ತನಕ 10 ತಾಲೂಕುಗಳ 9 ಕೇಂದ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದೆ.
Team Udayavani, Oct 31, 2024, 10:06 AM IST
ಉಡುಪಿ: ಉದಯವಾಣಿ ದಿನಪತ್ರಿಕೆಯು ಉಡುಪಿಯ ಆರ್ಟಿಸ್ಟ್ ಫೋರಂನ ಸಹಯೋಗ ದೊಂದಿಗೆ 1ರಿಂದ10ನೇ ತರಗತಿ
ವಿದ್ಯಾರ್ಥಿಗಳಿಗಾಗಿ ಆಯೋಜಿಸಿಕೊಂಡು ಬರುತ್ತಿರುವ ಕರಾವಳಿ ಕರ್ನಾಟಕದ ಪ್ರತಿಷ್ಠಿತ ಮಕ್ಕಳ ಚಿತ್ರಕಲಾ ಸ್ಪರ್ಧೆ “ಚಿಣ್ಣರ ಬಣ್ಣ-2024′ ಮೊದಲ ಹಂತದ ಸ್ಪರ್ಧೆಯು ಅ.26ರಿಂದ ಆರಂಭಗೊಂಡು ಅ.27ರ ತನಕ 10 ತಾಲೂಕುಗಳ 9 ಕೇಂದ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದೆ.
ಪ್ರತಿ ಕೇಂದ್ರದಲ್ಲಿ ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು. 2ನೇ ಹಂತದ ಸ್ಪರ್ಧೆ ನ.2ರಿಂದ ಆರಂಭಗೊಳ್ಳಲಿದೆ. ನ.2ರಂದು ಮೂಡು ಬಿದಿರೆ ತಾಲೂಕು ಮಟ್ಟದ ಸ್ಪರ್ಧೆ ಕೆ.ಅಮರನಾಥ ಶೆಟ್ಟಿ ಸಭಾಂಗಣದ ಕೃಷಿಸಿರಿ ವೇದಿಕೆ ವಿದ್ಯಾಗಿರಿ ಮೂಡುಬಿದಿರೆಯಲ್ಲಿ ಬೆಳಗ್ಗೆ 9.30ರಿಂದ 11.30ರ ತನಕ ಜರಗಲಿದೆ. ಬಂಟ್ವಾಳ ತಾಲೂಕು ಮಟ್ಟದ ಸ್ಪರ್ಧೆ ನ.2ರಂದು
ಸ್ಪರ್ಶ ಕಲಾ ಮಂದಿರ ನಾರಾಯಣ ಗುರು ವೃತ್ತದ ಬಳಿ ಬಿ.ಸಿ ರೋಡ್‌ನಲ್ಲಿ ಬೆಳಗ್ಗೆ 9.30ರಿಂದ 11.30ರ ತನಕ ಜರಗಲಿದೆ.
ಮೂಲ್ಕಿ ತಾಲೂಕು ಮಟ್ಟದ ಸ್ಪರ್ಧೆ ನ.3ರಂದು ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮೂಲ್ಕಿಯಲ್ಲಿ ಬೆಳಗ್ಗೆ 9.30ರಿಂದ 11.30ರ ತನಕ ಜರಗಲಿದೆ. ಉಳ್ಳಾಲ ತಾಲೂಕು ಮಟ್ಟದ ಸ್ಪರ್ಧೆ ನ.3ರಂದು ಕಣಚೂರು ಪಬ್ಲಿಕ್ ಸ್ಕೂಲ್ ದೇರಳಕಟ್ಟೆಯಲ್ಲಿ ಬೆಳಗ್ಗೆ 9.30ರಿಂದ 11.30ರ ವರೆಗೆ ನಡೆಯಲಿದೆ.
ಕಾರ್ಕಳ ತಾಲೂಕು ಮಟ್ಟದ ಸ್ಪರ್ಧೆ ನ.3ರಂದು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳದಲ್ಲಿ ಬೆಳಗ್ಗೆ 9.30ರಿಂದ 11.30 ತನಕ ಜರಗಲಿದೆ. ಕಾಪು ತಾಲೂಕು ಮಟ್ಟದ ಸ್ಪರ್ಧೆ ನ.3ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನ
ದಲ್ಲಿ ಬೆಳಗ್ಗೆ 9.30ರಿಂದ 11.30ರ ತನಕ ನಡೆಯಲಿದೆ. ಉಡುಪಿ ತಾಲೂಕು ಮಟ್ಟದ ಸ್ಪರ್ಧೆ ನ.3ರಂದು ಸೈಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸಿಬಿಎಸ್‌ಸಿ ಕನ್ನರ್ಪಾಡಿಯಲ್ಲಿ ಅಪರಾಹ್ನ 3ರಿಂದ 5ರ ತನಕ ನಡೆಯಲಿದೆ. ಮಂಗಳೂರು ತಾಲೂಕು ಮಟ್ಟದ ಸ್ಪರ್ಧೆ ನ.3ರಂದು ಕೆನರಾ ಹೈಸ್ಕೂಲ್ ಉರ್ವ ಮಂಗಳೂರಿನಲ್ಲಿ ಅಪರಾಹ್ನ 3ರಿಂದ 5ರ ತನಕ ನಡೆಯಲಿದೆ.
ಸ್ಪರ್ಧೆಯ ವಿಷಯ
1ನೇ ತರಗತಿಯಿಂದ 3ನೇ ತರಗತಿ ಹಾಗೂ 4ರಿಂದ 7ನೇ ತರಗತಿಯ ಮಕ್ಕಳು ಐಚ್ಛಿಕ ವಿಷಯದಲ್ಲಿ ಚಿತ್ರ ಬಿಡಿಸಬಹುದು. 8ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಸ್ಥಳದಲ್ಲಿಯೇ ವಿಷಯ ತಿಳಿಸಲಾಗುತ್ತದೆ.
ನಿಯಮಾವಳಿ
ಸ್ಪರ್ಧಿಗಳು ಸ್ಥಳದಲ್ಲಿ ಹೆಸರು ನೋಂದಾಯಿಸಬೇಕು. ಡ್ರಾಯಿಂಗ್ ಶೀಟ್ ನೀಡಲಾಗುತ್ತದೆ. ಚಿತ್ರಬಿಡಿಸಲು ಬೇಕಾದ ಇತರ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರ ಮತ್ತು ಗಿಫ್ಟ್ ಹ್ಯಾಂಪರ್ ನೀಡಲಾಗುತ್ತದೆ. ಪ್ರತಿಯೊಂದು ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ. ಫಲಿತಾಂಶ ಮತ್ತು ವಿಜೇತರ ಚಿತ್ರಗಳನ್ನು ಉದಯವಾಣಿಯಲ್ಲಿ ಪ್ರಕಟಿಸಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.