Udayavani ಸಹಯೋಗದ ಕಾರ್ಯಾಗಾರ: “ಪ್ರತಿ ಮನೆ‌, ಕಟ್ಟಡದಲ್ಲೂ ಮಳೆ ನೀರು ಕೊಯ್ಲು ಬರಲಿ ‘

ಎಲ್ಲದಕ್ಕೂ ಪರ್ಯಾಯ ಹುಡುಕಬಹುದು. ಆದರೆ ನೀರಿಗೆ ಪರ್ಯಾಯವಿಲ್ಲ...

Team Udayavani, Mar 4, 2024, 10:57 AM IST

Udayavani ಸಹಯೋಗದ ಕಾರ್ಯಾಗಾರ: “ಪ್ರತಿ ಮನೆ‌, ಕಟಡದಲ್ಲೂ ಮಳೆ ನೀರು ಕೊಯ್ಲು ಬರಲಿ ‘

ಉಡುಪಿ: ಹೊಟ್ಟೆ ಹಸಿದಾಗ ಊಟ ಸಿಗದೇ ಒಂದು ಲೋಟ ನೀರು ಸಿಕ್ಕರೂ ಆ ಹೊತ್ತಿಗೆ ಅದೇ ಪರಮಾನ್ನ. ಊಟ, ನೀರು ಎರಡೂ ಸಿಗದಿದ್ದರೆ? ಪರಿಸ್ಥಿತಿ ಹೇಗಿರಲಿದೆ ಎನ್ನುವುದು ಊಹಿಸಿ ಕೊಳ್ಳಬಹುದು. ನೀರನ್ನು ಮಿತವಾಗಿ ಬಳಸದೇ, ಮಳೆ ನೀರನ ಸದ್ಬಳಕೆ ಮಾಡದಿದ್ದರೆ ನೀರಿನ ಸಮಸ್ಯೆಯ ತೀವ್ರತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಎಲ್ಲದಕ್ಕೂ ಪರ್ಯಾಯ ಹುಡುಕಬಹುದು. ಆದರೆ ನೀರಿಗೆ ಪರ್ಯಾಯವಿಲ್ಲ. ನೀರಿಗೆ ನೀರೇ ಪರ್ಯಾಯ.

ಈ ನಿಟ್ಟಿನಲ್ಲಿ ಪ್ರತಿ ಮನೆ/ ಕಟ್ಟಡಗಳಲ್ಲೂ ಮಳೆ ನೀರು ಕೊಯ್ಲು ಅಳವಡಿಕೆಯಾಗಬೇಕು. ಭೂಮಿಗೆಬಿದ್ದ ಪ್ರತಿ ಹನಿ ಮಳೆಯೂ ಕೆರೆ, ಬಾವಿ, ಕೊಳವೆ ಬಾವಿ ಮೂಲಕ ಅಂತರ್ಜಲ ಸೇರಬೇಕು. ಆ ಮೂಲಕ ಅಂತರ್ಜಲ ವೃದ್ಧಿಯಾಗಬೇಕು. ಪ್ರತಿ ಮನೆಯೂ ನೀರಿನ ವಿಷಯವಾಗಿ ಸ್ವಾವಲಂಬಿಯಾ ಬೇಕು ಎಂಬ ಆಶಯದೊಂದಿಗೆ “ಉದಯವಾಣಿ’ ದಿನಪತ್ರಿಕೆ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಜತೆ ಸೇರಿ ಮಳೆನೀರು ಕೊಯ್ಲು ಕಾರ್ಯಾಗಾರವನ್ನು ಶನಿವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್‌ ಬಿಹಾರ ವಾಜಪೇಯಿ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.

ತೋಡಿನ ನೀರೂ ಉಪಯೋಗಿ
ಸಣ್ಣ ಹಳ್ಳ, ತೊರೆ, ತೋಡುಗಳಲ್ಲಿ ಹರಿಯುವ ಮಳೆ ನೀರನ್ನು ಮಾತ್ರ ಬೋರ್‌ವೆಲ್‌ಗ‌ಳಿಗೆ ರೀಚಾರ್ಜ್‌ ಮಾಡಬಹುದು. ಕೊಳವೆ ಬಾವಿಗೆ ರೀಚಾರ್ಜ್‌ ಮಾಡುವ ವಿಧಾನದಲ್ಲೇ ಮಾಡಬೇಕು. ಆದರೆ, ತೋಡಿನಿಂದ ನೀರು ಸರಾಗವಾಗಿ ಹರಿದು ರಿಂಗ್‌ನೊಳಗೆ ಹೋಗುವಂತೆ ನೋಡಿಕೊಳ್ಳುವುದು ಅತಿ ಅವಶ್ಯಕ. ಬಿಪಿಎಲ್‌ ಕುಟುಂಬಕ್ಕೆ ಕೊಳವೆ ಬಾವಿ ಜಲಮರುಪೂರಣಕ್ಕೆ ನರೇಗಾದಡಿ ಅವಕಾಶವಿದೆ ಎನ್ನುತ್ತಾರೆ ಜೋಸೆಫ್ ರೆಬೆಲ್ಲೋ.

ಬೋರ್‌ವೆಲ್‌ಗೆ ಬಿಡಬಹುದು
ಎಷ್ಟೇ ಜೋರು ಮಳೆ ಇದ್ದರೂ ಕೊಳವೆ ಬಾವಿಗೆ ಮಳೆ ಕೊçಲು ನೀರು ಬಿಡಬಹುದು. ಅದು ತೆಗೆದುಕೊಳ್ಳುತ್ತದೆ. ಬಹುತೇಕ ಬಾವಿ ಭೂಮಿಯ ಶಿಲಾ ಪದರದ ಮೇಲೆ ಇರುತ್ತದೆ. ಆದರೆ ಕೊಳವೆ ಬಾವಿ ಶಿಲಾಪದರದ ಕಳೆಗೆ ಇಳಿಯುತ್ತದೆ. ಶಿಲಾ ಪದರದ ಕೆಳಕ್ಕೆ ನೀರು ಸುಲಭವಾಗಿ ಹೋಗುವುದಿಲ್ಲ. ಶಿಲೆಯಲ್ಲಿ ಬಿರುಕು ಇದ್ದಾಗ ಮಾತ್ರ ಹೋಗುತ್ತದೆ. ಕೊಳವೆ ಬಾವಿಗೆ ಮಳೆ ಕೊçಲು ಅಳವಡಿಸಿ ಸುಲಭವಾಗಿ ಖಾಲಿ ಗುಹೆ ತುಂಬಿಸಬಹುದು.

ನೀರಿನ ರೀಸೈಕಲ್‌ ಆಗಬೇಕು
ನಾವು ಬಳಸಿದ ನೀರು ಪುನರ್‌ ಬಳಕೆ ಮಾಡುತ್ತಿಲ್ಲ. ಚರಂಡಿ/ ಒಳಚರಂಡಿ ಮೂಲಕ ಶುದ್ಧೀಕರಿಸಿ, ಕೆಲವೆಡೆ ಶುದ್ಧೀಕರಿಸದೆಯೇ ಸಮುದ್ರಕ್ಕೆ ಬಿಡುತ್ತಿದ್ದೇವೆ. ಭೂಮಿಯಿಂದ ತೆಗೆದ ನೀರು ಸಮುದ್ರಕ್ಕೆ ಬಿಟ್ಟರೆ ಅಂತರ್ಜಲ ಬರಿದಾಗದೇ ಇರುವುದೇ? ಹೀಗಾಗಿ ಮನೆಗಳಲ್ಲಿ ಸಣ್ಣ ಸಣ್ಣ ಸೋಕ್‌ ಪಿಟ್‌ಗಳನ್ನು ಅಳವಡಿಸಿಕೊಂಡು ನೀರು ಭೂಮಿಗೆ ಸೇರುವಂತೆ ಮಾಡಬೇಕು. ಭೂಮಿಯಿಂದ ಶುದ್ಧ ನೀರು ತೆಗೆಯುವ ನಾವು ಭೂಮಿಗೆ ಶುದ್ಧ ನೀರನ್ನೇ ಬಿಡಬೇಕು. ಇದಕ್ಕಾಗಿ ಮನೆಗಳಲ್ಲಿ ನೀರಿನ ಪುನರ್‌ ಬಳಕೆಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು.

ಮಳೆ ಕೊಯ್ಲು ಅಳವಡಿಕೆ
ಮಳೆ ಕೊಯ್ಲು ಅಳವಡಿಕೆ ಎಲ್ಲೆಡೆಗೂ ಮಾಡಬಹುದು. ಹೆಂಚಿನ ಮನೆ ಎಂಬ ಕಾರಣಕ್ಕೆ ಮಾಡಲು ಸಾಧ್ಯವಿಲ್ಲ ಎಂದಿಲ್ಲ ಅಥವಾ ನಗರ ಪ್ರದೇಶದಲ್ಲಿದ್ದೇವೆ ಸ್ಥಳದ ಕೊರತೆಯಿದೆ ಎಂಬ ಕಾರಣಕ್ಕೂ ಮಾಡಲು ಸಾಧ್ಯವಿಲ್ಲ ಎಂದಿಲ್ಲ. ಹೆಂಚಿನ ಮನೆ, ಆರ್‌ಸಿಸಿ ಮನೆ, ದೊಡ್ಡ ಕಟ್ಟಡಗಳು, ಆಸ್ಪತ್ರೆ, ಶಾಲಾ ಕಾಲೇಜು, ಸಭಾಭವನ, ಅರ್ಪಾಟ್‌ಮೆಂಟ್‌ ಹೀಗೆ ಎಲ್ಲ ಕಡೆಗಳಲ್ಲೂ ಅಳವಡಿಸಿಕೊಳ್ಳಬಹುದು. ಮನೆಯಿಂದ ಬಾವಿ ಅಥವಾ ಕೊಳವೆ ಬಾವಿ ಎಷ್ಟು ದೂರವಿದೆ ಮತ್ತು ಯಾವ ವಿಧಾನ ಅಳವಡಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಖರ್ಚು ನಿರ್ಧಾರವಾಗುತ್ತದೆ.

ನಾಲ್ಕು ಪ್ರಮುಖಾಂಶ

ಯಾವುದೇ ವಿಧಾನದಲ್ಲಿ ಮಳೆ ಕೊಯ್ಲು ಮಾಡಿದರೂ ನಾಲ್ಕು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
1. ನಿರ್ವಹಣೆ ತುಂಬ ಕಡಿಮೆ ಇರಬೇಕು. 2. ಪ್ಲಂಬಿಂಗ್‌ ಕಾರ್ಯ ಅಥವಾ ರಿಪೇರಿಗೆ ಬಂದಾಗ ಸುಲಭವಾಗಿ ಕೆಲಸ ಮಾಡುವಂತೆ ಇರಬೇಕು. 3. ಮಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ಭೂಮಿಗೆ ಇಳಿಯಬೇಕು. 4. ವೇಗವಾಗಿ ಇಳಿಯಬೇಕು.

ತೆರೆದ ಬಾವಿಗೆ ಅಳವಡಿಸುವ ವಿಧಾನ


ತೆರೆದ ಬಾವಿಗೆ ಮಳೆ ಕೊçಲು ಅಳವಡಿಸುವಾಗ ಫಿಲ್ಟರ್‌ ಹಾಕಬೇಕು. ವಾರಕ್ಕೊಮ್ಮೆ ಸ್ವಚ್ಛ ಮಾಡಬೇಕು. ಕೆಲಸ ಜಾಸ್ತಿ ಇರುತ್ತದೆ.
ಸುಲಭವೆಂದರೆ 2 ಅಡಿ ಅಗಲ, 3 ಅಡಿ ಎತ್ತರದ ಟ್ಯಾಂಕ್‌ ಅಳವಡಿಸಿ, ಅದರ ತಳಭಾಗದಲ್ಲಿ ನೀರು ಸರಾಗವಾಗಿ ಹರಿಯುವಂತೆ ಇರುವ ಪ್ಲಾಸ್ಟಿಕ್‌ ಬಕೆಟ್‌ ಅಥವಾ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಲಾಸ್ಟಿಕ್‌ ಫಿಲ್ಟರ್‌ ಇಟ್ಟು ಅನಂತರ ನಿರ್ದಿಷ್ಟ ಪ್ರಮಾಣದ ಜೆಲ್ಲಿ ಹಾಕಬೇಕು. ಅರ್ಧದಷ್ಟು ಭಾಗ ಖಾಲಿ ಇಡಬೇಕು. ಟ್ಯಾಂಕ್‌ನ ಕೆಳಬಾಗದಿಂದ ಪೈಪ್‌ ಸಂಪರ್ಕ ನೇರ
ಬಾವಿಗೆ ನೀಡಬಹುದು. ಬಾವಿಯ ತಳಭಾಗಕ್ಕೆ ಪೈಪ್‌ ಇರುವಂತೆ ನೋಡಿಕೊಳ್ಳಬೇಕು.

ಕೊಳವೆ ಬಾವಿಗೆ ಮಳೆ ಕೊಯ್ಲು ಹೇಗೆ?
ಕೊಳವೆ ಬಾವಿ ಸುತ್ತ (ನಿರ್ದಿಷ್ಟ ಗಾತ್ರದ ಜಾಗದ ಮಿತಿಗೆ ಅನುಗುಣವಾಗಿ) ಗುಂಡಿ ತೆಗೆದು ರಿಂಗ್‌ ಹಾಕಬೇಕು. ರಿಂಗ್‌ನ ತಳಭಾಗದಲ್ಲಿ ಒಂದು ಅಡಿ ಜಲ್ಲಿ ಹಾಕಿ. ಅದರ ಮೇಲೆ ಬೋರ್ವೆಲ್‌‌ ಕೇಸಿಂಗ್‌(ಒಳಗಿನ ಪೈಪ್‌ಗೆ ಹಾನಿಯಾಗದಂತೆ) ನೇರಕ್ಕೆ ತೂತು ಮಾಡಬೇಕು (ಅಡ್ಡತೂತು ಮಾಡಿದರೆ ಕೇಸಿಂಗ್‌ ಒಡೆಯುವ ಸಾಧ್ಯತೆ ಇರುತ್ತದೆ). ಅನಂತರ ಸ್ಟೀಲ್‌/ ನೈಲಾನ್‌ ಮೆಶ್‌ ಸುತ್ತಬೇಕು. ಕಾಪರ್‌ ವೈರ್‌ನಲ್ಲೇ ಕಟ್ಟ ಬೇಕು (ತುಕ್ಕು ಹಿಡಿಯುವುದಿಲ್ಲ). ಅನಂತರ ನೀರು ಬೀಳುವಂತೆ ನೋಡಿಕೊಳ್ಳಬೇಕು.
ಇಂಗುಗುಂಡಿ ಮಾದರಿಯಲ್ಲಿರುವುದ ರಿಂದ ಮೇಲಿಂದ ಚೆನ್ನಾಗಿ ಮುಚ್ಚಬೇಕು. ಸೊಳ್ಳೆ ಆಗದಂತೆ ಪರದೆ ಅಳವಡಿಸಬಹುದು.

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BUS driver

Bus ticket; ದೀಪಾವಳಿ ಸಂಭ್ರಮಕ್ಕೆ ಬಸ್‌ ಟಿಕೆಟ್‌ ದರ ತಣ್ಣೀರು

1-mahe

MAHE-Mangalore University ಒಡಂಬಡಿಕೆ : ಮೂಳೆ ಅಲೋಗ್ರಾಫ್ಟ್‌ಗಳ ಗಾಮಾ ವಿಕಿರಣ

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

1-ottin

Baindur; ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

5

Jokatte: ಸಂಪೂರ್ಣ ಹದೆಗೆಟ್ಟ ಕೂಳೂರು, ಕೈಗಾರಿಕೆ ವಲಯದ-ಜೋಕಟ್ಟೆ ರಸ್ತೆ

10-bng

Bengaluru: ಬೊಲೆರೊದಲ್ಲಿ ಬಂದು ಮೇಕೆ ಕಳ್ಳತನ ; 29 ಕುರಿ, ಮೇಕೆ, ವಾಹನ ಜಪ್ತಿ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.