ಸಿಎಂ ಸ್ಥಾನ ಉಳಿಸಿಕೊಂಡ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ವಿಧಾನ ಪರಿಷತ್ಗೆ 9 ಮಂದಿ ಅವಿರೋಧ ಆಯ್ಕೆ
Team Udayavani, May 14, 2020, 8:36 PM IST
ಮುಂಬೈ: ಮಹಾರಾಷ್ಟ್ರ ಸಿಎಂ ಸ್ಥಾನವನ್ನು ಉದ್ಧವ್ ಠಾಕ್ರೆ ಉಳಿಸಿಕೊಂಡಿದ್ದಾರೆ. ಠಾಕ್ರೆ ಸೇರಿದಂತೆ 9 ಮಂದಿ ಅಭ್ಯರ್ಥಿಗಳು ವಿಧಾನಪರಿಷತ್ಗೆ ಆಯ್ಕೆಯಾಗಿರುವ ಬಗ್ಗೆ ಘೋಷಣೆ ಮಾಡಲಾಗಿದೆ. ಹೀಗಾಗಿ ಅವರು ನಿರಾತಂಕವಾಗಿ ಆಡಳಿತ ಸೂತ್ರ ಮುನ್ನಡೆಸಲು ಅವಕಾಶ ಸಿಕ್ಕಂತಾಗಿದೆ.
2019ರ ನ.28ರಂದು ಪ್ರಮಾಣ ವಚನ ಸ್ವೀಕರಿಸಿದ್ದ ಉದ್ಧವ್ 27ರೊಳಗೆ ವಿಧಾನ ಪರಿಷತ್ ಅಥವಾ ಶಾಸಕರಾಗಬೇಕಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆ ಕೂಡ ಮುಂದೂಡಲಾಗಿತ್ತು. ರಾಜ್ಯಪಾಲರ ಕೋಟಾದಲ್ಲಿ ಸಿಎಂರನ್ನು ನೇಮಕ ಮಾಡುವ ಬಗ್ಗೆ ಮಹಾರಾಷ್ಟ್ರ ವಿಕಾಸ ಅಘಾಡಿ ಸಂಪುಟ ಶಿಫಾರಸು ಮಾಡಿದ್ದರೂ, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅದರ ಬಗ್ಗೆ ಮೌನ ವಹಿಸಿದ್ದರು.
ಇದರಿಂದ ಕ್ರುದ್ಧರಾಗಿದ್ದ ಸಿಎಂ ಉದ್ಧವ್ ನೇರವಾಗಿ ಪ್ರಧಾನಿ ಫೋನ್ ಮಾಡಿ ತಮ್ಮ ನೇತೃತ್ವದ ಸರ್ಕಾರ ಉರುಳಿಸುವ ಯತ್ನ ನಡೆಯುತ್ತಿದೆ ಎಂದು ದೂರಿದ್ದರು. ನಂತರ ಪರಿಷತ್ ಚುನಾವಣೆಗೆ ಅವಕಾಶ ಕಲ್ಪಿಸಲಾಯಿತು. ಠಾಕ್ರೆ ಜತೆಗೆ ಪರಿಷತ್ ಉಪಸಭಾಪತಿ ನೀಲಂ , ಬಿಜೆಪಿಯಿಂದ ರಂಜಿತ್ಸಿನ್ಹಾ ಮೊಹಿತ್ ಪಾಟೀಲ್, ಗೋಪಿಚಂದ್ ಪಡಲ್ಕರ್, ಪ್ರವೀಣ್ , ರಮೇಶ್ ಕಾರಾದ್, ಎನ್ಸಿಪಿಯಿಂದ ಶಶಿಕಾಂತ್ ಶಿಂಧೆ, ಅಮೂಲ್ ಮಿಟ್ಕರಿ ಹಾಗೂ ಕಾಂಗ್ರೆಸ್ನಿಂದ ರಾಜೇಶ್ ರಾಥೋಡ್ ಪರಿಷತ್ಗೆ ಆಯ್ಕೆಯಾಗಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.