Udupi: 25 ಯುವ ಯಕ್ಷಾವತಾರಿಗಳನ್ನು ಕಂಡು ಭಾವಪರವಶನಾದೆ: ಭಾಗವತ ಎಂ. ದಿನೇಶ್‌ ಅಮ್ಮಣ್ಣಾಯ

ಉಡುಪಿ: 34ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಸಂಪನ್ನ

Team Udayavani, Aug 17, 2024, 2:01 PM IST

Udupi: 25 ಯುವ ಯಕ್ಷಾವತಾರಿಗಳನ್ನು ಕಂಡು ಭಾವಪರವಶನಾದೆ: ಭಾಗವತ ಎಂ. ದಿನೇಶ್‌ ಅಮ್ಮಣ್ಣಾಯ

ಉಡುಪಿ: ಅಭೂತಪೂರ್ವವಾದ ವೇದಿಕೆಯಲ್ಲಿ 25 ಯುವ ಯಕ್ಷಾವತಾರಿಗಳನ್ನು ಕಂಡು ಭಾವಪರವಶನಾದೆ ಎಂದು ಹಿರಿಯ ಭಾಗವತ ಎಂ. ದಿನೇಶ್‌ ಅಮ್ಮಣ್ಣಾಯ ಹೇಳಿದರು.

ಕಿದಿಯೂರು ಹೊಟೇಲ್‌ನ ಶೇಷಶಯನ ಹಾಲ್‌ನಲ್ಲಿ ಗುರುವಾರ ನಡೆದ ಕಲೆಯ ಮೂಲಕ ರಾಷ್ಟ್ರಪ್ರೇಮ ಉತ್ತೇಜಿಸುವ ದೃಷ್ಟಿಯಿಂದ ಕಲಾ ಸಂಘಟಕ ಸುಧಾಕರ ಆಚಾರ್ಯರ ಅವರ ಕಲಾರಾಧನೆಯ 34ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಆಚರಣೆಯಲ್ಲಿ ನಿರಂತರ 25 ವರ್ಷಗಳ ಕಾಲ ಭಾಗವತಿಕೆ ನಡೆಸಿಕೊಟ್ಟ ಅವರು ರಜತ ಗೌರವ ಸ್ವೀಕರಿಸಿ ಮಾತನಾಡಿದರು.

ಯಕ್ಷಗಾನದಲ್ಲಿ ನಾನಿಷ್ಟು ಎತ್ತರಕ್ಕೆ ಬೆಳೆಯಲು ದೇವರ ಆಶೀರ್ವಾದ, ಕಲಾಭಿಮಾನಿಗಳ ಅಭಿಮಾನವೇ ಕಾರಣ. ಕಲಾಭಿಮಾನಿಗಳ ಹೃದಯದ ಆತ್ಮೀಯತೆಯೇ ಭಾವಪೂರ್ಣವಾಗಿ ಹಾಡಲು ಸಾಧ್ಯವಾಗಿದೆ. ಕಲಾ ಸರಸ್ವತಿಯನ್ನು ಆರಾಧಿಸುವುದು ನನ್ನ ಕರ್ತವ್ಯ ಎನ್ನುವ ನೆಲೆಯಲ್ಲಿ ನಿವೃತ್ತನಾದರೂ ಹಾಡುತ್ತಿದ್ದೇನೆ ಎಂದರು.

ಶ್ರೀ ಕ್ಷೇತ್ರ ಕಟೀಲು ಅರ್ಚಕ ಶ್ರೀನಿವಾಸ ವೆಂಕಟರಮಣ ಅಸ್ರಣ್ಣ ಶುಭಾಶಂಸನೆಗೈದರು. ಅತಿಥಿಗಳಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಆರ್ಥೋಪೆಡಿಕ್‌ ಸರ್ಜನ್‌ ಡಾ| ಸಾಯಿ ಗಣೇಶ್‌ ಶೆಟ್ಟಿ, ಡಾ| ಭವ್ಯಶ್ರೀ ಕಿದಿಯೂರು, ಡಾ| ಅಭಿನ್‌ ದೇವದಾಸ್‌ ಶ್ರೀಯಾನ್‌, ಪ್ರಕಾಶ್‌ ರಿಟೇಲ್ಸ್‌ನ ಆಪರೇಶನ್ಸ್‌ ಹೆಡ್‌ ಸಮೃದ್ಧ್ ಪ್ರಕಾಶ್‌, ಮಣಿಪಾಲ ಯುವ ವಿದ್ಯಾರ್ಥಿ ನಾಯಕ ಕನಿಷ್ಕ್‌, ಕಿಶನ್‌ ಹೆಗ್ಡೆ, ಸುಧಾ ದಿನೇಶ್‌ ಅಮ್ಮಣ್ಣಾಯ ಉಪಸ್ಥಿತರಿದ್ದರು.

ಸಂಘಟಕ ಸುಧಾಕರ ಆಚಾರ್ಯ, ಅಮಿತಾ ಸುಧಾಕರ ಆಚಾರ್ಯ, ಆಚಾರ್ಯ ಯಾಸ್ಕಾ, ಮೇದಿನಿ ಆಚಾರ್ಯ ಭಾಗವಹಿಸಿದ್ದರು. ಡಾ| ವಿಟ್ಲ ಹರೀಶ್‌ ಜೋಷಿ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ತ್ರಿಲೋಚನ ಶಾಸ್ತ್ರೀ, ಡಾ| ಪೃಥ್ವಿರಾಜ್‌ ಕವತ್ತಾರ್‌, ಮಹೇಂದ್ರ ಆಚಾರ್ಯ ಹೇರಂಜೆ, ರತನ್‌ರಾಜ್‌ ರೈ ಮಣಿಪಾಲ, ಅಜಿತ್‌ ಕುಮಾರ್‌ ಅಂಬಲಪಾಡಿ, ವಸಂತ ಪಾಣಾಜೆ, ನರಸಿಂಹ ಭಟ್‌ ಖಂಡಿಗೆ ಕಾರ್ಯಕ್ರಮಕ್ಕೆ ಸಹಕರಿಸಿದ್ದರು. ಪ್ರೊ| ಪವನ್‌ ಕಿರಣಕೆರೆ ಪ್ರಸ್ತಾವನೆಗೈದರು. ಸುಜಯೀಂದ್ರ ಹಂದೆ ನಿರೂಪಿಸಿ, ವಂದಿಸಿದರು.

.”ವೈಕುಂಠ ದರ್ಶನ’ ತಾಳಮದ್ದಳೆ”
ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಭಾಗವತ-ಕವಿ ಬೊಟ್ಟಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಆಧಾರಿತ “ವೈಕುಂಠ ದರ್ಶನ’ ಯಕ್ಷಗಾನ ತಾಳಮದ್ದಳೆ ನೆರವೇರಿತು. ತಾಳಮದ್ದಳೆ ಹಿಮ್ಮೇಳದಲ್ಲಿ ಎಂ. ದಿನೇಶ್‌ ಅಮ್ಮಣ್ಣಾಯ, ರವಿಚಂದ್ರ ಕನ್ನಡಿಕಟ್ಟೆ, ಭರತ್‌ರಾಜ್‌ ಶೆಟ್ಟಿ ಸಿದ್ಧಕಟ್ಟೆ, ಗುರುಪ್ರಸಾದ್‌ ಬೊಳಂಜಡ್ಕ, ಸಮರ್ಥ ಉಡುಪ, ಅದ್ವೆ„ತ್‌ ಕನ್ಯಾನ, ರಾಜೇಂದ್ರ ಕೃಷ್ಣ, ಪಾತ್ರ ವರ್ಗದಲ್ಲಿ ಮಹೇಂದ್ರ ಆಚಾರ್ಯ ಹೇರಂಜೆ, ಸುಣ್ಣಂಬಳ ವಿಶ್ವೇಶ್ವರ ಭಟ್‌, ಹಿರಣ್ಯ ವೆಂಕಟೇಶ್‌ ಭಟ್‌, ಹರೀಶ್‌ ಬಳಂತಿಮುಗರು, ಪ್ರೊ| ಪವನ್‌ ಕಿರಣಕೆರೆ, ಸುಜಯೀಂದ್ರ ಹಂದೆ, ವಾಸುದೇವ ರಂಗಭಟ್‌ ಭಾಗವಹಿಸಿದ್ದರು.

ಅನ್ನಬ್ರಹ್ಮನ ನಾಡಲ್ಲಿ ನಾದಬ್ರಹ್ಮ
ಪ್ರೊ| ಪವನ್‌ ಕಿರಣಕೆರೆ ಅವರ ನಾದ ನಿರ್ದೇಶನದಲ್ಲಿ ವೈಕುಂಠದ ಭಾಗವತರ ಸಮ್ಮೇಳವದ ಕಲ್ಪನೆಯಡಿಯಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಲಯದ 6ನೇ ತರಗತಿಯಿಂದ ಪದವಿ-ಸ್ನಾತಕೋತ್ತರ ಪದವಿ ವರೆಗಿನ ವಿದ್ಯಾರ್ಥಿಗಳು, ಎಂಜಿನಿಯರ್‌, ವೈದ್ಯರನ್ನು ಒಳಗೊಂಡ 6 ತೆಂಕುತಿಟ್ಟು, 6 ಬಡಗುತಿಟ್ಟು, 6 ಮಹಿಳಾ ಭಾಗವತರ ಜತೆಗೆ 7 ಚೆಂಡೆ-ಮದ್ದಳೆ ವಾದಕರನ್ನು ಸೇರಿಸಿ 25 ಯುವ ಯಕ್ಷಾವತಾರಿಗಳ ಸಾಂಗತ್ಯದಲ್ಲಿ ವೈಕುಂಠದ ಭಾಗವತರ ಸಮ್ಮೇಳವ ಕಲ್ಪನೆಯಲ್ಲಿ “ನಾದ ವೈಕುಂಠ’ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ಡಾ| ವಾದಿರಾಜ ಕಲ್ಲೂರಾಯ ನಾದ ನಿರ್ವಹಣೆಯಲ್ಲಿ ಮೂಡಿ ಬಂದ “ನಾದ ವೈಕುಂಠ’ದಲ್ಲಿ ತೆಂಕುತಿಟ್ಟಿನ ಯುವ ಭಾಗವತರಾದ ಡಾ| ಪ್ರಖ್ಯಾತ್‌ ಶೆಟ್ಟಿ, ಚಿನ್ಮಯ ಭಟ್‌ ಕಲ್ಲಡ್ಕ, ಭರತ್‌ರಾಜ್‌ ಶೆಟ್ಟಿ ಸಿದ್ಧಕಟ್ಟೆ, ಮನ್ವಿತ್‌ ಶೆಟ್ಟಿ ಇರಾ, ಪವನ್‌ ರೈ ಪಾಣಾಜೆ, ಲಕ್ಷ್ಮೀನಾರಾಯಣ ಹೊಳ್ಳ, ವಿಶ್ವಾಸ್‌ ಭಟ್‌ ಕರ್ಬೆಟ್ಟು, ಬಡಗುತಿಟ್ಟಿನ ಸೃಜನ್‌ ಗಣೇಶ ಹೆಗಡೆ, ಸುದೀಪ್‌ ಚಂದ್ರ ಶೆಟ್ಟಿ, ದರ್ಶನ್‌ ಗೌಡ ಕಲ್ಮನೆ, ಮಧುಕರ ಹೆಗ್ಡೆ ಮಡಾಮಕ್ಕಿ, ಪ್ರಸನ್ನ ಕುಮಾರ್‌ ಹೆಗಡೆ, ಸಾತ್ಯಕಿ ತೆಕ್ಕಟ್ಟೆ, ಮಹಿಳಾ ಭಾಗವತರಾದ ಅಮೃತಾ ಕೌಶಿಕ್‌ ರಾವ್‌, ಶ್ರೀರಕ್ಷಾ ಹೆಗಡೆ, ಶ್ರೇಯಾ ಆಚಾರ್ಯ ಅಲಂಕಾರು, ಸಿಂಚನಾ ಮೂಡುಕೋಡಿ, ಇಂಚರ ಶಿವಪುರ, ಅಭಿಜ್ಞಾ ಹೆಗಡೆ ಶಿರಸಿ, ಹಿಮ್ಮೇಳದಲ್ಲಿ ತೆಂಕುತಿಟ್ಟಿನ ಸತ್ಯಜಿತ್‌ ರಾವ್‌, ಸಮರ್ಥ ಉಡುಪ, ಅದೈತ್‌ ಕನ್ಯಾನ, ಕು| ವಂದನಾ ಮೇಲಂಕಿ, ಬಡಗುತಿಟ್ಟಿನ ಪ್ರಜ್ವಲ್‌ ಮುಂಡಾಡಿ, ವಿಶ್ವಂಬರ ಅಲ್ಸೆ, ಅಕ್ಷಯ್‌ ಪ್ರಭು ಪಾಲ್ಗೊಂಡಿದ್ದರು.

ಐತಿಹಾಸಿಕ ಮೈಲುಗಲ್ಲು
ಪೂರ್ವರಂಗದ ಸ್ತುತಿ ಪದ್ಯಗಳು, ಅಪರೂಪದ ಶೃಂಗಾರ ಪದ್ಯಗಳು ಹಾಗೂ ಸಾಂ ಕ ಪ್ರಸ್ತುತಿಯಲ್ಲಿ ಅಷ್ಟಕಗಳ ನಾವಿನ್ಯ ಪ್ರಯೋಗದೊಂದಿಗೆ ಪ್ರಸ್ತುತಗೊಂಡ “ನಾದ ವೈಕುಂಠ’ವು ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವ ಮೂಲಕ ಯಕ್ಷಕಲೋಕದಲ್ಲಿ ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ.

ಟಾಪ್ ನ್ಯೂಸ್

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

5-savanur

ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

2-katapady

Katapady:ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.