Udupi: ಆಗಸ್ಟ್ 5-27: ಶ್ರೀಕೃಷ್ಣಮಠದಲ್ಲಿ ಅಷ್ಟಮಿ ಸ್ಪರ್ಧೆಗಳು
ಆ. 27ರ ಸಂಜೆ 4ರಿಂದ ರಾಜಾಂಗಣದಲ್ಲಿ ಹುಲಿವೇಷ ಸ್ಪರ್ಧೆ, ಜಾನಪದ ಸ್ಪರ್ಧೆ, ಪೌರಾಣಿಕ ಹಿನ್ನೆಲೆಯ ನೃತ್ಯ ಪ್ರದರ್ಶನ
Team Udayavani, Aug 4, 2024, 6:30 AM IST
ಉಡುಪಿ: ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಆ.5ರಿಂದ 27ರ ವರೆಗೆ ವಿವಿಧ ಸ್ಪರ್ಧೆಗಳು ಜರಗಲಿವೆ.
ಕುಣಿತ ಭಜನೆ ಸ್ಪರ್ಧೆ ಸಾರ್ವಜನಿಕರಿಗೆ – ಆ. 5ರಿಂದ 9ರ ತನಕ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ, ಮ. 2ರಿಂದ 4.30ರ ತನಕ ರಾಜಾಂಗಣದಲ್ಲಿ, ಗೀತಾ ಕಂಠಪಾಠ- ಆ. 10ರ ಮ. 2.30ರಿಂದ 5ರ ತನಕ ಗೀತಾ ಮಂದಿರದಲ್ಲಿ 1ರಿಂದ 3ನೇ ತರಗತಿ-15ನೇ ಅಧ್ಯಾಯದ 5 ಶ್ಲೋಕ, 4ರಿಂದ 7ನೇ ತರಗತಿ 15ನೇ ಅಧ್ಯಾಯ 15 ಶ್ಲೋಕ, 8ರಿಂದ 10ನೇ ತರಗತಿ 15ನೇ ಅಧ್ಯಾಯ ಪೂರ್ಣ.
ಚಿತ್ರಕಲೆ -ಆ. 11ರ ಬೆ. 10ರಿಂದ 12ರ ವರೆಗೆ ಮಧ್ವಾಂಗಣದಲ್ಲಿ 3ರಿಂದ 5, 6ರಿಂದ 7, 8ರಿಂದ 10ನೇ ತರಗತಿ (ವಿಷಯ-ಆಯ್ಕೆ: ಉಡುಪಿ ಶ್ರೀಕೃಷ್ಣ, ಗೀತೋಪದೇಶ, ಶ್ರೀಕೃಷ್ಣ ತುಲಾಭಾರ, ಗೋವರ್ಧನಧಾರಿ, ಕಾಳೀಯ ಮರ್ದನ, ಬಾಲಕೃಷ್ಣ) ಆಶುಭಾಷಣ- ಆ. 11ರ ಬೆ. 10ರಿಂದ 12ರ ತನಕ ಗೀತಾ ಮಂದಿರದಲ್ಲಿ ಪ್ರೌಢಶಾಲೆ ಮತ್ತು ಪ.ಪೂ. ವಿಭಾಗದವರಿಗೆ, ಬತ್ತಿ ಮಾಡುವುದು ಸಾರ್ವಜನಿಕರಿಗೆ- ಆ. 11ರ ಮ. 3ರಿಂದ 3.30ರ ತನಕ ಗೀತಾ ಮಂದಿರದಲ್ಲಿ, ಅದೇ ದಿನ ಮ. 3.30ರಿಂದ 4.30ರ ತನಕ ಕನಕ ಮಂಟಪದಲ್ಲಿ ಷಣ್ಮುಖ ಹೆಬ್ಟಾರ್ ಸಂಚಾಲಕತ್ವದಲ್ಲಿ 5ರಿಂದ 7, 8ರಿಂದ 10ನೇ ತರಗತಿ ವರೆಗಿನವರಿಗೆ ರಸ ಪ್ರಶ್ನೆ, ಲೇಖನ ಸ್ಪರ್ಧೆ-50 ಪ್ರಶ್ನೆಗಳು, ಸಂಜೆ 4ರಿಂದ 5ರ ತನಕ ಗೀತಾ ಮಂದಿರದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ-ವಿಷಯ: ಉಡುಪಿ ಶ್ರೀಕೃಷ್ಣ ಚರಿತ್ರೆ, ಪ್ರೌಢಶಾಲಾ ಮಕ್ಕಳಿಗೆ ವಿಷಯ: ಗೋವರ್ಧನೋದ್ಧಾರಕ ಲೀಲೆ 1 ಗಂಟೆ ಅವಧಿಯ ಪ್ರಬಂಧ ಸ್ಪರ್ಧೆ.
ಶಂಖ ಊದುವ ಸ್ಪರ್ಧೆ- ಆ. 17ರ ಮ. 2ರಿಂದ 3ರ ವರೆಗೆ ಮಧ್ವ ಮಂಟಪದಲ್ಲಿ ಸಾರ್ವಜನಿಕರಿಗೆ, ಭಕ್ತಿ ಸಂಗೀತ-ದಾಸ ಸಾಹಿತ್ಯ: ಆ. 18ರ ಬೆ. 10ರಿಂದ 12ರ ವರೆಗೆ ಗೀತಾ ಮಂದಿರದಲ್ಲಿ 1ರಿಂದ 4ನೇ ಮತ್ತು 5ರಿಂದ 7ನೇ ತರಗತಿ ಮಕ್ಕಳಿಗೆ, ಮಧ್ವ ಮಂಟಪದಲ್ಲಿ ಮ. 2ರಿಂದ 5ರ ತನಕ 8ರಿಂದ 10ನೇ ತರಗತಿ ಮಕ್ಕಳಿಗೆ, ಡಿಗ್ರಿ, ವಯಸ್ಕರಿಗೆ, ಭಜನೆ ಸ್ಪರ್ಧೆ-ಆ. 18ರ ಬೆ. 10ರಿಂದ 12.30ರ ತನಕ ರಾಜಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ, ಅದೇ ದಿನ ಬೆ. 9.30ರಿಂದ ರಥಬೀದಿಯಲ್ಲಿ ಸಾರ್ವಜನಿಕರಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವುದು, ಸೊಪ್ಪಿನ ಆಟ, ಜುಬಿಲಿ (5 ಜನ), ಸೈಕಲ್ ಚಲಾಯಿಸುವುದು, ಕಾಳುಗಳ ವಿಂಗಡಿಸುವಿಕೆ, ಬಂಡಿ ಓಟ, ಸ್ಲೋ ಸೈಕಲ್ ರೇಸ್, ಬೆಲ್ಚೆಂಡು, ತಟ್ಟೆ ಓಟ/ನಡಿಗೆ, ಹಗ್ಗ ಗಂಟು ಹಾಕುವಿಕೆ, ಟೊಂಕ ಆಟ, ಬಾಳೆಹಣ್ಣು ತಿನ್ನುವಿಕೆ, ದೇವರ ನಾಮದಿಂದ ಆಟ, ಗೋಣಿಚೀಲ ಓಟ, ವಿಶಲ್ ಚೇರ್ ಇತ್ಯಾದಿ ಆಟಗಳು ಕ್ರೀಡೋತ್ಸವ.
ಆ. 24ರ ಬೆಳಗ್ಗೆ ಗೀತಾ ಮಂದಿರದಲ್ಲಿ 10ರಿಂದ 10.30ರ ವರೆಗೆ ಸಾರ್ವಜನಿಕರಿಗೆ ಮೊಸರು ಕಡೆಯುವುದು, ಮ. 2ರಿಂದ 4ರ ತನಕ ಪ್ರೌಢಶಾಲೆ ಹಾಗೂ 20 ವರ್ಷ ಮೇಲ್ಪಟ್ಟವರ ವಿಭಾಗದವರಿಗೆ ಶ್ರೀಕೃಷ್ಣ ಕಥಾ ಸ್ಪರ್ಧೆ, ಮ. 3.30ರಿಂದ 4.30ರ ತನಕ ಕನಕ ಮಂಟಪದಲ್ಲಿ ಸಾರ್ವ ಜನಿಕರಿಗೆ ಹೂ ಕಟ್ಟುವಿಕೆ ಸ್ಪರ್ಧೆ. ಆ. 25ರ ಬೆ. 10ರಿಂದ 12ರ ವರೆಗೆ ರಾಜಾಂಗಣ/ಮಧ್ವಾಂಗಣದಲ್ಲಿ 2 ಗಂಟೆ ಅವಧಿಯ 16 ವರ್ಷದೊಳಗಿನ ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟವರಿಗೆ ರಂಗೋಲಿ, ಅದೇ ದಿನ ರಾಜಾಂಗಣದಲ್ಲಿ ಬೆ. 10ರಿಂದ 1ರ ತನಕ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ, ಮ. 2ರಿಂದ 4ರ ತನಕ ಮಡಕೆಯಲ್ಲಿ ಬಣ್ಣದ ಚಿತ್ತಾರ ಜರಗಲಿದೆ.
ಆ. 26ರ ಬೆ. 9.30ರಿಂದ ಗೀತಾ ಮಂದಿರದಲ್ಲಿ 0-1 ವರ್ಷದವರೆಗೆ ಬೆಣ್ಣೆಕೃಷ್ಣ, 1-3 ವರ್ಷದವರೆಗೆ ಮುದ್ದುಕೃಷ್ಣ, ರಾಜಾಂಗಣದಲ್ಲಿ 3-5 ವರ್ಷದವರೆಗೆ ಬಾಲಕೃಷ್ಣ, 5-8 ವರ್ಷದವರೆಗೆ ಕಿಶೋರಕೃಷ್ಣ, ಆ. 27ರ ಸಂಜೆ 4ರಿಂದ ರಾಜಾಂಗಣದಲ್ಲಿ ಹುಲಿವೇಷ ಸ್ಪರ್ಧೆ, ಜಾನಪದ ಸ್ಪರ್ಧೆ, ಪೌರಾಣಿಕ ಹಿನ್ನೆಲೆಯ ನೃತ್ಯ ಪ್ರದರ್ಶನ. ಹೆಚ್ಚಿನ ಮಾಹಿತಿಗೆ ಕೃಷ್ಣ ಮಠದ ರವೀಂದ್ರ ಆಚಾರ್ಯ (9449390418) ಅವರನ್ನು ಸಂಪಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.