Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Team Udayavani, Nov 23, 2024, 7:00 AM IST
ಉಡುಪಿ: ಜಾಗದ ಖರೀದಿಗೆ ಮುಂಗಡ ಹಣ ಪಡೆದು ಕರಾರು ಮಾಡಿ, ನೋಂದಣಿ ಮಾಡಿಸದೆ ವಂಚನೆ ಮತ್ತು ಅಕ್ರಮ ಎಸಗಿದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಬಲಪಾಡಿ ಪಂದುಬೆಟ್ಟು ನಿವಾಸಿ ಮನೋಹರ್ ಎಸ್. ಕಲ್ಮಾಡಿ ಇವರಿಗೆ ರಾಮಣ್ಣ ಪರಿಚಯಸ್ಥರಾಗಿದ್ದರು. ಶಿವಳ್ಳಿ ಗ್ರಾಮದ ತನ್ನ ಆಸ್ತಿ ಮಾರಾಟದ ಪ್ರಸ್ತಾವನೆಯನ್ನು ಅವರು ಮನೋಹರ್ ಮುಂದಿರಿಸಿದ್ದರು. ಈ ಬಗ್ಗೆ ಅವರಿಬ್ಬರು ಜಾಗ ನೋಡಿ ಬಂದಿದ್ದರು. ಜಾಗ ಮಾರಾಟಕ್ಕೆ ರಾಮಣ್ಣ ತನ್ನ ತಂಗಿಯರಾದ ಸುಮತಿ ಮತ್ತು ರಮಣಿ ಒಪ್ಪಿರುವುದಾಗಿ ಖರೀದಿದಾರರಲ್ಲಿ ತಿಳಿಸಿದ್ದರು.
2012ರ ಜ. 6ರಂದು ಕುಂಜಿಬೆಟ್ಟಿನ ಆಫೀಸ್‌ನಲ್ಲಿ ಅಗ್ರಿಮೆಂಟ್‌ಗೆ ಸಹಿ ಹಾಕಿಸಿ ಮುಂಗಡವಾಗಿ ರಾಮಣ್ಣರಿಗೆ 10 ಲಕ್ಷ ರೂ. ಹಾಗೂ ತಲಾ 2 ಲಕ್ಷ ರೂ.ಗಳನ್ನು ಸುಮತಿ ಮತ್ತು ರಮಣಿ ಅವರ ಮನೆಗೆ ಹೋಗಿ ಮನೋಹರ್ ನೀಡಿದ್ದರು. 3 ತಿಂಗಳ ಅನಂತರ ಸುಮತಿ ಶೆಟ್ಟಿಯವರ ಮಗ ಆ ಆಸ್ತಿಯಲ್ಲಿ ಭಾಗ ಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ರಾಮಣ್ಣರಲ್ಲಿ ಕೇಳಿದಾಗ ಎಲ್ಲ ದಾಖಲಾತಿ ಸರಿಪಡಿಸುವುದು ಮತ್ತು ಪ್ರಕರಣ ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದರು.
ಜಾಗದ ನೋಂದಣಿ ಬಗ್ಗೆ ಪ್ರಸ್ತಾವಿಸಿದಾಗ ರಾಮಣ್ಣ ನೋಂದಣಿಗೆ ದಿನ ಮುಂದೂಡುತ್ತಿದ್ದರು. ಇದರಿಂದ ಬೇಸತ್ತು ಖರೀದಿದಾರರು ರಾಮಣ್ಣ ಮತ್ತು ಸಹೋದರಿಯರಿಗೆ ನೋಟಿಸ್ ಜಾರಿ ಮಾಡಿದ್ದರು. ಈ ಬಗ್ಗೆ ರಾಮಣ್ಣ ಫಿರ್ಯಾದುದಾರರನ್ನು ಉದ್ದೇಶಿಸಿ ಜಾಗ ಕೊಡುವುದಿಲ್ಲ, ನಿನಗೆ ಮೋಸ ಮಾಡುವ ಉದ್ದೇಶದಿಂದಲೆ ಅಗ್ರಿಮೆಂಟ್ ಮಾಡಿಸಿದ್ದು ಎಂದು ಬೈದರಲ್ಲದೇ ಜಾಗದ ಬಗ್ಗೆ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
MUST WATCH
ಹೊಸ ಸೇರ್ಪಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.