ಉಡುಪಿ ಜಿಲ್ಲೆಯಲ್ಲಿ 314 ಪಾಸಿಟಿವ್ ಪ್ರಕರಣ ಪತ್ತೆ! 5 ಮಂದಿ ಸಾವು
Team Udayavani, Aug 8, 2020, 7:29 PM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮತ್ತೆ ಐದು ಸಾವನ್ನಪ್ಪಿದ್ದು ಇದುವರೆಗೆ ಒಟ್ಟು 60 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಶನಿವಾರ 314 ಮಂದಿಗೆ ಪಾಸಿಟಿವ್ ಮತ್ತು 1,379 ಮಂದಿಗೆ ನೆಗೆಟಿವ್ ಪ್ರಕರಣ ವರದಿಯಾಗಿದೆ. ಕೋವಿಡ್ ಸೋಂಕು ಆರಂಭವಾದ ಬಳಿಕ ಇದುವೇ ಅತಿ ಹೆಚ್ಚು ಪಾಸಿಟಿವ್ ವರದಿಯಾದ ದಿನವಾಗಿದೆ. ಇದೇ ಮೊದಲ ಬಾರಿಗೆ ಒಂದೇ ದಿನದ ಗಂಟಲುದ್ರವ ಮಾದರಿ ಸಂಗ್ರಹ 2,000 ದಾಟಿದೆ.
ಉಡುಪಿ ತಾಲೂಕಿನ 76 ವರ್ಷ, 77 ವರ್ಷ, 65 ವರ್ಷದವರು, 50 ವರ್ಷದ ಮಹಿಳೆ, ಕುಂದಾಪುರ ತಾಲೂಕಿನ 56 ವರ್ಷದವರು ಕೋವಿಡ್ ಸೋಂಕಿನಿಂದ ಮೃತಪಟ್ಟರು. ಇವರೆಲ್ಲರಿಗೂ ಬೇರೆ ಆರೋಗ್ಯದ ಸಮಸ್ಯೆಗಳಿದ್ದವು.
ಪಾಸಿಟಿವ್ ಪ್ರಕರಣಗಳಲ್ಲಿ ರೋಗಲಕ್ಷಣ ಇರುವ 48 ಪುರುಷರು, 40 ಮಹಿಳೆಯರು, ರೋಗ ಲಕ್ಷಣ ಇರದ 116 ಪುರುಷರು, 110 ಮಹಿಳೆಯರು ಇದ್ದಾರೆ. ಇವರಲ್ಲಿ ಉಡುಪಿ ತಾಲೂಕಿನ 192, ಕುಂದಾಪುರ ತಾಲೂಕಿನ 87, ಕಾರ್ಕಳ ತಾಲೂಕಿನ 30, ಹೊರ ಜಿಲ್ಲೆಯ ಐವರು ಇದ್ದಾರೆ. ಕೋವಿಡ್ ಆಸ್ಪತ್ರೆಗೆ 203, ಮನೆ ಐಸೊಲೇಶನ್ ಆರೈಕೆಗೆ 111 ದಾಖಲಾಗಿದ್ದಾರೆ.
ಶನಿವಾರ 2,030 ಮಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. 1,540 ಜನರ ವರದಿಗಳು ಕೈಸೇರಬೇಕಾಗಿದೆ. ಶನಿವಾರ ಆಸ್ಪತ್ರೆಗಳಿಂದ 59, ಹೋಮ್ ಐಸೊಲೇಶನ್‌ನಿಂದ 30 ಒಟ್ಟು 89 ಮಂದಿ ಬಿಡುಗಡೆಗೊಂಡಿದ್ದಾರೆ. 1,287 ಮಂದಿ ಆಸ್ಪತ್ರೆಗಳಲ್ಲಿ, 1,225 ಮಂದಿ ಮನೆಗಳಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.