Udupi: ಬೀದಿ ಆಹಾರದಲ್ಲಿ ಎಗ್ಗಿಲ್ಲದೆ ಬಣ್ಣ ಬಳಕೆ – ತಪಾಸಣೆಗೆ ಆಗ್ರಹ
ಬೀದಿ ಬದಿ ಅಂಗಡಿ, ಹೊಟೇಲ್ ಗಳ ನಿಗದಿತ ತಪಾಸಣೆ ಇಲ್ಲ...
Team Udayavani, Jul 11, 2024, 12:47 PM IST
ಉಡುಪಿ: ರಾಜ್ಯ ಸರಕಾರದ ಆರೋಗ್ಯ ಇಲಾಖೆಯು ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ, ಮೀನು ಮತ್ತು ಕೋಳಿ ಕಬಾಬ್ ಗ ಳಲ್ಲಿ ಅಪಾಯಕಾರಿ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಯಾವ ಕಾರಣಕ್ಕೂ ನಿಷೇಧಿತ ಬಣ್ಣ ಬಳಸಿದ ಆಹಾರ ವಸ್ತುಗಳನ್ನು ಮಾರಬಾರದು ಎಂದು ಸೂಚಿಸಿದೆ.
ಅಷ್ಟಾದರೂ ಉಡುಪಿ ಜಿಲ್ಲೆಯ ಹಲವು ಕಡೆಗ ಳಲ್ಲಿ ಬಣ್ಣ ಬಣ್ಣದ ಗೋಬಿ ಮಂಜೂರಿ, ಕಬಾಬ್ ಗಳ ಮಾರಾಟ ನಡೆಯುತ್ತಿದ್ದು, ಇವುಗಳ ಮೇಲೆ ನಿಗಾ ಇಡಬೇಕಾದ ಅಗತ್ಯತೆ ಇದೆ.
ಕಾಟನ್ ಕ್ಯಾಂಡಿಯಲ್ಲಿ ರೋಡ ಮೈನ್ ಬಿ, ಗೋಬಿ ಮಂಚೂರಿಯಲ್ಲಿ ಸನ್ ಸೆಟ್ ಯೆಲ್ಲೋ ಮತ್ತು ಟಾಟ್ರಾಜಿನ್, ಪಿಷ್ ಮತ್ತು ಚಿಕನ್ ಕಬಾ ಬ್ ಗಳಲ್ಲಿ ಸನ್ ಸೆಟ್ ಯೆಲ್ಲೋ, ಕಾರ್ಮೋಸಿನ್ ರಾಸಾಯನಿಕಗಳನ್ನು ಬಳಸಿ ಆಕರ್ಷಕ ಬಣ್ಣ ಗಳನ್ನು ನೀಡಲಾಗುತ್ತಿರುವುದು ಪತ್ತೆಯಾಗಿತ್ತು.
ಇದು ಅಪಾಯಕಾರಿ, ವಿಷಕಾರಿ ಎಂಬ ನೆಲೆಯಲ್ಲಿ ಅವುಗಳನ್ನು ಬಣ್ಣಗಳ ಬಳಕೆಯನ್ನು ನಿಷೇಧಿಸಿದೆ. ಸರಕಾರ ಆದೇಶ ಹೊರ ಡಿಸಿದ ಬಳಿಕ ಕೆಲವು ಕಾಲ ನಿಷೇಧಿತ ಬಣ್ಣಗಳು ಬಳಕೆ ಕಡಿಮೆಯಾಗಿತ್ತು. ಆದರೆ, ಈ ವಿಷಯ ಜನರ ಮನಸ್ಸಿನಿಂದ ಮರೆಯಾಗುತ್ತಿ ದ್ದಂತೆಯೇ ಮತ್ತೆ ಅವುಗಳ ಬಳಕೆ ಆರಂಭಿಸ ಲಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಆರೋಗ್ಯಾಧಿಕಾರಿಗಳು ಆರಂಭದಂತೆಯೇ ಆಗಾಗ ತಪಾಸಣೆ ನಡೆಸಿದರೆ ಇವುಗಳನ್ನು ನಿಯಂತ್ರಿಸಬಹುದು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ-2006ರ ಅಡಿಯಲ್ಲಿ ನಿಷೇಧಿತ ವಿಷಕಾರಿ ಬಣ್ಣ ಬಳಕೆಗೆ ಏಳು ವರ್ಷಗಳಿಂದ ಜೀವಾವಧಿ ಶಿಕ್ಷೆ ವರೆಗೆ ನೀಡಬಹುದು. ಜತೆಗೆ 10 ಲಕ್ಷ ರೂ.ವ ರೆಗೆ ದಂಡ ಕೂಡಾ ವಿಧಿಸಬಹುದು. ಅಂಥ ಕಠಿಣ ಕ್ರಮಗಳನ್ನು ಕೈಗೊಂಡರೆ ವಿಷ ಬಣ್ಣಗಳ ಬಳ ಕೆಗೆ ಕಡಿವಾಣ ಹಾಕಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ.
ಮಳೆಗಾಲದಲ್ಲಿ ಹೆಚ್ಚು ಬೇಡಿಕೆ
ಮಳೆಗಾಲದಲ್ಲಿ ಎಣ್ಣೆಯಲ್ಲಿ ಕರಿದ ತಿಂಡಿಗಳು, ಬಿಸಿ ಕಬಾಬ್, ಗೋಬಿ ಮಂಚೂರಿಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಹೀಗಾಗಿ ಜನರನ್ನು ಆಕರ್ಷಿ ಸಲು ಬಣ್ಣಗಳನ್ನು ಬಳಸುವುದು ಹೆಚ್ಚಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಲು ಮುಂದೆ ಬರುವುದಿಲ್ಲ. ಅಧಿಕಾರಿಗಳು ಒಮ್ಮೆ ತಪಾಸಣೆ ಮಾಡಿದ ಮೇಲೆ ಮರಳಿ ಬರುವುದಿಲ್ಲ ಎಂಬ ಧೈರ್ಯವೂ ಅಂಗಡಿಯವರಿಗೆ ಇರುತ್ತದೆ.
ಸ್ಯಾಂಪಲ್ ಪರೀಕ್ಷೆ ಅಗತ್ಯ
ಉಡುಪಿ, ಮಣಿಪಾಲ, ಮಲ್ಪೆ, ಸಹಿತ ರಸ್ತೆಬದಿಯಲ್ಲಿ ಕರಿದ ತಿನಿಸುಗಳು ಅಪಾರ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದರೂ ಆರೋಗ್ಯ ಇಲಾಖೆಯಾಗಲಿ ಆಹಾರ ಸುರಕ್ಷಾ ಇಲಾಖೆಯಾಗಲಿ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ತಳ್ಳುಗಾಡಿ, ಬೀದಿಬದಿ ವ್ಯಾಪಾರ, ಬೀಚ್, ಪಾರ್ಕ್‌ಗಳ ಬದಿ ತಯಾರಿಸುವ ಫಾಸ್ಟ್ ಫುಡ್ ತಿನಿಸುಗಳಲ್ಲಿ ವಿಪರೀತ ಬಣ್ಣ ಬಳಕೆ ಮಾಡುವುದು
ಬೆಳಕಿಗೆ ಬರುತ್ತಿವೆ. ಹೀಗಾಗಿ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಸಾರ್ವಜನಿಕರು.
ಯಾವ ತಿನಿಸುಗಳಲ್ಲಿ ಅಧಿಕ?
ಗೋಬಿ ಮಂಚೂರಿ, ಚಿಕನ್ ಕಬಾಬ್, ಕರಿದ ಮೀನು, ಚಿಕನ್ ಪೆಪ್ಪರ್, ನೂಡಲ್ಸ್, ವೆಜ್ ಮಂಚೂರಿಯನ್‌ಗಳಿಗೆ ನಿಷೇಧಿತ ಬಣ್ಣಗಳು ಹಾಗೂ ರುಚಿಗೆ ಅಜಿನಮೊಟೊಗಳನ್ನು ಬಳಕೆ ಮಾಡಲಾಗುತ್ತಿದೆ. ಇದರ ಜತೆಗೆ ಹೆಚ್ಚಿನವರು ತಿಂಡಿ ತಿನಿಸು ಕರಿಯಲು ಹಲವು ತಿಂಗಳು ಗಳಿಂದ ಬಳಸಿ ಮಿಕ್ಕುಳಿದ ಎಣ್ಣೆಯನ್ನೇ ಬಳಸುತ್ತಾರೆ ಎಂಬ ಆರೋಪವೂ ಇದೆ.
ಸ್ಥಳಿಯಾಡಳಿತಕ್ಕೆ ಅಧಿಕಾರ
ಆಹಾರ ಸುರಕ್ಷತಾ ನಿಯಮಾವಳಿಗಳನ್ನು ಉಲ್ಲಂಘಿಸಿ ವಸ್ತುಗಳನ್ನು ತಯಾರು ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದರೆ
ಸ್ಥಳಿಯಾಡಳಿತಕ್ಕೆ ಅದನ್ನು ಸ್ಥಗಿತಗೊಳಿಸುವ ಅಧಿಕಾರವಿದೆ. ಆದರೆ ಇದು ಕೇವಲ ಎಚ್ಚರಿಕೆ ಹಾಗೂ ದಂಡಕ್ಕೆ ಮಾತ್ರ ಸೀಮಿತವಾಗುತ್ತಿದೆ. ಕಾಟನ್ ಕ್ಯಾಂಡಿ ಮತ್ತು ಕೃತಕ ಬಣ್ಣ ಬಳಸಿದ ಗೋಬಿ ಮಂಚೂರಿ ಖಾದ್ಯ ನಿಷೇಧದ ಬಗ್ಗೆ ರಾಜ್ಯ ಸರಕಾರ ಆದೇಶ ಹೊರಡಿಸಿದೆಯಾದರೂ ಆ ಬಗ್ಗೆ ಪರಿಶೀಲನೆ ನಡೆಸುವ ಕಾರ್ಯ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ.
ಎಚ್ಚರಿಕೆ ನೀಡುವ ಕೆಲಸ
ಆಹಾರ ಸುರಕ್ಷಾ ನಿಯಮಗಳ ಜಾರಿಗೆ ಆಹಾರ ಸುರಕ್ಷಾ ವಿಭಾಗ, ಸ್ಥಳಿಯಾಡಳಿತ ಹಾಗೂ ಆರೋಗ್ಯ ಇಲಾಖೆಯ ಸಿಬಂದಿಯ ತಂಡ ರಚಿಸಿ ಎಚ್ಚರಿಕೆ ನೀಡುವ ಕೆಲಸ ಮಾಡಲಾಗುವುದು. ತಿಂಡಿ-ತಿನಿಸುಗಳಲ್ಲಿ ವಿಪರೀತ ಬಣ್ಣ ಬಳಕೆ ಹಾಗೂ ಹಾನಿಕಾರಕ ರಾಸಾಯನಿಕಗಳನ್ನು ಬಳಕೆ ಮಾಡುತ್ತಿದ್ದರೆ ಸಾರ್ವಜನಿಕರು ಈ ಬಗ್ಗೆ ಆರೋಗ್ಯ ಇಲಾಖೆ, ಆಹಾರ ಸುರಕ್ಷಾ ಇಲಾಖೆ ಅಥವಾ ಜಿಲ್ಲಾಡಳಿತಕ್ಕೂ ದೂರು ನೀಡಬಹುದು.
*ಡಾ| ಪ್ರವೀಣ್ ಕುಮಾರ್,
ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ (ಪ್ರಭಾರ)
*ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.