Udupi: ಕ್ಷಯಮುಕ್ತ ಉಡುಪಿಗಾಗಿ ಕೈಜೋಡಿಸಿ: ಕೋಟ ಶ್ರೀನಿವಾಸ ಪೂಜಾರಿ
ಕ್ಷಯರೋಗ ಅಭಿಯಾನ ಉದ್ಘಾಟನೆ, ಕ್ಷಯ ಮುಕ್ತ ಗ್ರಾ.ಪಂ.ಪ್ರಶಸ್ತಿ ಪ್ರದಾನ ಸಮಾರಂಭ
Team Udayavani, Dec 8, 2024, 2:12 AM IST
ಉಡುಪಿ: ಜಿಲ್ಲೆಯನ್ನು ಕ್ಷಯಮುಕ್ತವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ನಿರ್ದೇಶನದಂತೆ ನೂರು ದಿನಗಳ ಕ್ಷಯರೋಗ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿ.ಪಂ.ನ ಡಾ| ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ.ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ 100 ದಿನಗಳ ಕ್ಷಯರೋಗ ಅಭಿಯಾನ ಉದ್ಘಾಟನೆ ಹಾಗೂ ಕ್ಷಯ ಮುಕ್ತ ಗ್ರಾ.ಪಂ.ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಅಭಿಯಾನದ ಅವಧಿಯಲ್ಲಿ ಕ್ಷಯ ರೋಗದ ಲಕ್ಷಣಗಳು, ಅದನ್ನು ತಡೆಗಟ್ಟುವಿಕೆ, ಕ್ಷಯರೋಗಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸುವುದು, ಗ್ರಾ.ಪಂ.ಮಟ್ಟದಲ್ಲಿ ಶಿಬಿರ ಆಯೋ ಜಿಸಿ ತಪಾಸಣೆ ನಡೆಸುವುದು, ಕ್ಷಯ ರೋಗಿಗಳನ್ನು ಚಿಕಿತ್ಸೆಯ ವ್ಯಾಪ್ತಿಗೆ ಕರೆತರುವುದು ಸಹಿತ ಈ ಕಾಯಿಲೆಯ ಗಂಭೀರತೆ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಲಾಗುವುದು.
ಗ್ರಾಮದ ಜನರ ಆರೋಗ್ಯ ತಪಾಸಣೆ, ಗುಣಮುಖ ವಾಗಿರುವ ಅಂಕಿಅಂಶ ಇತ್ಯಾದಿಗಳ ಆಧಾರದಲ್ಲಿ ಜಿಲ್ಲೆಯ 26 ಗ್ರಾ.ಪಂ.ಗಳನ್ನು ಕ್ಷಯ ಮುಕ್ತ ಗ್ರಾ.ಪಂ.ಗಳೆಂದು ಆಯ್ಕೆ ಮಾಡಲಾಗಿದೆ ಎಂದರು. ವಿಶ್ವ ಆರೋಗ್ಯ ಸಂಸ್ಥೆಯ ಮಂಗಳೂರು ಪ್ರಾದೇಶಿಕ ಸಲಹೆಗಾರ ಡಾ| ಜೋಸ್ ಥೋಮಸ್ ಪ್ರಸ್ತಾವಿಸಿದರು.
ಪ್ರಶಸ್ತಿ ಪ್ರದಾನ
ಕ್ಷಯ ಮುಕ್ತ ಗ್ರಾ.ಪಂ. ಎಂದು ಆಯ್ಕೆ ಮಾಡಲಾದ ಪಾಂಡೇಶ್ವರ, ಉಪ್ಪೂರು, ಹಾವಂಜೆ, ಚೇರ್ಕಾಡಿ, ನೀಲಾವರ, ಆರೂರು, ಕರ್ಜೆ, 38ನೇ ಕಳೂ¤ರು, ಗಂಗೊಳ್ಳಿ, ಇಡೂರು-ಕುಂಜ್ಞಾಡಿ, ಯಡಮೊಗೆ, ಹೆಬ್ರಿ, ಮುದ್ರಾಡಿ, ದುರ್ಗಾ, ಈದು, ರೆಂಜಾಳ, ಮಜೂರು, ಕೋಟೆ, ಕುತ್ಯಾರು, ಬಡಾ, ಪಲಿಮಾರು, ನಾಡಾ, ಹಳ್ಳಿಹೊಳೆ, ಬೈರಂಪಳ್ಳಿ, ಬೆಳ್ಳೆ ಹಾಗೂ ಮಣಿಪುರ ಗ್ರಾ.ಪಂ.ಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಐ.ಪಿ.ಗಡಾದ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ| ಚಿದಾನಂದ ಸಂಜು, ಕ್ಷಯ ಮುಕ್ತ ಗ್ರಾ.ಪಂ.ಅಧ್ಯಕ್ಷರು, ಪಿ.ಡಿ.ಓಗಳು, ವೈದ್ಯಾಧಿಕಾರಿಗಳು, ಸಿಬಂದಿ, ಮತ್ತಿತರರು ಉಪಸ್ಥಿತರಿದ್ದರು. ಮಂಜುನಾಥ್ ಗಾಣಿಗ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.