Udupi: ಗೀತೆಯ ಸಂದೇಶ ಪ್ರತೀ ಮನೆಯನ್ನೂ ಪ್ರವೇಶಿಸಲಿ: ಕಾಂಚಿ ಶ್ರೀ

ಉಡುಪಿ ಶ್ರೀಕೃಷ್ಣಮಠದಲ್ಲಿ ಗೀತೋತ್ಸವ ಉದ್ಘಾಟನೆ

Team Udayavani, Nov 21, 2024, 3:03 AM IST

Geetha-yajna-KanchiShree

ಉಡುಪಿ: ಗೃಹಪ್ರವೇಶದಂತೆ ಗೀತೆಯ ಸಂದೇಶ ಪ್ರತಿಮನೆಗಳಿಗೆ ಪ್ರವೇಶವಾಗಬೇಕು. ಇದರಿಂದ ಕುಟುಂಬವೃದ್ಧಿ, ಧನಧಾನ್ಯ ಸಮೃದ್ಧಿ ಸಿದ್ಧಿಸುತ್ತದೆ ಎಂದು ಶ್ರೀ ಕಾಂಚೀ ಕಾಮಕೋಟಿ ಪೀಠದ ಶಂಕರಾಚಾರ್ಯ ಶ್ರೀಶಂಕರ ವಿಜಯೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಬುಧವಾರ ಪರ್ಯಾಯ ಶ್ರೀಪುತ್ತಿಗೆ ಮಠದ ವತಿಯಿಂದ ಗೀತಾ ಜಯಂತಿ ಮತ್ತು ಕೋಟಿ ಗೀತಾ ಲೇಖನ ಯಜ್ಞದ ಪ್ರಯುಕ್ತ ಜರಗಿದ “ಗೀತೋತ್ಸವ’ವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, ಗೀತಾ ಲೇಖನ ಯಜ್ಞಕ್ಕೆ ಕಾಂಚೀ ಕಾಮಕೋಟಿ ಪೀಠದ ಸಹಕಾರ ನೀಡುವುದಾಗಿ ತಿಳಿಸಿದರು.

ನಮ್ಮ ಪರಮಗುರುಗಳಾದ ಪರಮಾಚಾರ್ಯ ರು 1960-70ರ ದಶಕದಲ್ಲಿ ರಾಮನಾಮ ಲೇಖನ ಯಜ್ಞವನ್ನು ನಡೆಸಿ ಕಾಂಚಿಯ ರಜತಮುದ್ರವನ್ನು ನೀಡಿದ್ದರು. ವಾಲ್ಮೀಕಿ ರಾಮಾಯಣದಲ್ಲೂ ರಾಮಾಯಣದ ಲೇಖನವನ್ನು ನಡೆಸಬೇಕೆಂಬ ಉಲ್ಲೇಖವಿದೆ. ಪರಮಾಚಾರ್ಯರು ಗೀತೆಯ ಸಣ್ಣ ಸಣ್ಣ ಪುಸ್ತಕಗಳನ್ನು ವಿದೇಶಗಳಲ್ಲೂ ವಿತರಿಸುವ ಕ್ರಮ ಕೈಗೊಂಡಿದ್ದರು. ಗೀತೆಯ ಲೇಖನವೂ ಅದೇ ರೀತಿಯದು. ಇಂತಹ ಕಾರ್ಯಕ್ರಮಗಳಿಂದ ಪುಣ್ಯಪ್ರಾಪ್ತಿ ಯಾಗುತ್ತದೆ. ಪುತ್ತಿಗೆ ಶ್ರೀಗಳು ಇದನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದಾರೆ. ಲೋಕಕಲ್ಯಾಣಕ್ಕಾಗಿ ಇಂತಹ ಧಾರ್ಮಿಕ ಪ್ರಗತಿ ಅತಿ ಅಗತ್ಯ ಎಂದರು.

ಶ್ರೀ ಕೃಷ್ಣದರ್ಶನದ ತೃಪ್ತಿ: ಪುತ್ತಿಗೆ ಮಠದ ಸ್ವಾಮೀಜಿಯವರು ಹಿಂದೆ ಕಾಂಚಿಗೂ ಆಗಮಿಸಿದ್ದರು. ನಾವು 20 ವರ್ಷಗಳ ಬಳಿಕ ಕರ್ನಾಟಕಕ್ಕೆ ಆಗಮಿಸಿ ಶ್ರೀಕೃಷ್ಣನ ದರ್ಶನ ಮಾಡಿ ಸಂತೋಷಗೊಂಡಿದ್ದೇವೆ ಎಂದರು.

ಪುತ್ತಿಗೆ ಮಠದ ಕಿರಿಯ ಶ್ರೀಗಳಾದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಶಾಸಕರಾದ ಯಶ್‌ಪಾಲ್‌ ಸುವರ್ಣ, ಗುರುರಾಜ್‌ ಗಂಟಿಹೊಳೆ, ಹೊರನಾಡು ಕ್ಷೇತ್ರದ ಧರ್ಮದರ್ಶಿ ಡಾ| ಭೀಮೇಶ್ವರ ಜೋಷಿ, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ವಿಜಯ ಬಲ್ಲಾಳ್‌, ಕಟೀಲು ಕ್ಷೇತ್ರದ ಹರಿನಾರಾಯಣ ಆಸ್ರಣ್ಣ, ಆನೆಗುಡ್ಡೆ ದೇವಸ್ಥಾನದ ಸೂರ್ಯನಾರಾಯಣ ಉಪಾಧ್ಯಾಯ, ವಿಹಿಂಪ ಪ್ರಾಂತ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್‌, ಉದ್ಯಮಿ ಭುವನೇಂದ್ರ ಕಿದಿಯೂರು, ಚಿಂತಕ ರೋಹಿತ್‌ ಚಕ್ರತೀರ್ಥ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಪ್ರದೀಪ್‌ಕುಮಾರ್‌ ಕಲ್ಕೂರ, ಸಂಘಟಕ ಭುವನಾಭಿರಾಮ ಉಡುಪ ಅತಿಥಿ ಗಳಾಗಿದ್ದರು. ಕಾಂಚೀ ಹಾಗೂ ಪುತ್ತಿಗೆ ಮಠದ ಅಧಿಕಾರಿ ಗಳು, ವಿದ್ವಾಂಸರು ಉಪಸ್ಥಿತರಿದ್ದರು. ಗೋಪಾಲಾಚಾರ್ಯ ಸ್ವಾಗತಿಸಿ, ಷಣ್ಮುಖ ಹೆಬ್ಬಾರ್‌ ಅಭಿನಂದನ ಪತ್ರ ವಾಚಿಸಿದರು.


ಗೀತಾ ಪ್ರಸಾರದಿಂದ ಭಾರತ ವಿಶ್ವಗುರು: ಪುತ್ತಿಗೆ ಶ್ರೀ

ಕೇವಲ ಆರ್ಥಿಕ ಅಭಿವೃದ್ಧಿಯಿಂದ ಭಾರತ ವಿಶ್ವಗುರುವಾಗುವುದು ಸಾಧ್ಯವಿಲ್ಲ, ಪಾರಮಾರ್ಥಿಕ ಅಭಿವೃದ್ಧಿಯೂ ಆಗಬೇಕು. ಶ್ರೀಕೃಷ್ಣನ ಭಗವದ್ಗೀತೆಯು ಜಗದಗಲದಲ್ಲಿ ಪಸರಿದಾಗ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು. ಶ್ರೀಕೃಷ್ಣ ಅರ್ಜುನನಿಗೆ ಮಾತ್ರ ಗೀತೋಪದೇಶ ಮಾಡಿದ್ದಲ್ಲ. ಆತನ ರಥದಲ್ಲಿದ್ದ ಆಂಜನೇಯನಿಗೂ ಉಪದೇಶ ಮಾಡಿದ್ದ. ವಿಜಯೇಂದ್ರ ಅಂದರೆ ಹನುಮಂತ ಎಂಬರ್ಥವಿದೆ. ಈ ಹಿನ್ನೆಲೆಯಲ್ಲಿ ಶ್ರೀಶಂಕರ ವಿಜಯೇಂದ್ರ ಸರಸ್ವತೀ ಸ್ವಾಮೀಜಿ ಗೀತೋತ್ಸವವನ್ನು ಉದ್ಘಾಟಿಸಿರುವುದು ಅತ್ಯಂತ ಸೂಕ್ತ ಎಂದರು.

ಸ್ವಾಮೀಜಿಯವರ ಹೆಸರು “ಇಂದ್ರ’
ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರ ವಿದ್ಯಾಗುರುಗಳಾದ ಪಲಿಮಾರು-ಭಂಡಾರಕೇರಿ ಮಠದ ಶ್ರೀವಿದ್ಯಾಮಾನ್ಯತೀರ್ಥರ ಸನ್ಯಾಸಾಶ್ರಮದ ಶತಮಾನೋತ್ಸವದ ದಿನ ಇದೇ (1925ರ ಕಾರ್ತಿಕ ಕೃಷ್ಣ ಪಂಚಮೀ) ಆಗಿದೆ. ಕಾಂಚಿ ಮಠ (ಶ್ರೀಜಯೇಂದ್ರ, ಶ್ರೀಶಂಕರ ವಿಜಯೇಂದ್ರ) ಮತ್ತು ಪುತ್ತಿಗೆ ಮಠದ (ಶ್ರೀಸುಧೀಂದ್ರ, ಶ್ರೀಸುಜ್ಞಾನೇಂದ್ರ, ಶ್ರೀಸುಗುಣೇಂದ್ರ, ಶ್ರೀಸುಶ್ರೀಂದ್ರ) ಸ್ವಾಮೀಜಿಯವರ ಹೆಸರು “ಇಂದ್ರ’ ಶಬ್ದದಿಂದ ಇದೆ. ಶ್ರೀಜಯೇಂದ್ರ ಸರಸ್ವತೀ ಸ್ವಾಮೀಜಿಯವರು ಹಿಂದಿನ ಪರ್ಯಾಯದಲ್ಲಿ ಆಗಮಿಸಿದ್ದರು. ಶ್ರೀಶಂಕರವಿಜಯೇಂದ್ರ ಸರಸ್ವತೀ ಸ್ವಾಮೀಜಿಯವರು ಈಗ ಗೀತೋತ್ಸವವನ್ನು ಉದ್ಘಾಟಿಸಿದರು. ಶ್ರೀಸುಗುಣೇಂದ್ರತೀರ್ಥರು ಹಿಂದೆ ಕಾಂಚಿಗೆ ಭೇಟಿ ನೀಡಿದ್ದರು.

ಟಾಪ್ ನ್ಯೂಸ್

Shivarajkumar’s Bhairathi Ranagal running successful

Bhairathi Ranagal: ಶಿವಣ್ಣನ ಮೊಗದಲ್ಲಿ ಭೈರತಿ ನಗು

Robbery: ಬ್ಯಾಂಕ್ ಗೆ ಕನ್ನ, 13.6 ಕೋಟಿ ಮೌಲ್ಯದ 19 ಕೆಜಿ ಚಿನ್ನ ದರೋಡೆ, ಗ್ರಾಹಕರು ಕಂಗಾಲು

Robbery: ಬ್ಯಾಂಕ್ ಗೆ ಕನ್ನ, 13.6 ಕೋಟಿ ಮೌಲ್ಯದ 19 ಕೆಜಿ ಚಿನ್ನ ದರೋಡೆ, ಗ್ರಾಹಕರು ಕಂಗಾಲು

Malayalam Actor: ಶ್ವಾಸಕೋಶದ ಕಾಯಿಲೆ; ಖ್ಯಾತ ನಟ ಮೇಘನಾಥನ್‌ ನಿಧನ

Malayalam Actor: ಶ್ವಾಸಕೋಶದ ಕಾಯಿಲೆ; ಖ್ಯಾತ ನಟ ಮೇಘನಾಥನ್‌ ನಿಧನ

BGT 2025: Test series starts from Friday: Here is the schedule, timings of all the matches

BGT 2025: ಶುಕ್ರವಾರದಿಂದ ಟೆಸ್ಟ್‌ ಸರಣಿ ಆರಂಭ: ಇಲ್ಲಿದೆ‌ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ

5-vitla

Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ

Belagavi: ಗೆಳೆಯ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು

Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು

Hardik Pandya: ಟಿ20 ಆಲ್‌ರೌಂಡರ್‌… ಹಾರ್ದಿಕ್‌ ಪಾಂಡ್ಯ ನಂ.1

Hardik Pandya: ಟಿ20 ಆಲ್‌ರೌಂಡರ್‌… ಹಾರ್ದಿಕ್‌ ಪಾಂಡ್ಯ ನಂ.1


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MGM–Udupi-1

Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ

Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!

Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!

Maharashtra Poll: ಹೃದಯಾಘಾತದಿಂದ ಮತಗಟ್ಟೆಯಲ್ಲೇ ಮೃತಪಟ್ಟ ಸ್ವತಂತ್ರ ಅಭ್ಯರ್ಥಿ

Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ

Karkala: ರಸ್ತೆ ಬದಿ ತೋಡಿಗೆ ಜಾರಿದ ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬ್ಯುಲೆನ್ಸ್

Karkala: ರಸ್ತೆ ಬದಿ ತೋಡಿಗೆ ಜಾರಿದ ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬ್ಯುಲೆನ್ಸ್

7

Udupi: ನಮ್ಮ ಶೌಚಾಲಯ ನಮ್ಮ ಗೌರವ ತಿಂಗಳ ಆಂದೋಲನಕ್ಕೆ ಚಾಲನೆ

MUST WATCH

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

ಹೊಸ ಸೇರ್ಪಡೆ

Shivarajkumar’s Bhairathi Ranagal running successful

Bhairathi Ranagal: ಶಿವಣ್ಣನ ಮೊಗದಲ್ಲಿ ಭೈರತಿ ನಗು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Robbery: ಬ್ಯಾಂಕ್ ಗೆ ಕನ್ನ, 13.6 ಕೋಟಿ ಮೌಲ್ಯದ 19 ಕೆಜಿ ಚಿನ್ನ ದರೋಡೆ, ಗ್ರಾಹಕರು ಕಂಗಾಲು

Robbery: ಬ್ಯಾಂಕ್ ಗೆ ಕನ್ನ, 13.6 ಕೋಟಿ ಮೌಲ್ಯದ 19 ಕೆಜಿ ಚಿನ್ನ ದರೋಡೆ, ಗ್ರಾಹಕರು ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.