Udupi MGM College: ಅಮೃತ ಮಹೋತ್ಸವ ಸಮಾರಂಭದಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆ
ಇಂದು "ಅಮೃತ ಮಹೋತ್ಸವ' ಸಮಾರೋಪ
Team Udayavani, Dec 1, 2024, 1:47 AM IST
ಉಡುಪಿ: ಎಂಜಿಎಂ ಕಾಲೇಜಿನ ಅಮೃತೋತ್ಸವ ಸಮಾರಂಭದ ಉದ್ಘಾಟನ ಸಮಾರಂಭದಲ್ಲಿ ಶುಕ್ರವಾರ ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಲಕೋಟೆಯನ್ನು ಉಡುಪಿ ಅಂಚೆ ವಿಭಾಗದ ಅಧೀಕ್ಷಕ ರಮೇಶ್ ಪ್ರಭು ಅವರು ಬಿಡುಗಡೆ ಗೊಳಿಸಿದರು. ಮಂಗಳೂರಿಗೆ ಉನ್ನತ ಶಿಕ್ಷಣಕ್ಕೆ ಹೋಗಬೇಕಾದ ಕಾಲದಲ್ಲಿ ಉಡುಪಿಯಲ್ಲಿ ಜ್ಞಾನದೇಗುಲವನ್ನು ಡಾ|ಟಿಎಂಎ ಪೈಯವರು ತೆರೆದ ಕಾರಣ ಸಾವಿರಾರು ಮುತ್ತುರತ್ನಗಳನ್ನು ಕಾಲೇಜು ನಾಡಿಗೆ ಸಮರ್ಪಿಸಿದೆ ಎಂದು ರಮೇಶ್ ಪ್ರಭು ಬಣ್ಣಿಸಿದರು.
ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ಶಾಸಕ ಯಶಪಾಲ್ ಸುವರ್ಣ, ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ.ಸತೀಶ್ ಯು. ಪೈ, ಬೆಂಗಳೂರು ಉತ್ತರ ವಿ.ವಿ. ಕುಲಪತಿ ಡಾ| ನಿರಂಜನ ವಾನಳ್ಳಿ, ಮಾಹೆ ವಿ.ವಿ. ಸಹಕುಲಾಧಿಪತಿ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ (ಎಜಿಇ) ಅಧ್ಯಕ್ಷ ಡಾ| ಎಚ್.ಎಸ್.ಬಲ್ಲಾಳ್, ಕುಲಪತಿ ಲೆ|ಜ|ಡಾ| ಎಂ.ಡಿ. ವೆಂಕಟೇಶ್, ಸಹಕುಲಪತಿ ಡಾ| ನಾರಾಯಣ ಸಭಾಹಿತ್, ಎಜಿಇ ಕಾರ್ಯದರ್ಶಿ ಬಿ.ಪಿ.ವರದರಾಯ ಪೈ, ಡಾ|ಟಿಎಂಎ ಪೈಯವರ ಪುತ್ರರಾದ ಟಿ.ನಾರಾಯಣ ಪೈ, ಟಿ.ಅಶೋಕ್ ಪೈ, ಸೊಸೆಯಂದಿರಾದ ಕುಸುಮಾ ಪಾಂಡುರಂಗ ಪೈ, ಟಿ.ವಸಂತಿ ಪೈ, ಪುತ್ರಿ ವಸಂತಿ ಆರ್. ಶೆಣೈ, ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ|ದೇವಿದಾಸ್ ನಾಯ್ಕ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಟಿ.ಮೋಹನದಾಸ್ ಪೈ ಕೌಶಲಾಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ.ರಂಗ ಪೈ ಉಪಸ್ಥಿತರಿದ್ದರು.
ಇಂದು “ಅಮೃತ ಮಹೋತ್ಸವ’ ಸಮಾರೋಪ
ಉಡುಪಿ: ಉಡುಪಿಯ ಮೊದಲ ಕಾಲೇಜಾದ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ (ಎಂಜಿಎಂ) “ಅಮೃತ ಮಹೋತ್ಸವ’ ಸಮಾರೋಪ ಸಮಾರಂಭವು ಕಾಲೇಜಿನಲ್ಲಿ ಡಿ. 1ರಂದು ನಡೆಯಲಿದೆ. ಬೆಳಗ್ಗೆ 9.30ರಿಂದ 11ರ ತನಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 11ರಿಂದ ಹಳೆ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಹೈದರಾಬಾದ್ ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿ. ಸಹಪ್ರಾಧ್ಯಾಪಕ ಪ್ರೊ| ಪ್ರಸನ್ನ ತಂತ್ರಿ ಭಾಗವಹಿಸುವರು.
ಅನಂತರ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 12.30ರಿಂದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 2.30ರಿಂದ 3.30ರ ವರೆಗೆ ಅಧ್ಯಾಪಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಮಧ್ಯಾಹ್ನ 3.30ರಿಂದ 5.30ರ ವರೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಎ. ಸುವರ್ಣ, ಮಂಗಳೂರು ವಿ.ವಿ. ಉಪ ಕುಲಪತಿ ಪ್ರೊ| ಪಿ.ಎಲ್. ಧರ್ಮ, ಮಂಗಳೂರು ಪ್ರಾದೇಶಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ| ರಾಮೇಗೌಡ, ಡಿಡಿಪಿಯು ಮಾರುತಿ ಭಾಗವಹಿಸಲಿದ್ದಾರೆ.
ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎಜಿಇ ಮಣಿಪಾಲ ರಿಜಿಸ್ಟ್ರಾರ್ ಡಾ| ರಂಜನ್ ಆರ್. ಪೈ, ಟಿಎಂಎ ಪೈ ಫೌಂಡೇಶನ್ ಅಧ್ಯಕ್ಷ ಟಿ. ಅಶೋಕ್ ಪೈ, ಮಾಹೆ ವಿ.ವಿ. ಸಹಕುಲಾಧಿಪತಿ, ಎಜಿಇ ಮಣಿಪಾಲ ಅಧ್ಯಕ್ಷ ಡಾ| ಎಚ್.ಎಸ್. ಬಲ್ಲಾಳ್, ಮಾಹೆ ವಿ.ವಿ. ಉಪಕುಲಪತಿ ಲೆ|ಜ|ಡಾ| ಎಂ.ಡಿ. ವೆಂಕಟೇಶ್, ಮಾಹೆ ವಿ.ವಿ. ಸಹ ಉಪಕುಲಪತಿ ಡಾ| ನಾರಾಯಣ ಸಭಾಹಿತ್ ಪಾಲ್ಗೊಳ್ಳಲಿದ್ದಾರೆ.
ಎಜಿಇ ಕಾರ್ಯದರ್ಶಿ ಬಿ.ಸಿ. ವರದರಾಯ ಪೈ, ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ ಎಸ್. ನಾಯ್ಕ, ಟಿ. ಮೋಹನದಾಸ ಪೈ ಕೌಶಲಾಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ. ರಂಗ ಪೈ ಉಪಸ್ಥಿತರಿರುವರು. ಸಂಜೆ 5.30ರಿಂದ ವಿದ್ಯಾಭೂಷಣ ಬೆಂಗಳೂರು ಮತ್ತು ಮೇಧಾ ಹಿರಣ್ಮಯಿ ಬೆಂಗಳೂರು ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurantee Scheme: ಸರಕಾರ- ಜನರ ನಡುವೆ ಕೊಂಡಿಯಾಗಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Congress Government: ಸಾಧು-ಸಂತರಿಗೆ ರಕ್ಷಣೆ ಇಲ್ಲ: ಶಾಸಕ ಸುನಿಲ್ ಕುಮಾರ್
Udupi: ಚಂದ್ರಶೇಖರನಾಥ ಸ್ವಾಮೀಜಿ ಹೇಳಿದಂತೆ ಬಿಜೆಪಿಗರು ಹೇಳಲಿ: ಸಚಿವೆ ಹೆಬ್ಬಾಳ್ಕರ್ ಸವಾಲು
Hebri: ಕಸದ ರಾಶಿಯಲ್ಲಿ ಅಪರಿಚಿತ ಶವ ಪತ್ತೆ
Udupi: ಬೈಕ್‌ಗೆ ಇನ್ನೋವಾ ಢಿಕ್ಕಿ; ಸವಾರನಿಗೆ ಗಾಯ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Yatnal ಪಕ್ಷದ ಬೇರು ಕಡಿಯುವ ಕೆಲಸ ಮಾಡುತ್ತಿದ್ದಾರೆ: ಆರಗ ಜ್ಞಾನೇಂದ್ರ ಕಿಡಿ
Space Station: ರಷ್ಯಾದ ಗಗನನೌಕೆಯಿಂದ ಹೊರಬಿದ್ದ ವಿಷಕಾರಿ ಅನಿಲ!
Mangaluru: ದೂರು ಕೊಡಲು ಬರುವವರ ಕಳ್ಳರಂತೆ ನೋಡುವ ಮನಃಸ್ಥಿತಿ ಬದಲಿಸಿಕೊಳ್ಳಿ: ಗೃಹಸಚಿವ
Dharmasthla: ಕನ್ನಡ ಸಾಹಿತ್ಯ ಸದ್ಯ ಒಡವೆ ಇದ್ದರೂ ಬಡವಿ: ಶತಾವಧಾನಿ ಡಾ| ರಾ.ಗಣೇಶ
Udupi MGM College: ಅಮೃತ ಮಹೋತ್ಸವ ಸಮಾರಂಭದಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.