ಉಡುಪಿ, ಪುತ್ತೂರು: ಸಮನ್ವಯದಿಂದ ಕಾರ್ಯನಿರ್ವಹಣೆ
Team Udayavani, May 19, 2021, 6:50 AM IST
ಕೊರೊನಾ ಹಿನ್ನೆಲೆಯಲ್ಲಿ ಉಡುಪಿ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವ್ಯಾಪಕ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸ್ಥಿತಿಯ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜನರು ಎದೆಗುಂದದೆ ಆತ್ಮವಿಶ್ವಾಸದಿಂದ ಕೊರೊನಾವನ್ನು ಒಧ್ದೋಡಿಸಲು ಕೈಜೋಡಿಸಬೇಕು ಎಂದು ಉಭಯ ಕ್ಷೇತ್ರಗಳ ಶಾಸಕರು ಮನವಿ ಮಾಡಿಕೊಂಡಿದ್ದಾರೆ.
ಕೆ. ರಘುಪತಿ ಭಟ್, ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ :
1. ನಿಮ್ಮ ಕ್ಷೇತ್ರದಲ್ಲಿ ಕೋವಿಡ್ 19ರ ವಿಷಮ ಪರಿಸ್ಥಿತಿ ನಿಭಾವಣೆಗೆ ಪೂರ್ವಸಿದ್ಧತೆ ಹೇಗೆ ನಡೆದಿದೆ?
ಕೊರೊನಾ ವಿಷಮ ಪರಿಸ್ಥಿತಿ ನಿರ್ವಹಣೆಗೆ ವಿಶೇಷವಾದ ಪಕ್ಷದ ಕಾರ್ಯಕರ್ತರ ತಂಡವನ್ನು ರಚಿಸಲಾಗಿದೆ. ಕೋವಿಡ್ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಿ ಜನರಿಗೆ ಚಿಕಿತ್ಸೆ ಕುರಿತು, ಆಸ್ಪತ್ರೆಯಲ್ಲಿನ ಖಾಲಿಯಿರುವ ಬೆಡ್ ಹಾಗೂ ಇತರ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಜತೆಗೆ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಾಗೂ ಶವ ಸಾಗಿಸಲು ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.
2. ಜಿಲ್ಲಾಡಳಿತ, ತಾಲೂಕು ಆಡಳಿತ ಹೊರತುಪಡಿಸಿ ದಂತೆ ಸ್ಥಳೀಯರನ್ನು ಒಗ್ಗೂಡಿಸಿ ಪರ್ಯಾಯ ವ್ಯವಸ್ಥೆ (ಪ್ಲ್ರಾನ್ ಬಿ) ರೂಪಿಸಿದ್ದೀರಾ?
ಶಾಸಕರ ಪರಿಹಾರ ನಿಧಿಯಿಂದ 10 ಸಾವಿರ ಆಕ್ಸಿಮೀಟರ್‌ಗಳನ್ನು ವಿತರಿಸಲಾಗುತ್ತಿದೆ. ಅದನ್ನು ಸೋಂಕಿತರ ಮನೆಗಳಿಗೆ ವಿತರಿಸಲಾಗುತ್ತಿದ್ದು, ಅದರಲ್ಲಿ ರೋಗಿಗಳ ಆಕ್ಸಿಜನ್ ಮಟ್ಟವನ್ನು ಪರೀಕ್ಷಿಸಬಹುದಾಗಿದೆ. ಅವರು ಗುಣಮುಖರಾದ ತತ್‌ಕ್ಷಣ ಆ ಆಕ್ಸಿಮೀಟರ್‌ನ್ನು ಇನ್ನೊಬ್ಬ ರೋಗಿಗೆ ನೀಡಲಾಗುತ್ತದೆ.
3. ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿ ಸುವ ಕೆಲಸವನ್ನು ಹೇಗೆ ಮಾಡುತ್ತಿದ್ದೀರಿ? ಖುದ್ದಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದೀರಾ?
ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಉಡುಪಿ ನಗರಸಭೆ ವ್ಯಾಪ್ತಿಯ ವಾರ್ಡ್‌ಗಳ ಸದಸ್ಯರ ತಂಡವನ್ನು ರೂಪಿಸಿ, ಅವರಿಗೆ ಹೋಂ ಐಸೋಲೇಶನ್‌ನಲ್ಲಿರುವ ರೋಗಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಸಂದರ್ಭ ಅವರಿಗೆ ಹಾಗೂ ಅಕ್ಕಪಕ್ಕದ ಮನೆಯವರಿಗೆ ಕೋವಿಡ್ ಕುರಿತು ಅರಿವು ಮೂಡಿಸಲಾಗುತ್ತಿದೆ.
4. ಪ್ರತಿ ಜಿಲ್ಲೆಯಲ್ಲೂ ಸಾಮಾನ್ಯವಾಗಿ ಕೇಳಿ ಬರು ತ್ತಿರುವ ಸಮಸ್ಯೆ ಆಕ್ಸಿಜನ್ ಕೊರತೆ, ಹಾಸಿಗೆಗಳ ಕೊರತೆ- ನಿಮ್ಮಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ?
ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ ಹಾಸಿಗೆ ಕೊರತೆಯಾಗದಂತೆ ನಿತ್ಯ ಜಾಗ್ರತೆ ವಹಿಸಲಾಗುತ್ತಿದೆ. ಗೃಹ ಸಚಿವರು ಹಾಗೂ ಸರಕಾರದೊಂದಿಗೆ ಆಕ್ಸಿಜನ್ ಪೂರೈಕೆ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೆಲವೊಮ್ಮೆ ಬೆಡ್ ಖಾಲಿಯಾಗಿದ್ದ ಸಮಯದಲ್ಲಿ ಖಾಸಗಿ ಆಸ್ಪತ್ರೆಯ ಅಧೀಕ್ಷಕರ ಹತ್ತಿರ ಮಾತನಾಡಿ ಹಾಸಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ.
5. ಲಾಕ್‌ಡೌನ್ ಹಿನ್ನೆಲೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬ ಗಳು/ಕೂಲಿ ಕಾರ್ಮಿಕರ ನೆರವಿಗೆ ಏನು ಮಾಡುತ್ತಿದ್ದೀರಿ?
ಕಳೆದ ಬಾರಿ ಸಹಾಯವನ್ನು ಮಾಡಲಾಗಿತ್ತು. ಈ ಬಾರಿ ಆ ಪರಿಸ್ಥಿತಿ ಒದಗಿ ಬಂದಿಲ್ಲ. ಕೂಲಿ ಕಾರ್ಮಿಕರಿಗೆ ನಡೆದು ಸಮೀಪದ ಕಟ್ಟಡದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯವಿದ್ದರೆ ಮುಂದಿನ ದಿನದಲ್ಲಿ ಸಹಾಯ ಒದಗಿಸಲಾಗುತ್ತದೆ.
6. ಕ್ಷೇತ್ರದ ಯುವ/ಸಮುದಾಯ ಸಂಘಟನೆ ಗಳನ್ನು ಕಠಿನ ಪರಿಸ್ಥಿತಿಗೆ ಸಜ್ಜುಗೊಳಿಸಿದ್ದೀರಾ?
ಪಕ್ಷದ ಯುವಜನರ ತಂಡ ಜಿಲ್ಲೆಯಾದ್ಯಂತ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಮಾಡುತ್ತಿದೆ. ಜತೆಗೆ ಕೋವಿಡ್ ಸೊಂಕಿತರಿಗೆ ಆಹಾರ ಸಾಮಗ್ರಿ ಸಾಗಾಟಕ್ಕೆ, ಆಸ್ಪತ್ರೆಗೆ ಕರೆತರಲು ವಾಹನ, ಆ್ಯಂಬುಲೆನ್ಸ್‌ಗಳ ಉಚಿತ ಸೇವೆ ಕೈಗೊಳ್ಳಲಾಗಿದೆ.
7. ಜನರು ಕೊರೊನಾ ಸಂಕಷ್ಟ ಸಂಬಂಧ ಯಾವು ದೇ ಕ್ಷಣದಲ್ಲಿ ನಿಮ್ಮನ್ನು ಸಂಪರ್ಕಿಸ ಬಹುದೇ?
ಕೋವಿಡ್ ಲಕ್ಷಣ ಕಂಡು ಬಂದ ತತ್‌ಕ್ಷಣ ಪರೀಕ್ಷೆಗೆ ಒಳಗಾಗಿ. ಸೋಂಕಿತರು ಧೈರ್ಯಗುಂದಬಾರದು. ಆತ್ಮವಿಶ್ವಾಸದಿಂದ ಎದುರಿಸೋಣ. ಸಂಪರ್ಕ ಸಂಖ್ಯೆ: 99804 31566
**
ಸಂಜೀವ ಮಠಂದೂರು , ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ :
1. ನಿಮ್ಮ ಕ್ಷೇತ್ರದಲ್ಲಿ ಕೋವಿಡ್ 19ರ ವಿಷಮ ಪರಿಸ್ಥಿತಿ ನಿಭಾವಣೆಗೆ ಪೂರ್ವಸಿದ್ಧತೆ ಹೇಗೆ ನಡೆದಿದೆ?
ನಗರದಲ್ಲಿ ಪೌರಾಯುಕ್ತರು, ಪಟ್ಟಣ ಪಂಚಾಯತ್‌ನಲ್ಲಿ ಮುಖ್ಯಾಧಿಕಾರಿ ಹಾಗೂ 31 ಗ್ರಾ. ಪಂ. ವ್ಯಾಪ್ತಿಗಳಲ್ಲಿ ಪಿಡಿಒ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಓರ್ವ ಅಧಿಕಾರಿಯನ್ನು ಫ್ಲೈಯಿಂಗ್ ಸ್ಕ್ವಾಡ್ ಆಗಿ ಮತ್ತು ನಾಲ್ಕು ಪಂಚಾಯತ್‌ಗಳಿಗೆ ತಾಲೂಕು ಮಟ್ಟದ ನೋಡಲ್ ಆಫೀಸರ್ ನೇಮಿಸಲಾಗಿದೆ. ಈ ಸಮಿತಿ ಎರಡು ದಿನಗಳಿ ಗೊಮ್ಮೆ ಸಭೆ ಸೇರಿ ಕೊರೊನಾ ಪಾಸಿಟಿವ್ ಹೊಂದಿರುವವರ ಮನೆಯವರನ್ನು ಸಂಪರ್ಕಿಸಿ ಅಲ್ಲಿನ ವ್ಯವಸ್ಥೆ ಗಮನಿಸುತ್ತಾರೆ. ಅಲ್ಲಿ ಮೂಲಸೌಕರ್ಯ ಇದ್ದರೆ ಹೋಂ ಕ್ವಾರಂಟೈನ್, ಇಲ್ಲವಾದಲ್ಲಿ ಕೇರ್ ಸೆಂಟರ್‌ಗೆ ಸೇರಿಸಲಾಗುತ್ತದೆ.
2. ಜಿಲ್ಲಾಡಳಿತ, ತಾಲೂಕು ಆಡಳಿತ ಹೊರತುಪಡಿಸಿ ದಂತೆ ಸ್ಥಳೀಯರನ್ನು ಒಗ್ಗೂಡಿಸಿ ಪರ್ಯಾಯ ವ್ಯವಸ್ಥೆ (ಪ್ಲ್ರಾನ್ ಬಿ) ರೂಪಿಸಿದ್ದೀರಾ?
ಗ್ರಾಮ ಮತ್ತು ನಗರ ಕಾರ್ಯಪಡೆಗಳಲ್ಲಿ ಎಲ್ಲ ವರ್ಗದ ಅಧಿಕಾರಿ, ಸಂಘ-ಸಂಸ್ಥೆ, ಜನಪ್ರತಿನಿಧಿಗಳ ತಂಡ ಇರುವುದರಿಂದ ಸ್ಥಳೀಯವಾಗಿ ಪ್ರಬಲ ತಂಡ ಇದಾಗಿದೆ. ಆಡಳಿತ ಮತ್ತು ಸಾರ್ವಜನಿಕರನ್ನು ಪ್ರತ್ಯೇಕಿಸದೆ ಜತೆ ಸೇರಿಸಿಕೊಂಡು ಕೊರೊನಾ ನಿಯಂತ್ರಣಕ್ಕೆ ತಂಡ ರಚಿಸಲಾಗಿದೆ.
3. ಸೋಂಕು ಹರಡದಂತೆ ಜನರಲ್ಲಿ ಜಾಗೃತಿ ಮೂಡಿ ಸುವ ಕೆಲಸವನ್ನು ಹೇಗೆ ಮಾಡುತ್ತಿದ್ದೀರಿ? ಖುದ್ದಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದ್ದೀರಾ?
ಜನಪ್ರತಿನಿಧಿಗಳ ಮೂಲಕ ಪ್ರತೀ ಮನೆ-ಮನೆ ಸಂಪರ್ಕ ಮಾಡಿ ಕೊರೊನಾ ಜಾಗೃತಿ ಮೂಡಿಸಲಾಗುತ್ತಿದೆ. ನಗರದಲ್ಲಿ ಧ್ವನಿವರ್ಧಕದ ಮೂಲಕ ಸಂದೇಶ ನೀಡಲಾಗಿದೆ. ಶಾಸಕರ ವಾರ್‌ರೂಂ ತೆರೆದು ನೆರವು ನೀಡಲಾಗುತ್ತಿದೆ. ನಿರಾಶ್ರಿತರಿಗಾಗಿ ನೆಲ್ಲಿಕಟ್ಟೆ ಶಾಲೆಯಲ್ಲಿ ಸೆಂಟರ್ ಸ್ಥಾಪಿಸಲಾಗಿದೆ.
4. ಪ್ರತಿ ಜಿಲ್ಲೆಯಲ್ಲೂ ಸಾಮಾನ್ಯವಾಗಿ ಕೇಳಿ ಬರು ತ್ತಿರುವ ಸಮಸ್ಯೆ ಆಕ್ಸಿಜನ್ ಕೊರತೆ, ಹಾಸಿಗೆಗಳ ಕೊರತೆ- ನಿಮ್ಮಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ?
ಪುತ್ತೂರಿನಲ್ಲಿ ಈ ತನಕ ಆಕ್ಸಿಜನ್, ಬೆಡ್ ಕೊರತೆ ಉಂಟಾಗಿಲ್ಲ. ಭವಿಷ್ಯದ ದೃಷ್ಟಿಯಿಂದ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ತಾಲೂಕು ಆಸ್ಪತ್ರೆ ಯಲ್ಲಿ 100 ಬೆಡ್ ಇದ್ದು 26 ಆಕ್ಸಿಜನ್ ಬೆಡ್‌ಗಳಿವೆ. 32 ಸಿಲಿಂಡರ್‌ಗಳಿವೆ. ಅಗತ್ಯ ಬಿದ್ದಲ್ಲಿ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯಲ್ಲಿ 30 ಬೆಡ್‌ಗಳಿಗೆ ಆಕ್ಸಿಜನ್ ಸಿಲಿಂಡರ್ ಒದಗಿಸಲು ಕುದುರೆಮುಖ ಕಂಪೆನಿ ಸಮ್ಮತಿಸಿದೆ. ತಾಲೂಕು ಆಸ್ಪತ್ರೆಯಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಬೃಹತ್ ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ. ಬಲಾ°ಡು ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ 100 ಬೆಡ್, ಹಳೆಯ ಗಿರಿಜಾ ಆಸ್ಪತ್ರೆಯನ್ನು ಸ್ವತ್ಛಗೊಳಿಸಿ 50 ಬೆಡ್ ಕಲ್ಪಿಸಿ ಕೊರೊನಾ ಸೆಂಟರ್‌ಗಳಾಗಿ ರೂಪಿಸಲಾಗಿದೆ. ಇದಲ್ಲದೆ ಖಾಸಗಿ ಆಸ್ಪತ್ರೆಗಳು ಕೂಡ ಬೆಡ್ ನೀಡಲು ಒಪ್ಪಿಗೆ ನೀಡಿವೆ. ತುರ್ತು ಸಂದರ್ಭ ಎದುರಿಸಲು ನಾವು ಸಜ್ಜಾಗಿದ್ದೇವೆ.
5. ಲಾಕ್‌ಡೌನ್ ಹಿನ್ನೆಲೆಯಲ್ಲಿ ನಿಮ್ಮ ಕ್ಷೇತ್ರದಲ್ಲಿ ಸಂಕಷ್ಟಕ್ಕೀಡಾಗಿರುವ ಬಡ ಕುಟುಂಬ ಗಳು/ಕೂಲಿ ಕಾರ್ಮಿಕರ ನೆರವಿಗೆ ಏನು ಮಾಡುತ್ತಿದ್ದೀರಿ?
ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ವಾರ್‌ರೂಂ ತಂಡ ಮಾಡು ತ್ತಿದೆ. ಆಹಾರದ ಸಮಸ್ಯೆ ಇರುವ ಕುಟುಂಬಕ್ಕೆ ಗ್ರಾಮಮಟ್ಟದಲ್ಲಿ ಪಕ್ಷದ ಕಾರ್ಯಕರ್ತರಿಗೆ ಸ್ಪಂದಿಸಲು ಸೂಚಿಸಲಾಗಿದೆ.
6. ಕ್ಷೇತ್ರದ ಯುವ/ಸಮುದಾಯ ಸಂಘಟನೆ ಗಳನ್ನು ಕಠಿನ ಪರಿಸ್ಥಿತಿಗೆ ಸಜ್ಜುಗೊಳಿಸಿದ್ದೀರಾ?
ಗ್ರಾಮ ಮಟ್ಟದಲ್ಲಿನ ಸಂಘ ಸಂಸ್ಥೆಗಳನ್ನು ಗ್ರಾ.ಪಂ.ವ್ಯಾಪ್ತಿಯ ಕಾರ್ಯಪಡೆ ಮೂಲಕ ಸಂಪರ್ಕಿಸಿ ತುರ್ತು ನೆರವಿಗೆ ಸಹಕಾರ ಕೇಳಲಾಗಿದೆ. ಅಗತ್ಯದ ಸಂದರ್ಭ ಆಹಾರ ಪೂರೈಕೆ, ಅನಾರೋಗ್ಯಕ್ಕೆ ಈಡಾದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಔಷಧ ತಂದೊದಗಿಸುವುದು ಇತ್ಯಾದಿ ಸೇವೆಗಳಿಗೆ ಸಿದ್ಧತೆ ನಡೆದಿದೆ. ರೋಟರಿ ಸಿಟಿ ಈಗಾಗಲೇ 30 ಬೆಡ್ ಒದಗಿಸಿದೆ.
7. ಜನರು ಕೊರೊನಾ ಸಂಕಷ್ಟ ಸಂಬಂಧ ಯಾವು ದೇ ಕ್ಷಣದಲ್ಲಿ ನಿಮ್ಮನ್ನು ಸಂಪರ್ಕಿಸ ಬಹುದೇ?
ಖಂಡಿತಾ. ತಾಲೂಕು ಸಹಾಯವಾಣಿ: 9449758145, 9448147697 ಮತ್ತು 9448108561
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.