Udupi: “ಸಾಗರ್ ಕವಚ್’ ಅಣಕು ಕಾರ್ಯಾಚರಣೆ; 21 ಮಂದಿ ಬಂಧನ, 2 ಬೋಟ್, ವಾಹನಗಳು ವಶಕ್ಕೆ
Team Udayavani, Oct 17, 2024, 1:26 AM IST
ಉಡುಪಿ: ಕರಾವಳಿ ಕಡಲತೀರದಲ್ಲಿ ವಿವಿಧ ರೀತಿಯ ವಿಧ್ವಂಸಕ ಕೃತ್ಯಕ್ಕೆ ಸಂಚು ಹಾಗೂ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ 21 ಮಂದಿಯನ್ನು ಬಂಧಿಸಲಾಗಿದ್ದು, 2 ಬೋಟ್‌ಗಳು ಹಾಗೂ 2 ದ್ವಿಚಕ್ರ ವಾಹನ ಮತ್ತು ನಕಲಿ ಬಾಂಬ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಇದು ಅಣಕು ಕಾರ್ಯಾಚರಣೆಯ ವರದಿ.
ಭಾರತೀಯ ನೌಕಾಪಡೆ, ಕರಾವಳಿ ಕಾವಲು ಪಡೆ, ಮಂಗಳೂರು ಕಮಿಷನರೆಟ್ ವ್ಯಾಪ್ತಿ, ಉಡುಪಿ, ಕಾರವಾರ ಪೊಲೀಸರು, ಬಂದರು, ಮೀನುಗಾರಿಕೆ ಇಲಾಖೆ, ಗುಪ್ತಚರ ಇಲಾಖೆ ವತಿಯಿಂದ ನಡೆದ “ಸಾಗರ್ ಕವಚ್’ ಅಣಕು ಕಾರ್ಯಾಚರಣೆ ಗುರುವಾರವೂ ಮುಂದುವರಿಯಲಿದೆ.
ಮಂಗಳೂರಿನ ಹಳೆಬಂದರು, ಹೆಜಮಾಡಿ ಲೈಟ್‌ಹೌಸ್, ಮಲ್ಪೆ ಬಂದರು, ಗಂಗೊಳ್ಳಿ, ಕುಮಟ, ಕಾರವಾರ ಬಂದರು ಹಾಗೂ ಉಡುಪಿಯ ಶ್ರೀಕೃಷ್ಣ ಮಠದ ಪರಿಸರದಲ್ಲಿ ಈ ಕಾರ್ಯಾಚರಣೆ ನಡೆಯಿತು. ವಿದ್ವಂಸಕ ಕೃತ್ಯ ನಡೆದಾಗ ನೌಕಪಡೆ, ಕರಾವಳಿ ಕಾವಲು ಪಡೆ ಇತ್ಯಾದಿ ಸ್ಪಂದನೆ, ಕಾರ್ಯಾಚರಣೆ ಹೇಗಿರಲಿದೆ, ಸ್ಥಳೀಯ ಸಹಭಾಗಿತ್ವದ ಬಗ್ಗೆ ಮಾಹಿತಿ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ರೈಲು ಬಡಿದು ವ್ಯಕ್ತಿ ಸಾವು
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.