Udupi: ಶ್ರೀಕೃಷ್ಣ ಮಠಕ್ಕೆ ನ.20ರಂದು ಕಾಂಚಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಆಗಮನ
ಭಗವದ್ಗೀತಾ ಕೋಟಿ ಲೇಖನ ಯಜ್ಞ ಹಿನ್ನೆಲೆ ಬೃಹತ್ ಗೀತೋತ್ಸವ ಉದ್ಘಾಟನೆ ಕಾರ್ಯಕ್ರಮ
Team Udayavani, Nov 12, 2024, 2:49 AM IST
![Udupi–Kanchi](https://www.udayavani.com/wp-content/uploads/2024/11/Udupi-Kanchi-620x372.jpg)
![Udupi–Kanchi](https://www.udayavani.com/wp-content/uploads/2024/11/Udupi-Kanchi-620x372.jpg)
ಉಡುಪಿ: ಶ್ರೀ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಹತ್ವಾಕಾಂಕ್ಷಿ ಯೋಜನೆಯಾದ ಭಗವದ್ಗೀತಾ ಕೋಟಿ ಲೇಖನ ಯಜ್ಞ ಹಿನ್ನೆಲೆಯಲ್ಲಿ ಶ್ರೀ ಕೃಷ್ಣಮಠದಲ್ಲಿ ಆಯೋಜಿಸಲಾಗುವ ಬೃಹತ್ ಗೀತೋತ್ಸವ ಉದ್ಘಾಟನೆಗೆ ಕಾಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿಯವರು ಆಗಮಿಸಲಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಶ್ರೀಗಳನ್ನು ಪುತ್ತಿಗೆ ಮಠಾಧೀಶರ ಅಪೇಕ್ಷೆ ಮೇರೆಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿ| ಪ್ರಸನ್ನಾಚಾರ್ಯ ಸಹಿತ ಅಧಿಕಾರಿಗಳು ಭೇಟಿ ಮಾಡಿ ಆಮಂತ್ರಣ ನೀಡಿದರು. ಪುತ್ತಿಗೆ ಶ್ರೀಪಾದರ ಆಹ್ವಾನವನ್ನು ಮನ್ನಿಸಿದ ಕಾಂಚಿ ಶ್ರೀಗಳು ನ.20ರಂದು ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಲು ಸಮ್ಮತಿಸಿದರು.
ಕಾಂಚಿ ಪೀಠದ ಈ ಹಿಂದಿನ ಯತಿಗಳಾಗಿದ್ದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಪುತ್ತಿಗೆ ಶ್ರೀಪಾದರ ತೃತೀಯ ಪರ್ಯಾಯ ಸಂದರ್ಭದಲ್ಲಿ ಜರಗಿದ್ದ ನವರತ್ನ ರಥ ಉದ್ಘಾಟನೆಗಾಗಿ ಉಡುಪಿಗೆ ಭೇಟಿ ನೀಡಿದ್ದರು.