ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ಮತ ಎಣಿಕೆ: ವಾಹನ ಸಂಚಾರದಲ್ಲಿ ಬದಲಾವಣೆ
Team Udayavani, May 13, 2023, 6:32 AM IST
ಉಡುಪಿ: ಜಿಲ್ಲೆಯ 5 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಇಂದು ಸೈಂಟ್ ಸಿಸಿಲೀಸ್ ಶಾಲೆಯ ಆವರಣದ ಎಣಿಕೆ ಕೇಂದ್ರದಲ್ಲಿ ನಡೆಯಲಿದೆ. ಅದರ ಸುತ್ತಲಿನ 100 ಮೀ. ಪ್ರದೇಶ ನಿಷೇಧಿತ ಪ್ರದೇಶವಾಗಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ.
ಬೆಳಗ್ಗೆ 7ರಿಂದ 6ರ ವರೆಗೆ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಬದಲಿ ವ್ಯವಸ್ಥೆ ಮಾಡಲಾಗಿದೆ:
– ಬ್ರಹ್ಮಗಿರಿ ಜಂಕ್ಷನ್‌ನಿಂದ ಜೋಡುಕಟ್ಟೆವರೆಗೆ ದ್ವಿಪಥ ಸಂಚಾರ ರಸ್ತೆಯ ಪೈಕಿ ಏಕಪಥವನ್ನು ಮುಚ್ಚಿದ್ದು, ಅಜ್ಜರಕಾಡು ಸಾರ್ವಜನಿಕ ಆಸ್ಪತ್ರೆಯ ಕಡೆ ಇರುವ ರಸ್ತೆಯಲ್ಲಿ ಸಂಚರಿಸಬಹುದು.
– ಮಲ್ಪೆ, ಕುಂದಾಪುರ, ಕಿದಿಯೂರು ಕಡೆಯಿಂದ ಅಂಬಲಪಾಡಿ ಬ್ರಹ್ಮಗಿರಿ ಮೂಲಕ ಉಡುಪಿ ಕಡೆಗೆ ಹೋಗುವ ಎಲ್ಲ ಬಸ್‌ಗಳು ಕರಾವಳಿ ಬನ್ನಂಜೆ ಸಿಟಿ ಬಸ್ ನಿಲ್ದಾಣದ ಮೂಲಕ ಬಸ್ ನಿಲ್ದಾಣ ತಲುಪಬೇಕು.
ಪೊಲೀಸ್ ಭದ್ರತೆ
ಮತ ಎಣಿಕೆ ನಡೆಯುವ ಭಾಗದಲ್ಲಿ ಸಿಆರ್‌ಪಿಎಫ್ ಪಡೆಯ ಪಿಎಸ್‌ಐ, ಸಿಬಂದಿ, ಕೆಎಸ್‌ಆರ್‌ಪಿ ತುಕಡಿ, 5 ಮಂದಿ ಸಬ್ ಇನ್‌ಸ್ಪೆಕ್ಟರ್‌ಗಳು, 25 ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿದೆ. ಡಿವೈಎಸ್‌ಪಿ ಹಾಗೂ ಇನ್‌ಸ್ಪೆಕ್ಟರ್‌ಗಳು ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.