ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ
2015ರಲ್ಲಿ 1,553 ಕೋಟಿ ರೂ. ಸಾಲ ಪಡೆದಿದ್ದ ಸರ್ಕಾರ
Team Udayavani, Nov 28, 2021, 10:15 PM IST
ಬೀಜಿಂಗ್ : ಯಾರಿಂದಲೇ ಆಗಲಿ ಪಡೆದುಕೊಂಡ ಸಾಲ ವಾಪಸ್ ನೀಡದೇ ಇದ್ದರೆ ಏನು ಮಾಡುತ್ತಾರೆ? ಸಾಲ ಪಡೆದವರ ಬಳಿ ಇರುವ ವಸ್ತುಗಳನ್ನು ವಶಕ್ಕೆ ಪಡೆಯುತ್ತಾರೆ. ಬ್ಯಾಂಕ್‌ಗಳಾದರೆ ಆಸ್ತಿ ಜಪ್ತಿ ಮಾಡುತ್ತವೆ. ಅದೇ ದಾರಿಯನ್ನು ಚೀನಾ ಹಿಡಿದಿದೆ. ಪೂರ್ವ ಆಫ್ರಿಕಾ ಖಂಡದ ದೇಶ ಉಗಾಂಡಕ್ಕೆ ಚೀನಾದ ಎಕ್ಸ್‌ಪೋರ್ಟ್ ಇಂಪೋರ್ಟ್ ಬ್ಯಾಂಕ್ 2015ರಲ್ಲಿ 1,553 ಕೋಟಿ ರೂ. (207 ಮಿಲಿಯನ್ ಡಾಲರ್) ಸಾಲ ನೀಡಿತ್ತು. ಅದನ್ನು ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಈಗ ಬ್ಯಾಂಕ್, ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ಜಪ್ತಿ ಮಾಡಿದೆ. ಹೀಗಾಗಿ, ಡ್ರ್ಯಾಗನ್‌ನ ಸಾಲ ನೀತಿಗೆ ಬಲಿಯಾದ ರಾಷ್ಟ್ರಗಳ ಸಾಲಿಗೆ ಆಫ್ರಿಕಾ ಖಂಡದ ಬಡ ರಾಷ್ಟ್ರವೂ ಸೇರಿದಂತಾಗಿದೆ.
ಉಗಾಂಡದ ಎಂಟೆಬೆ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶೇ.2ರ ಬಡ್ಡಿದರದಲ್ಲಿ 20 ವರ್ಷಗಳ ಅವಧಿಗೆ ಸಾಲ ಪಡೆಯಲಾಗಿತ್ತು. ನಂತರ ಏಳು ವರ್ಷಗಳ ಹೆಚ್ಚುವರಿ ಅವಧಿಯನ್ನೂ ಪಡೆದುಕೊಳ್ಳಲಾಗಿತ್ತು. ಆದರೆ ಸಾಲ ಮರುಪಾವತಿಗೆ ಸಂಬಂಧಿಸಿದ ನಿಯಮಗಳ ಪಾಲನೆ ಮತ್ತು ಚೀನಾ ನಿಬಂಧನೆಗಳನ್ನು ಮಾರ್ಪಾಡು ಮಾಡಿಸಿಕೊಳ್ಳುವಲ್ಲಿ ಉಗಾಂಡಾ ಸರ್ಕಾರ ವಿಫಲವಾಗಿದೆ. ಅದರ ಪರಿಣಾಮ, ಉಗಾಂಡದ ಏಕೈಕ ವಿಮಾನ ನಿಲ್ದಾಣವನ್ನು ಚೀನಾ ಬ್ಯಾಂಕ್ ಕೈವಶ ಮಾಡಿಕೊಂಡಿದೆ.
ಉಗಾಂಡ ಅಧ್ಯಕ್ಷ ಯೊವೇರಿ ಮುಸ್ವೇನಿ ಅವರು ಉನ್ನತಮಟ್ಟದ ನಿಯೋಗವನ್ನು ಬೀಜಿಂಗ್‌ಗೆ ಕಳುಹಿಸಿಕೊಟ್ಟಿದ್ದು, ಚೀನಾ ಜತೆಗೆ ಮಾತುಕತೆ ನಡೆಸಿ ವಿಮಾನ ನಿಲ್ದಾಣ ಬಿಡಿಸಿಕೊಳ್ಳುವಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅಲ್ಲಿನ ಹಣಕಾಸು ಸಚಿವರೂ ಇತ್ತೀಚೆಗೆ ಸಾಲದ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿರುವ ಬಗ್ಗೆ ಸಂಸತ್‌ನ ಕ್ಷಮೆಯನ್ನೂ ಕೇಳಿದ್ದಾರೆ.
ಇದನ್ನೂ ಓದಿ : ಆಕ್ಸ್‌ಫರ್ಡ್ ವಿವಿ ಪದವೀಧರೆಯಾದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.