Ujire ಎಸ್‌ಡಿಎಂ ಪ್ರಾಧ್ಯಾಪಕರಿಗೆ ಪ್ರತಿಷ್ಠಿತ ಅಮೆರಿಕದ ಪೇಟೆಂಟ್
ರಸಾಯನಶಾಸ್ತ್ರ ಸಂಶೋಧನೆಗೆ ವಿಶ್ವ ಮನ್ನಣೆ
Team Udayavani, Mar 24, 2024, 11:47 PM IST
ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ನೆಫಿಸತ್ ಪಿ., ಸಹಾಯಕ ಪ್ರಾಧ್ಯಾಪಕಿ ಡಾ| ಶಶಿಪ್ರಭಾ ಅವರ ಸಂಶೋಧನೆಗೆ ಪ್ರತಿಷ್ಠಿತ ಅಮೆರಿಕದ ಪೇಟೆಂಟ್ ಲಭಿಸಿದೆ. ಪ್ರಥಮ ಬಾರಿಗೆ ಎಸ್.ಡಿ.ಎಂ. ಕಾಲೇಜು ಅಮೆರಿಕದ ಪೇಟೆಂಟ್ ಮನ್ನಣೆ ಪಡೆದ ಹೆಗ್ಗಳಿಕೆಗೆ ಭಾಜನವಾಗಿದೆ.
ಈ ಹಿಂದೆ ಇದೇ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ನಾರಾಯಣ ಹೆಬ್ಟಾರ್ ಅವರ ಸಂಶೋಧನೆಗೆ ಆಸ್ಟ್ರೇಲಿಯದ ಪೇಟೆಂಟ್ ಲಭಿಸಿತ್ತು. ಉಳಿದೆಲ್ಲ ದೇಶಗಳ ಪೇಟೆಂಟ್‌ಗಿಂತ ಅಮೆರಿಕದ ಪೇಟೆಂಟ್‌ಗೆ ವಿಶೇಷ ವಿಶ್ವಮಾನ್ಯತೆ ಇದೆ. ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರದ ಸಂಶೋಧನ ಪ್ರಯೋಗಾಲಯದಲ್ಲಿಯೇ ಈ ಇಬ್ಬರು ಪ್ರಾಧ್ಯಾಪಕರು ಸಂಶೋಧನೆ ಕೈಗೊಂಡು ಯಶಸ್ವಿಯಾಗಿದ್ದಾರೆ.
“ಬೆಂಝಿಲಿಡೀನ್ ಡಿರೈವೆಟೀಸ್ ಆಫ್ ಫಿನೊಬಾಮ್ ಆ್ಯಸ್ ಆ್ಯಂಟಿ-ಇನ್‌ಫÉಮೇಟರಿ ಏಜೆಂಟ್’ ಎಂಬ ವಿಷಯದ ಮೇಲೆ ಈ ಸಂಶೋಧನೆಯನ್ನು ಕೈಗೊಳ್ಳಲಾ ಗಿತ್ತು. ದೈಹಿಕ ನೋವು ನಿವಾರಕ ಔಷಧೀಯ ಪ್ರಯೋಜನಗಳನ್ನು ವಿಸ್ತರಿಸುವುದಕ್ಕೆ ಬೇಕಾದ ಪ್ರಾಯೋಗಿಕ ಮಾರ್ಗದರ್ಶಿ ಪರಿಕಲ್ಪನೆಯಾಗಿ ಈ ಸಂಶೋಧನೆಗೆ ಮಹತ್ವ ವಿದೆ. ವೈದ್ಯಕೀಯ ರಂಗದ ಚಿಕಿತ್ಸೆಯ ವಿಧಾನಗಳನ್ನು ಮರುರೂಪಿಸುವುದಕ್ಕೆ ಪ್ರಸಕ್ತ ಸಂಶೋಧನೆಯ ಫಲಿತಗಳು ಪ್ರಯೋಜನಕಾರಿಯಾಗಲಿವೆ.
ಸೌದಿ ಅರೇಬಿಯಾದ ಕಿಂಗ್ ಫೈಸಲ್ ವಿ.ವಿ. ಸಹಭಾಗಿತ್ವ ದೊಂದಿಗೆ ಕೈಗೊಳ್ಳಲಾಗಿದ್ದ ಸಂಶೋಧನೆಗೆ ಲಭಿಸಿದ ಪೇಟೆಂಟ್‌ನ ರಕ್ಷಣೆ 20 ವರ್ಷಗಳದ್ದಾಗಿದೆ. ಈ ನಿರ್ದಿಷ್ಟ ಸಂಶೋಧನ ಫಲಿತಗಳ ಆಧಾರದ ಆವಿಷ್ಕಾರ, ಬಳಕೆ ಮತ್ತು ಮಾರಾಟದ ಹಕ್ಕುಸ್ವಾಮ್ಯವು ಈ ಇಬ್ಬರು ಪ್ರಾಧ್ಯಾಪಕರದ್ದಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.