ಉಜಿರೆ ಎಸ್.ಡಿ.ಎಂ ಕಾಲೇಜಿಗೆ ನ್ಯಾಕ್ ಅತ್ಯುನ್ನತ ಗ್ರೇಡ್
Team Udayavani, Feb 11, 2023, 10:23 AM IST
ಬೆಳ್ತಂಗಡಿ: ರಾಷ್ಟ್ರೀಯ ಮೌಲ್ಯಾಂಕನ ಹಾಗೂ ಮೌಲ್ಯಮಾಪನದ (ನ್ಯಾಕ್) ನಾಲ್ಕನೇ ಆವೃತ್ತಿಯಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅತ್ಯುನ್ನತ ಗ್ರೇಡ್‌ನೊಂದಿಗೆ “ಎ ಪ್ಲಸ್ ಪ್ಲಸ್” ಮನ್ನಣೆ ಗಳಿಸಿದೆ.
ಒಡಿಶಾದ ಕಲಹಂಡಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಸಂಜಯ ಕುಮಾರ್ ಸತಪತಿ ಅಧ್ಯಕ್ಷತೆಯ ನ್ಯಾಕ್ ಸಮಿತಿಯಲ್ಲಿ ಸದಸ್ಯ ಸಂಯೋಜಕರಾಗಿ ಗುರುನಾನಕ್ ದೇವ್ ವಿ.ವಿ.ಯ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಕರಣ್ ಜೀತ್‌ಸಿಂಗ್ ಹಾಗೂ ಮಹಾರಾಷ್ಟ್ರದ ಲಾತೂರಿನ ರಾಜಶ್ರೀ ಶಾಹು ಮಹಾವಿದ್ಯಾಲಯದ ಪ್ರಾಂಶುಪಾಲ ಮಹಾದೇವ್ ಗವಹಾನೆ ಅವರು ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಸಮಗ್ರ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಬೆಳವಣಿಗೆಯ ಸ್ವರೂಪದ ಮಾಹಿತಿ ಪಡೆದಿದ್ದರು.
ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು, ಅತಿಥಿ ಉಪನ್ಯಾಸ, ಹಳೆಯ ವಿದ್ಯಾರ್ಥಿಗಳೊಂದಿಗಿನ ಸಂವಾದ, ಸಮುದಾಯ ಕೇಂದ್ರಿತ ವಿಸ್ತರಣ ಚಟುವಟಿಕೆಗಳು ಹಾಗೂ ಅಧ್ಯಾಪಕರ ಸಂಶೋಧನೆ ಮತ್ತು ಬೋಧನ ಸಂಬಂಧಿತ ಸಾಧನೆಗಳು ನ್ಯಾಕ್‌ನ ಅತ್ಯುನ್ನತ ಶ್ರೇಯಾಂಕ ಪಡೆಯಲು ಪೂರಕವಾಗಿವೆ. ಕಾಲೇಜಿನ ವಿವಿಧ ವಿಭಾಗಗಳ ಪ್ರಯೋಗಾಲಯಗಳು, ಕ್ರೀಡಾ ಸೌಲಭ್ಯಗಳು, ಹಾಸ್ಟೆಲ್ ವ್ಯವಸ್ಥೆ, ಕಲಾಕೇಂದ್ರ ಸೇರಿದಂತೆ ವಿವಿಧ ಘಟಕಗಳ ಕ್ರಿಯಾಶೀಲ ಚಟುವಟಿಕೆಗಳು ಅತ್ಯುನ್ನತ ಶ್ರೇಯಾಂಕದ ಹಿರಿಮೆ ತಂದುಕೊಟ್ಟಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.