UK: ಡಿಲೀಟ್ ಆದ ಮೇಸೆಜ್ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!
Team Udayavani, Jun 17, 2024, 3:44 PM IST
ಯುನೈಟೆಡ್ ಕಿಂಗ್ ಡಮ್: ವೇಶ್ಯೆ(ಸೆಕ್ಸ್ ವರ್ಕರ್ಸ್)ಯರಿಗೆ ಕಳುಹಿಸಿದ್ದ ಡಿಲೀಟ್ ಆದ ಮೇಸೆಜ್ ಅನ್ನು ಪತ್ನಿ ಮತ್ತೆ ಪತ್ತೆ ಹಚ್ಚಿದ್ದ ಪರಿಣಾಮ ಆಕ್ರೋಶಗೊಂಡ ಪತಿ Apple ಕಂಪನಿ ವಿರುದ್ಧವೇ ಕಾನೂನು ಸಮರಕ್ಕೆ ಇಳಿದ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Dendoor Katte: ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಹಸು, 1 ಕರು ಪತ್ತೆ
“ಇಂಗ್ಲೆಂಡ್ ಉದ್ಯಮಿಯೊಬ್ಬರು ತನ್ನ ಐಫೋನ್ ನಲ್ಲಿನ ಮೇಸೆಜ್ ಗಳನ್ನು ಡಿಲೀಟ್ ಮಾಡಿದ್ದರು. ಇದು ಶಾಶ್ವತವಾಗಿ ಡಿಲೀಟ್ ಆಗುವುದಾಗಿ ಉದ್ಯಮಿ ನಂಬಿದ್ದರು. ಆದರೆ ಇದೀಗ ಪತಿಯ ಮೊಬೈಲ್ ನಲ್ಲಿ ಡಿಲೀಟ್ ಆದ ಮೇಸೆಜ್ ಗಳನ್ನು ಪತ್ನಿ ಮತ್ತೆ ಪತ್ತೆ ಹಚ್ಚಿದ್ದು, ಇದು ವಿಚ್ಛೇದನಕ್ಕೆ ಎಡೆ ಮಾಡಿಕೊಟ್ಟಿರುವುದಾಗಿ ವರದಿ ವಿವರಿಸಿದೆ.
ಗುರುತು ಬಹಿರಂಗಗೊಳಿಸಿಕೊಳ್ಳದ ಉದ್ಯಮಿ ಸೆಕ್ಸ್ ವರ್ಕರ್ಸ್ ಗಳ ಜತೆ ಸಂವಹನ ನಡೆಸಲು IMessage ಅನ್ನು ಬಳಸುತ್ತಿದ್ದು, ಐಫೋನ್ ನಲ್ಲಿದ್ದ ದಾಖಲೆಯನ್ನು ಡಿಲೀಟ್ ಮಾಡಿದ್ದರು. ಆದರೆ ಕುಟುಂಬ ಸದಸ್ಯರ(ಅಥವಾ ಉದ್ಯಮಿಗೆ ಸೇರಿದ) ಇತರ ಡಿವೈಸ್ ಗಳಲ್ಲಿ Synch ಆಗಿದ್ದರಿಂದ IMacನಲ್ಲಿ ಮೆಸೇಜ್ ಗಳು ಹಾಗೇ ಉಳಿದಿತ್ತು. ಇದರ ಪರಿಣಾಮ ಪತಿ ಡಿಲೀಟ್ ಮಾಡಿರುವ ಸಂದೇಶಗಳನ್ನು ಪತ್ನಿ IMacನಲ್ಲಿ ಪತ್ತೆ ಹಚ್ಚಿದ್ದರು.
ಇದೀಗ ಪೇಚಿಗೆ ಸಿಲುಕಿರುವ ಪತಿ, Apple ಕಂಪನಿ ಗ್ರಾಹಕರಿಗೆ ವಂಚಿಸಿದೆ ಎಂದು ಆರೋಪಿಸಿದ್ದು, ಒಂದು ಡಿವೈಸ್ ನಲ್ಲಿ ಡಿಲೀಟ್ ಮಾಡಿದ ಮೇಸೆಜ್ ಗಳು ಇತರ ಲಿಂಕ್ಡ್ ಡಿವೈಸ್ ಗಳಲ್ಲಿ ಡಿಲೀಟ್ ಆಗುವುದಿಲ್ಲ ಎಂಬ ಮಾಹಿತಿ Apple ನೀಡಿಲ್ಲ ಎಂದು ಉದ್ಯಮಿ ದೂರಿದ್ದಾರೆ.
ಮೇಸೆಜ್ ಪತ್ತೆ ಹಚ್ಚಿದ ನಂತರ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ತನ್ನಂತೆಯೇ ಇದೇ ರೀತಿ ಸಮಸ್ಯೆ ಎದುರಿಸುವವರು ಇದ್ದಿರಬಹುದು. ಅದಕ್ಕಾಗಿ Apple ಕಂಪನಿ ವಿರುದ್ಧ 5 ಮಿಲಿಯನ್ ಪೌಂಡ್ಸ್ ದಾವೆ ಹೂಡಿರುವುದಾಗಿ ಉದ್ಯಮಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.