ಉಕ್ರೇನ್‌ನಲ್ಲಿ ರಷ್ಯಾ ನರಮೇಧ ನಿಲ್ಲಲಿ

Team Udayavani, Apr 9, 2022, 6:00 AM IST

ಉಕ್ರೇನ್‌ನಲ್ಲಿ ರಷ್ಯಾ ನರಮೇಧ ನಿಲ್ಲಲಿ

ಉಕ್ರೇನ್‌ ಮೇಲಿನ ರಷ್ಯಾ ದಾಳಿ ಆರಂಭವಾಗಿ ಆಗಲೇ 44 ದಿನಗಳು ಮುಗಿದಿವೆ. ಇನ್ನೂ ರಷ್ಯಾ ರಣಕೇಕೆ ನಿಂತಿಲ್ಲ. ಈ ಮಧ್ಯೆ ಶುಕ್ರವಾರ ಕ್ರಮಟೋಸ್ಕ್ನ ರೈಲ್ವೇ ನಿಲ್ದಾಣವೊಂದರ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, 39ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. ಇದರಲ್ಲಿ ಮಕ್ಕಳೂ ಸೇರಿದ್ದಾರೆ ಎಂಬುದು ನೋವಿನ ಸಂಗತಿ. ಇಡೀ ಜಗತ್ತೇ ರಷ್ಯಾ ವಿರುದ್ಧ ತಿರುಗಿಬಿದ್ದಿದ್ದರೂ ಇಲ್ಲಿವರೆಗೆ ಏಕೆ ಯುದ್ಧ ನಿಲ್ಲಿಸಿಲ್ಲ ಎಂಬುದೇ ಯಾರಿಗೂ ಅರ್ಥವಾಗದ ಸಂಗತಿಯಾಗಿದೆ. ಈಗಾಗಲೇ ಉಕ್ರೇನ್‌, ತಾನು ನ್ಯಾಟೋಗೆ ಸೇರ್ಪಡೆಯಾಗಲ್ಲ ಎಂದು ಖಚಿತವಾಗಿಯೇ ಹೇಳಿದೆ. ಇದೇ ವಿಷಯ ಇರಿಸಿಕೊಂಡು ಯುದ್ಧ ಸಾರಿರುವ ರಷ್ಯಾ, ಉಕ್ರೇನ್‌ನ ಭರವಸೆ ಬಳಿಕವೂ ಯುದ್ಧ ನಿಲ್ಲಿಸುವ ಮಾತು ಆಡುತ್ತಿಲ್ಲ. ಆರಂಭದ ದಿನಗಳಲ್ಲಿ ಕಟ್ಟಡಗಳು, ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ರಷ್ಯಾ, ಈಗ ಮನುಷ್ಯರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ಮೂಲಕ ನೇರವಾಗಿಯೇ ನರಮೇಧಕ್ಕೂ ಕೈಹಾಕಿದೆ.

ಶುಕ್ರವಾರ ರೈಲ್ವೇ ನಿಲ್ದಾಣದ ಮೇಲೆ ನಡೆದ ಕ್ಷಿಪಣಿ ದಾಳಿಯೂ ನರಮೇಧಕ್ಕೆ ಪೂರಕವಾದದ್ದೇ. ಯಾರ ತಂಟೆಗೂ ಹೋಗದೇ, ತಮ್ಮ ಪಾಡಿಗೆ ರೈಲು ಹತ್ತಲು ಬಂದಿದ್ದ ಜನರು, ರಷ್ಯಾ ಕ್ಷಿಪಣಿಯ ಆರ್ಭಟಕ್ಕೆ ನಲುಗಿಹೋಗಿದ್ದಾರೆ. ಕ್ರಮಟೋಸ್ಕ್ನ ಸುತ್ತಲಿನ ಪ್ರದೇಶಗಳಂತೂ ನರಕಸದೃಶವಾದಂತೆ ಕಾಣಿಸುತ್ತಿವೆ.

ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾವನ್ನು ಯಾರೊಬ್ಬರೂ ಸಮರ್ಥಿಸಿಕೊಳ್ಳಲು ತಯಾರಿಲ್ಲ. ವಿಶ್ವಸಂಸ್ಥೆಯಲ್ಲಿ ಭಾರತ, ರಷ್ಯಾ ವಿರುದ್ಧವಾಗಿ ಮತ ಹಾಕದೇ ಇದ್ದರೂ ಗೈರು ಹಾಜರಾಗಿ ರಷ್ಯಾ ಪರ ನಿಂತುಕೊಂಡಿಲ್ಲ ಎಂಬ ಸಂದೇಶವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ರವಾನಿಸಿದೆ. ಜತೆಗೆ ಇತ್ತೀಚಿನ ನರಮೇಧಗಳನ್ನು ತೀವ್ರವಾಗಿ ವಿರೋಧಿಸಿದ್ದು, ಸ್ವತಂತ್ರ ತನಿಖೆಯಾಗಬೇಕು ಎಂದೂ ಭಾರತ ಒತ್ತಾಯಿಸಿದೆ.

ಯುದ್ಧ ಆರಂಭವಾದಾಗಿನಿಂದ ರಷ್ಯಾದ ಮೇಲೆ ಅಂತಾರಾಷ್ಟ್ರೀಯ ಸಮುದಾಯ ಒಂದಲ್ಲ ಒಂದು ರೀತಿ, ದಿಗ್ಬಂಧನ ವಿಧಿಸಿಕೊಂಡೇ ಬರುತ್ತಿದೆ. ಆದರೆ ರಷ್ಯಾ ಇದ್ಯಾವುದಕ್ಕೂ ಬಗ್ಗಿಲ್ಲ. ಆದರೆ ಭಾರೀ ದೊಡ್ಡ ಬೆಳವಣಿಗೆ ಎಂಬಂತೆ, ಗುರುವಾರ ರಾತ್ರಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಹೊರದಬ್ಬಲಾಗಿದೆ. ಇದುವರೆಗಿನ ಎಲ್ಲ ನಿರ್ಧಾರಗಳಿಗಿಂತ ಇದು ಅತೀದೊಡ್ಡ ತೀರ್ಮಾನ ಎಂಬುದು ವಿಶೇಷ. ಸದ್ಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಸ್ಥಾನದಿಂದ ರಷ್ಯಾವನ್ನು ಹೊರಹಾಕುವುದು ಅಷ್ಟು ಸಲೀಸಲ್ಲ. ಇದಕ್ಕೆ ಕಾರಣ ರಷ್ಯಾ ಹೊಂದಿರುವ ಖಾಯಂ ಸದಸ್ಯ ಸ್ಥಾನ ಮತ್ತು ವಿಟೋ ಅಧಿಕಾರ. ಹೀಗಾಗಿ ಭದ್ರತಾ ಮಂಡಳಿಯಲ್ಲಿ ತೆಗೆದುಕೊಳ್ಳಲಾಗದ ಕ್ರಮಗಳನ್ನು ಬೇರೆ ಕಡೆಗಳಲ್ಲಿ ತೆಗೆದುಕೊಳ್ಳಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಉಕ್ರೇನ್‌ ಮೇಲಿನ ದಾಳಿಯನ್ನು ಗಮನಿಸಿದರೆ, ರಷ್ಯಾ ಅಸಹನೆಯಿಂದ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಕಾರಣ, ಈ ಯುದ್ಧದಲ್ಲಿ ರಷ್ಯಾಗೆ ಆಗಿರುವ ಹಿನ್ನಡೆ. ತನ್ನ ಕಡೆಯ ಸಾವಿರಾರು ಸೈನಿಕರನ್ನು ಕಳೆದುಕೊಂಡಿರುವ ರಷ್ಯಾ ಸೇಡು ತೀರಿಸಿಕೊಳ್ಳುವಂತೆ ನಾಗರಿಕರ ಮೇಲೆ ಅಮಾನುಷವಾಗಿ ದಾಳಿ ನಡೆಸುತ್ತಿದೆ. ರಷ್ಯಾದ ಈ ವರ್ತನೆಯನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವೇ ಇಲ್ಲ. ಇದಕ್ಕಿಂತ ಪ್ರಮುಖವಾಗಿ ಮೊದಲು ಈ ಯುದ್ಧ ನಿಲ್ಲಿಸಲು ಜಗತ್ತಿನ ಎಲ್ಲ ದೇಶಗಳು ಒಂದಾಗಬೇಕಾದ ಅನಿವಾರ್ಯತೆಯೂ ಇದೆ.

ಟಾಪ್ ನ್ಯೂಸ್

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.