ನಿಲ್ಲದ ಕೋವಿಡ್ ಭೀತಿ : ಉಳ್ಳಾಲದಲ್ಲಿ ಒಂದೇ ದಿನ 28 ಮಂದಿಯಲ್ಲಿ ಸೋಂಕು ದೃಢ
Team Udayavani, Jul 2, 2020, 5:31 PM IST
ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಉಳ್ಳಾಲ ಪರಿಸರದಲ್ಲಿ ಗುರುವಾರ ಒಂದೇ ದಿನ ಒಟ್ಟು 28 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟ ವರದಿಯಾಗಿದೆ.
ಕಳೆದ ಕೆಲ ದಿನಗಳಿಂದ ಉಳ್ಳಾಲ ಪರಿಸರದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ಗುರುವಾರ ಉಳ್ಳಾಲ ಸುತ್ತಮುತ್ತಲಿನ ಪ್ರದೇಶದಲ್ಲಿ 2 ವರ್ಷ 3 ವರ್ಷದ ಮಕ್ಕಳು ಸೇರಿ 28 ಮಂದಿಗೆ ಸೋಂಕು ಹರಡಿದೆ.
ಸೋಂಕಿತರಲ್ಲಿ ಅನಿಲ ಕಂಪೌಂಡ್ ಉಳ್ಳಾಲದ 6 ಮತ್ತು 3 ರ ಹರೆಯದ ಬಾಲಕರು , ಮುಕ್ಕಚ್ಚೇರಿಯ 29ರ ಮಹಿಳೆ, 39 ವರ್ಷದ ಗಂಡಸು, ಆಝಾದನಗರ ಉಳ್ಳಾಲದ 44 ಹಾಗೂ 55 ರ ಗಂಡಸು, 36, 50, 30ರ ಮಹಿಳೆಯರು, 13 ಹಾಗೂ 8ರ ಬಾಲಕರು, 12 ವರ್ಷದ ಬಾಲಕಿ, 2 ವರ್ಷದ ಹರೆಯದ ಮಗು, ಉಳ್ಳಾಲ ಪಟೇಲ ಕಂಪೌಂಡಿನ 51ರ ಹರೆಯದ ಗಂಡಸು, ಹರೇಕಳ ಪಂಚಾಯತ್ ಬಳಿಯ 26 ರ ಯುವಕ , ಅಕ್ಕರೆಕೆರೆ ಉಳ್ಳಾಲದ 46 ವರ್ಷದ ಗಂಡಸು , ಮುನ್ನೂರು ಸಂತೋಷನಗರದ 52 ರ ಗಂಡಸು, ತೊಕ್ಕೊಟ್ಟು ಪರಿಸರದ 13ವರ್ಷದ ಬಾಲಕಿ , ಮೇಲಂಗಡಿ ಉಳ್ಳಾಲದ 32 ವರ್ಷದ ಗಂಡಸು, ಉಳ್ಳಾಲ ಹೈದರಾಲಿ ರಸ್ತೆಯ 30 ವರ್ಷದ ಗಂಡಸು, ಮುಕ್ಕಚ್ಚೇರಿ ರಸ್ತೆಯ 48 ವರ್ಷದ ಗಂಡಸು, ಸುಲ್ತಾನ್ ನಗರ ಉಳ್ಳಾಲದ 48ವರ್ಷದ ಗಂಡಸು, ಉಳ್ಳಾಲ ಪದ್ಮಶಾಲಿ ಕಂಪೌಂಡಿನ 44 ವರ್ಷದ ಮಹಿಳೆ , ಮೊಗವೀರಪಟ್ನ ಉಳ್ಳಾಲದ 54 ವರ್ಷದ ಗಂಡಸು , ಸೋಮೇಶ್ವರ ಉಳ್ಳಾಲದ 65 ವರ್ಷದ ಗಂಡಸು, ಅನಿಲಕಂಪೌಂಡ್ ಉಳ್ಳಾಲದ 29ವರ್ಷದ ಗಂಡಸು, ಕಲ್ಲಾಪು ತೊಕ್ಕೊಟ್ಟು ವಿನ 27ವರ್ಷದ ಮಹಿಳೆ ಸೇರಿ ಸೋಮೇಶ್ವರ, ಮುನ್ನೂರು, ಹರೇಕಳದಲ್ಲಿ ಮೂವರು ಸೇರಿ ಒಟ್ಟು ೨೮ ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್ಲೈನ್ ಗೇಮ್ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.