ಅಂಡರ್-19 ವಿಶ್ವಕಪ್ ಕ್ವಾರ್ಟರ್ ಫೈನಲ್: ಬಾಂಗ್ಲಾ ವಿರುದ್ಧ ಭಾರತಕ್ಕೆ ಸೇಡಿನ ಪಂದ್ಯ
ಎದುರಿಗಿದೆ 2020ರ ಫೈನಲ್ ಸೋಲು; ಪೂರ್ಣ ಸಾಮರ್ಥ್ಯದ ಭಾರತ ತಂಡ ಕಣಕ್ಕೆ
Team Udayavani, Jan 23, 2022, 5:50 AM IST
ಆಂಟಿಗಾ: ಏಶ್ಯದ ಪ್ರಮುಖ ತಂಡಗಳಾದ ಭಾರತ ಮತ್ತು ಬಾಂಗ್ಲಾದೇಶ ಶನಿವಾರದ ಬಹು ನಿರೀಕ್ಷೆಯ ಅಂಡರ್-19 ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಗಲಿವೆ.
ಟೀಮ್ ಇಂಡಿಯಾ ಕಡೆಯಿಂದ ಬಂದ ಶುಭ ಸಮಾಚಾರವೆಂದರೆ ಕೋವಿಡ್ ಸೋಂಕಿಗೊಳಗಾದ ಆಟಗಾರರೆಲ್ಲ ಚೇತರಿಸಿ ಕೊಂಡಿರುವುದು. ನಾಯಕ ಯಶ್ ಧುಲ್ ಸೇರಿದಂತೆ 5 ಮಂದಿ ಆಟಗಾರರಿಗೆ ಲೀಗ್ ಹಂತದ ದ್ವಿತೀಯ ಪಂದ್ಯಕ್ಕೂ ಮುನ್ನ ಕೋವಿಡ್ ಪಾಸಿಟಿವ್ ಅಂಟಿಕೊಂಡಿತ್ತು.
ಮೊದಲ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 45 ರನ್ನುಗಳಿಂದ ಉರುಳಿಸಿದ ಭಾರತ “ಸುರಕ್ಷಿತ ವಲಯ’ದಲ್ಲಿತ್ತು. ಬಳಿಕ ಮೀಸಲು ಸಾಮರ್ಥ್ಯದ ತಂಡ ಕಣಕ್ಕಿಳಿಯಿತು. ನಿಶಾಂತ್ ಸಿಂಧು ನೇತೃತ್ವ ವಹಿಸಿದರು. ಐರ್ಲೆಂಡ್ ಮತ್ತು ಉಗಾಂಡವನ್ನು ಕ್ರಮವಾಗಿ 174 ರನ್ ಹಾಗೂ 326 ರನ್ನುಗಳಿಂದ ಅಧಿಕಾರಯುತವಾಗಿಯೇ ಮಣಿಸಿದ ಭಾರತ ಅಜೇಯವಾಗಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿತು. ಇನ್ನೀಗ ಬಾಂಗ್ಲಾ ಸರದಿ.
2020ರ ಫೈನಲ್ ಸೋಲು..
ಭಾರತದ ಪಾಲಿಗೆ ಇದು ಸೇಡಿನ ಪಂದ್ಯ. 2020ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ನೆಚ್ಚಿನ ತಂಡವಾಗಿದ್ದ ಭಾರತಕ್ಕೆ ಬಾಂಗ್ಲಾದೇಶ ಆಘಾತಕಾರಿ ಸೋಲುಣಿಸಿತ್ತು; ಮೊದಲ ಸಲ ಅಂಡರ್-19 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಂದಿನ ಸೋಲಿಗೆ ಟೀಮ್ ಇಂಡಿಯಾದ ಕಿರಿಯರು ತಿರುಗೇಟು ನೀಡಬೇಕಿದೆ. ಇದಕ್ಕೂ ಮೊದಲು ಯುಎಇಯಲ್ಲಿ ನಡೆದ ಏಶ್ಯ ಕಪ್ ಸೆಮಿಫೈನಲ್‌ನಲ್ಲಿ ಬಾಂಗ್ಲಾವನ್ನು ಮಣಿಸಿದ ಭಾರತ ಒಂದು ಹಂತದ ಸೇಡು ತೀರಿಸಿಕೊಂಡಿದ್ದನ್ನು ಮರೆಯುವಂತಿಲ್ಲ.
ನಾಯಕ ಧುಲ್ ಮತ್ತು ಉಪನಾಯಕ ರಶೀದ್ ಆಡುವುದರಿಂದ ಭಾರತದ ಬ್ಯಾಟಿಂಗ್ ವಿಭಾಗ ಹೆಚ್ಚು ಬಲಿಷ್ಠಗೊಳ್ಳಲಿದೆ. ಆರಂಭಿಕರಾದ ರಘುವಂಶಿ-ಹರ್ನೂರ್ ಸಿಂಗ್ ಉತ್ತಮ ಲಯದಲ್ಲಿದ್ದಾರೆ. ಆಲ್‌ರೌಂಡರ್ ರಾಜ್ ಬಾವಾ, ಎಡಗೈ ಸ್ಪಿನ್ನರ್ ವಿಕ್ಕಿ ಓಸ್ತವಾಲ್, ರಾಜ್ಯವರ್ಧನ್ ಅವರೆಲ್ಲ ಭಾರತ ತಂಡದ ಇನ್‌ಫಾರ್ಮ್ ಆಟಗಾರರು.
ಲೀಗ್ ಹಂತದಲ್ಲಿ ಇಂಗ್ಲೆಂಡಿಗೆ ಸೋತಿದ್ದ ಬಾಂಗ್ಲಾದೇಶ, ಬಳಿಕ ಕೆನಡಾ ಮತ್ತು ಯುಎಇ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
ನಿಶಾಂತ್ ಸಿಂಧುಗೆ ಕೊರೊನಾ
ಭಾರತದ ಅಂಡರ್-19 ತಂಡದ ಕೊರೊನಾ ಬಾಧಿತ ಕ್ರಿಕೆಟಿಗರೆಲ್ಲ ಚೇತರಿಸಿಕೊಂಡರೇನೋ ಸರಿ, ಆದರೆ ಕ್ವಾರ್ಟರ್ ಫೈನಲ್ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆಯೇ ಭಾರತ ತಂಡದಲ್ಲಿ ಮತ್ತೊಂದು ಕೊರೊನಾ ಕೇಸ್ ಕಂಡುಬಂದಿದೆ. ಕಳೆದೆರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ನಿಶಾಂತ್ ಸಿಂಧು ಕೊರೊನಾ ಫಲಿತಾಂಶ ಪಾಸಿಟಿವ್ ಬಂದಿದ್ದು, ಬಾಂಗ್ಲಾದೇಶ ವಿರುದ್ಧ ಆಡಲಿಳಿಯುವುದಿಲ್ಲ ಎಂದು ತಂಡದ ಪ್ರಕಟನೆ ತಿಳಿಸಿದೆ. ನಿಶಾಂತ್ ಬದಲು ಎಡಗೈ ಸ್ಪಿನ್ನರ್ ಅನೀಶ್ವರ್ ಗೌತಮ್ ಆಡುವ ಸಾಧ್ಯತೆ ಇದೆ.
ಆರಂಭ: ಸಂಜೆ 6.30
ಪ್ರಸಾರ: ಸ್ಟಾರ್ ಸ್ಫೋರ್ಟ್ಸ್
ಇದನ್ನೂ ಓದಿ:ಏಶ್ಯ ಕಪ್ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ
ಲಂಕಾ ಲಾಗ; ಅಫ್ಘಾನ್ ಸೆಮಿ ನಗು
ಕೂಲಿಜ್ (ಆಂಟಿಗಾ): ಅಂಡರ್-19 ವಿಶ್ವಕಪ್ ಕೂಟದುದ್ದಕ್ಕೂ ಅಮೋಘ ಪ್ರದರ್ಶನ ನೀಡುತ್ತ ಬಂದ ಶ್ರೀಲಂಕಾ, ಸಣ್ಣ ಮೊತ್ತದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ಥಾನ ವಿರುದ್ಧ 4 ರನ್ನಿನಿಂದ ಸೋತು ಹೊರಬಿದ್ದಿದೆ. ಅಫ್ಘಾನ್ ದೊಡ್ಡ ಬೇಟೆಯೊಂದನ್ನು ಆಡಿ ಇಂಗ್ಲೆಂಡ್ ಎದುರಿನ ಕದನಕ್ಕೆ ಅಣಿಯಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನದಿಂದ ಗಳಿಸಲು ಸಾಧ್ಯವಾದದ್ದು ಕೇವಲ 134 ರನ್ (47.1 ಓವರ್). ಈ ಅಲ್ಪ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ಅಫ್ಘಾನ್ ನಿರೀಕ್ಷೆಗೂ ಮೀರಿ ಯಶಸ್ಸು ಪಡೆಯಿತು. ಲಂಕಾ 46 ಓವರ್‌ಗಳಲ್ಲಿ 130ಕ್ಕೆ ಸರ್ವಪತನ ಕಂಡಿತು.
ಸಂಕ್ಷಿಪ್ತ ಸ್ಕೋರ್: ಅಫ್ಘಾನಿಸ್ಥಾನ-47.1 ಓವರ್‌ಗಳಲ್ಲಿ 134 (ಅಬ್ದುಲ್ ಹದಿ 37, ನೂರ್ ಅಹ್ಮದ್ 30, ಅಲ್ಲಾಹ್ ನೂರ್ 25, ವಿನುಜ 10ಕ್ಕೆ 5, ವೆಲ್ಲಲಗೆ 36ಕ್ಕೆ 3). ಶ್ರೀಲಂಕಾ-46 ಓವರ್‌ಗಳಲ್ಲಿ 130 (ವೆಲ್ಲಲಗೆ 34, ರವೀನ್ 21, ಬಿಲಾಲ್ ಸಮಿ 33ಕ್ಕೆ 2). ಪಂದ್ಯಶ್ರೇಷ್ಠ: ನೂರ್ ಅಹ್ಮದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.