ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೊಕೊನಟ್‌ ಪಾರ್ಲರ್‌!

ಕಲ್ಪವೃಕ್ಷ ಉದ್ಯಮಕ್ಕೆ ದೇಸಿ ಸ್ಪರ್ಶ

Team Udayavani, Jun 11, 2020, 5:30 AM IST

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೊಕೊನಟ್‌ ಪಾರ್ಲರ್‌!

ಉಡುಪಿ: ನಂದಿನಿ ಮಿಲ್ಕ್ ಪಾರ್ಲರ್‌ನಂತೆ ಕೊಕೊನಟ್‌ ಪಾರ್ಲರ್‌ಗಳು ಸದ್ಯದಲ್ಲಿಯೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಾಚರಿಸಲಿವೆ. ಆರ್ಥಿಕ ಸಂಕಷ್ಟದಲ್ಲಿರುವ ದೇಶವನ್ನು ಸ್ವಾವಲಂಬಿಯಾಗಿಸಲು ಭಾರತೀಯರೇ ಅತ್ಯುತ್ತಮ ಉತ್ಪನ್ನಗಳನ್ನು ಉತ್ಪಾದಿಸಿ ಆಧುನಿಕ ಸ್ಪರ್ಶ ನೀಡಿ ಮಾರು ಕಟ್ಟೆ ಮಾಡುವಂತೆ ಪ್ರಧಾನಿ ನೀಡಿ ರುವ ಕರೆಯಂತೆ ಸ್ಥಳೀಯ ರೈತರು ಈ ಕಾರ್ಯಕ್ಕೆ ಮುಂದಾಗಿದ್ದಾರೆ.

ಕರಾವಳಿಯ ಬಹುಬೇಡಿಕೆಯ ಬೆಳೆಯಾಗಿರುವ ಕಲ್ಪವೃಕ್ಷವನ್ನು ಬಂಡವಾಳವನ್ನಾಗಿಸಿ ಅದರ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಲು ಜಿಲ್ಲಾ ಭಾರತೀಯ ಕಿಸಾನ್‌ ಸಂಘ ಮುಂದಾಗಿದೆ. ಈ ಮೂಲಕ ಹಲವರಿಗೆ ಉದ್ಯೋಗಾವಕಾಶವೂ ಲಭಿಸಲಿದೆ. ತೆಂಗಿನೆಣ್ಣೆ, ಕಲ್ಪರಸದ ಸಕ್ಕರೆ, ಬೆಲ್ಲ, ಚಾಕೊಲೆಟ್‌, ಐಸ್‌ಕ್ರೀಂ, ಜೇನುತುಪ್ಪ, ವಿನೆಗರ್‌ ಸಹಿತ ಹಲವಾರು ಬಗೆಯ ಇತರ ಉತ್ಪನ್ನಗಳೂ ಈ ಮಳಿಗೆಗಳಲ್ಲಿ ಸ್ಥಾನ ಪಡೆಯಲಿವೆ.

ಆರೋಗ್ಯ ವರ್ಧಕ
ತೆಂಗಿನ ಹೊಂಬಾಳೆ (ಕೊಂಬು)ಯಿಂದ ಶೋಧಿಸಿದ “ಕಲ್ಪರಸ’ ಎಂಬ ಆರೋಗ್ಯ ವರ್ಧಕ ಪಾನೀಯವನ್ನು ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಂಬಾರ ಉತ್ಪಾದಕರ ಕಂಪೆನಿ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಇದು ಎಳನೀರಿಗಿಂತ ಮೂರು ಪಟ್ಟು ಆರೋಗ್ಯದಾಯಕ ಎಂದು ಅಧ್ಯಯನದಿಂದ ದೃಢಪಟ್ಟಿದೆ. ಸಂಸ್ಥೆಯು ಭಾರತೀಯ ಕಿಸಾನ್‌ ಸಂಘ ಹಾಗೂ ಕಾಸರಗೋಡಿನ ಸಿಪಿಸಿಆರ್‌ಐ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ರೂಪಿಸಿದೆ.

ರೈತರಿಗೆ
ಅನುಕೂಲ
ಕೆಎಂಎಫ್ ಹಾಲನ್ನು ಸಂಗ್ರಹಿಸುವ ರೀತಿಯಲ್ಲೇ ರೈತರಿಂದ ಕಲ್ಪರಸ ಸಂಗ್ರಹಿಸಲಾಗುವುದು. ಭಾಕಿಸಂ ಈಗಾಗಲೇ 54 ತೆಂಗು ಸೊಸೈಟಿ ಹಾಗೂ 3 ತೆಂಗು ಫೆಡರೇಶನ್‌ ರಚಿಸಿದ್ದು, 4,820 ರೈತ ಸದಸ್ಯರಿ¨ªಾರೆ. ಅವರಿಗೆ ಹೆಚ್ಚಿನ ಆದಾಯ ತಂದುಕೊಡುವ ಸಲುವಾಗಿ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಲಾಗಿದೆ. ಆಯಾ ಭಾಗದ ಸೊಸೈಟಿಯಲ್ಲಿ ಸಂಗ್ರಹವಾಗುವ ಕಲ್ಪರಸವನ್ನು ಘಟಕಕ್ಕೆ ಕೊಂಡೊಯ್ದು, ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

ಜಪ್ತಿಯಲ್ಲಿ ಘಟಕ
ಕುಂದಾಪುರದ ಜಪ್ತಿಯಲ್ಲಿ ಕಲ್ಪರಸ ತಯಾರಿ ಘಟಕ ಸ್ಥಾಪನೆಗೆ ಅಬಕಾರಿ ಇಲಾಖೆಯ ತಾತ್ಕಾಲಿಕ ಪರವಾನಿಗೆ ದೊರಕಿದೆ. ಭದ್ರಾವತಿಯಲ್ಲಿ ಈಗಾಗಲೇ ಮಲೆನಾಡ್‌ ನಟ್ಸ್‌ ಕಂಪೆನಿ ಕಲ್ಪರಸ ತಯಾರಿಸುತ್ತಿದ್ದು ಬೆಂಗಳೂರು, ಶಿವಮೊಗ್ಗ ಮೊದಲಾದ ನಗರಗಳಲ್ಲಿ ಮಾರಾಟ ಮಾಡುತ್ತಿದೆ.

8 ಮರಗಳಿಂದ 2.40
ಲಕ್ಷ ರೂ. ಆದಾಯ
8 ತೆಂಗಿನ ಮರಗಳಿಂದ ಕಲ್ಪರಸ ತೆಗೆಯುವ ರೈತರು ವಾರ್ಷಿಕ 2.40 ಲಕ್ಷ ರೂ.ಗಳಿಗೂ ಅಧಿಕ ಆದಾಯ ಗಳಿಸಬಹುದು. ಕಲ್ಪರಸ ತೆಗೆದ ಬಳಿಕವೂ ಆ ಮರಗಳು ಶೇ. 50ರಷ್ಟು ಕಾಯಿಗಳನ್ನು ಬಿಡುತ್ತವೆ. ಕಲ್ಪರಸದಲ್ಲಿ ವಿಟಮಿನ್‌ ಎ, ಬಿ, ಸಿ ಇದ್ದು, ಗ್ಲೆàಸಮಿಕ್‌ ಇಂಡೆಕ್ಸ್‌ ಕೂಡ ಶೇ. 35ಕ್ಕಿಂತ ಕಡಿಮೆಯಿದೆ. ಕಬ್ಬಿಣದ ಅಂಶ ಸಹಿತ ಕ್ಯಾಲ್ಸಿಯಂ ಕೂಡ ಅಧಿಕವಾಗಿದೆ. 200 ಎಂಎಲ್‌ಗೆ 30ರಿಂದ 35 ರೂ.ಗಳಲ್ಲಿ ಮಾರಾಟ ಮಾಡುವ ಯೋಜನೆ ಹೊಂದಲಾಗಿದೆ. ಕಿಡ್ನಿ, ಲಿವರ್‌, ಶ್ವಾಸಕೋಶದ ಕಾಯಿಲೆ, ಮಧುಮೇಹ ಕಾಯಿಲೆ ಹೊಂದಿರುವವರು ಕೂಡ ಸೇವಿಸಬಹುದಾಗಿದೆ.

ಕಲ್ಪರಸವನ್ನು ಆರೋಗ್ಯ ವರ್ಧಕ ಪಾನೀಯವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಮರದಿಂದ ಸಂಗ್ರಹಿಸಿದ ರಸವನ್ನು ಪ್ಯಾಶ್ಚಿರೀಕರಣ ವಿಧಾನ ಮೂಲಕ ಸಂಸ್ಕರಿಸಲಾಗುತ್ತದೆ. ಹೀಗೆ ಮಾಡುವುದರಿಂದ ಎರಡು ಗಂಟೆಗಳ ಕಾಲ ಫ್ರೀಜರ್‌ನಿಂದ ಹೊರಗಡೆ ಇಟ್ಟರೂ ಕಲ್ಪರಸ ಹುಳಿ ಬರುವುದಿಲ್ಲ.
– ಸತ್ಯನಾರಾಯಣ ಉಡುಪ ಜಪ್ತಿ
ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ಟಾಪ್ ನ್ಯೂಸ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMW ಕಾರು, 4BHK ಫ್ಲಾಟ್ ಗಿಫ್ಟ್

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Manipal: ಅಪಘಾತ ತಡೆಯಲು ಹೀಗೆ ಮಾಡಿ!

6

ಒಲವಿನ ಊಟಕ್ಕೆ ಅಕ್ಕಂದಿರು ಸಿದ್ಧ!

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.