ದೇಶಾದ್ಯಂತ ನಿರುದ್ಯೋಗ ಪ್ರಮಾಣ ಇಳಿಕೆ : ಕರ್ನಾಟಕ, ಗುಜರಾತ್‌ನಲ್ಲಿ ಅತ್ಯಂತ ಕಡಿಮೆ
ಹರಿಯಾಣದಲ್ಲಿ ಅತೀ ಹೆಚ್ಚು ನಿರುದ್ಯೋಗ ದರ
Team Udayavani, Apr 4, 2022, 8:00 AM IST
ಹೊಸದಿಲ್ಲಿ: ಎರಡು ವರ್ಷಗಳಿಂದ ನಿರುದ್ಯೋಗದ ಸುಳಿಗೆ ಸಿಲುಕಿದ್ದ ದೇಶಕ್ಕೆ ಈಗ ಸಮಾಧಾನಕರ ಸುದ್ದಿ ಸಿಕ್ಕಿದೆ. ಕೊರೊನಾದ ಬಳಿಕ ದೇಶದ ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತಿದ್ದು, ನಿರುದ್ಯೋಗ ಪ್ರಮಾಣ ಇಳಿಮುಖವಾಗುತ್ತಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯಾಸ್ ಎಕಾನಮಿ (ಸಿಎಂಐಇ) ವರದಿ ಹೇಳಿದೆ.
ದೇಶದ ಒಟ್ಟು ನಿರುದ್ಯೋಗ ಪ್ರಮಾಣ ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಶೇ. 8.10 ಇದ್ದದ್ದು ಮಾರ್ಚ್‌ನಲ್ಲಿ ಶೇ.7.6ಕ್ಕೆ ಇಳಿಕೆಯಾಗಿದೆ ಎಂದು ಪ್ರತೀ ತಿಂಗಳ ದತ್ತಾಂಶವನ್ನು ನೀಡುವ ಸಿಎಂಐಇಯು ರವಿವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ. ಎ. 2ರಂದು ಇದು ಮತ್ತಷ್ಟು ಇಳಿಮುಖವಾಗಿದ್ದು, ಶೇ. 7.5ಕ್ಕೆ ತಲುಪಿದೆ. ನಗರ ನಿರುದ್ಯೋಗ ಪ್ರಮಾಣ ಶೇ. 8.5ರಷ್ಟಿದ್ದರೆ, ಗ್ರಾಮೀಣ ಭಾಗದಲ್ಲಿ ಶೇ. 7.1ರಷ್ಟಿದೆ. ಈ ಬೆಳವಣಿಗೆಯು ದೇಶದ ಆರ್ಥಿಕತೆಯು ಹಳಿಗೆ ಮರಳುತ್ತಿರುವುದರ ಸೂಚಕ ಎಂದು ವರದಿ ತಿಳಿಸಿದೆ.
ವಿಶೇಷವೆಂದರೆ ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಮಾರ್ಚ್ ತಿಂಗಳಲ್ಲಿ ಅತೀ ಕಡಿಮೆ ನಿರುದ್ಯೋಗ ದರ (ಶೇ. 1.8) ದಾಖಲಾಗಿದೆ. ಹರಿಯಾಣದಲ್ಲಿ ಅತ್ಯಧಿಕ ನಿರುದ್ಯೋಗವಿದ್ದು (ಶೇ.26.7), ರಾಜಸ್ಥಾನ, ಜಮ್ಮು – ಕಾಶ್ಮೀರ, ಬಿಹಾರ, ತ್ರಿಪುರ ಮತ್ತು ಪ. ಬಂಗಾಲ ಅನಂತರದ ಸ್ಥಾನಗಳಲ್ಲಿವೆ.
ಇದನ್ನೂ ಓದಿ : ಹುಣಸೂರು : ತಂದೆಯಿಂದಲೇ ನಡೆಯಿತಾ 4 ವರ್ಷದ ಮಗನ ಅಪಹರಣ ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.