ಅನಾರೋಗ್ಯಕರ ಜೀವನ ಶೈಲಿ; ಹೊಟ್ಟೆಯ ಬೊಜ್ಜು ಕರಗಿಸುವ ಯೋಗಾಸನ
ಇದು ಹೊಟ್ಟೆಯ ಬೊಜ್ಜನ್ನು ಕರಗಿಸುವುದರ ಜತೆಗೆ ಮಂಡಿ, ತೊಡೆ, ಸೊಂಟವನ್ನು ಹಿಗ್ಗಿಸುತ್ತದೆ.
Team Udayavani, Nov 23, 2020, 5:27 PM IST
ಹೊಟ್ಟೆಯ ಬೊಜ್ಜು ಹೆಚ್ಚಾದಂತೆ ಅಪಾಯದ ಮಟ್ಟವೂ ಏರುತ್ತದೆ. ಅನಾರೋಗ್ಯಕರ ಜೀವನ ಶೈಲಿ ಇದಕ್ಕೆ ಕಾರಣವಾದರೂ ಸರಿಯಾದ ಆಹಾರ ಕ್ರಮ,
ವ್ಯಾಯಾಮದೊಂದಿಗೆ ಇದನ್ನು ಕರಗಿಸಲು ಸಾಧ್ಯವಿದೆ. ಹೊಟ್ಟೆಯ ಬೊಜ್ಜು ಇಳಿಸಲು ಯೋಗದಿಂದ ಸಾಧ್ಯವಿದೆ. ಆದರೆ ಈ ಆಸನಗಳನ್ನು ಮನೆಯಲ್ಲೇ ಪ್ರಯೋಗ ಮಾಡಿ ನೋಡುವ ಮೊದಲು ತಜ್ಞರಿಂದ ಮಾರ್ಗದರ್ಶನ ಪಡೆಯುವುದು ಅತೀ ಅಗತ್ಯ.
ತಾಡಾಸನ: ಇದು ದೇಹದಲ್ಲಿ ರಕ್ತಚಲನೆಯನ್ನು ಹೆಚ್ಚಿಸಿ, ಇತರ ಯೋಗ ಭಂಗಿಗಳಿಗೆ ಸಿದ್ಧವಾಗಲು ನೆರವಾಗುತ್ತದೆ.
ಮಾಡುವ ವಿಧಾನ: ನೇರವಾಗಿ ನಿಂತು ಹಿಂಗಾಲುಗಳು ಸ್ಪರ್ಶಿಸುತ್ತಿರುವಂತೆ ಪಾದಗಳನ್ನು ಸ್ವಲ್ಪ ಅಗಲಿಸಿ. ಬೆನ್ನು ನೇರವಾಗಿರಬೇಕು. ಎರಡೂ ಕೈ ನೇರವಾಗಿ ಅಂಗೈ ದೇಹಕ್ಕೆ ತಾಗಿರಬೇಕು. ಕೈಗಳನ್ನು ಮುಂದೆ ಚಾಚಿ ಅಂಗೈಯನ್ನು ಒಂದಕ್ಕೊಂದು ಜೋಡಿಸಿ. ದೀರ್ಘವಾಗಿ ಉಸಿರಾಡಿ. ಬೆನ್ನನ್ನು ಬಗ್ಗಿಸಿ. ಮಡಚಿರುವ
ಕೈಗಳನ್ನು ತಲೆಯ ಮೇಲಿಂದ ಮೇಲಕ್ಕೆತ್ತಿ, ಎಷ್ಟು ಸಾಧ್ಯವಿದೆಯೋ ಅಷ್ಟು ಬಗ್ಗಬೇಕು. ಕಾಲೆºರಳುಗಳಲ್ಲಿ ನಿಂತು ಪಾದಗಳನ್ನು ಮೇಲಕ್ಕೆತ್ತಿ. ದೃಷ್ಟಿ ಆಕಾಶದತ್ತ ಇರಬೇಕು.
ಸಾಮಾನ್ಯವಾಗಿ ಉಸಿರಾಡಿ. ಸ್ವಲ್ಪ ನಿಲ್ಲಿಸಿ ಮತ್ತೆ ದೀರ್ಘವಾಗಿ ಉಸಿರಾಡಿ, ಅನಂತರ ನಿಧಾನವಾಗಿ ಉಸಿರುಬಿಡಿ. ಪಾದಗಳನ್ನು ಮೊದಲಿನ ಸ್ಥಾನಕ್ಕೆ ತನ್ನಿ. ಬಳಿಕ ಸ್ವಲ್ಪ ವಿಶ್ರಾಂತಿ ಪಡೆದು ಮತ್ತೆ ಆರಂಭಿಸಿ. ನಿತ್ಯವೂ 10 ಬಾರಿ ಇದನ್ನು ಮಾಡಿದರೆ ಹೊಟ್ಟೆಯ ಬೊಜ್ಜು ಕರಗಿಸಬಹುದು.
ಪಶ್ಚಿಮೋತ್ತಾಸನ
ಇದು ಹೊಟ್ಟೆಯ ಬೊಜ್ಜನ್ನು ಕರಗಿಸುವುದರ ಜತೆಗೆ ಮಂಡಿ, ತೊಡೆ, ಸೊಂಟವನ್ನು ಹಿಗ್ಗಿಸುತ್ತದೆ. ಅಜೀರ್ಣ ಕ್ರಿಯೆಯಿಂದ ಬಳಲುತ್ತಿರುವವರಿಗೆ ಇದು ಅತ್ಯುತ್ತಮ ಆಸನ.
ಮಾಡುವ ವಿಧಾನ
ಪದ್ಮಾಸನದಲ್ಲಿ ಕುಳಿತು ಬೆನ್ನು ಬಗ್ಗಿಸಿ, ಮುಂದೆ ಕಾಲುಗಳನ್ನು ಚಾಚಿ. ದೀರ್ಘವಾಗಿ ಉಸಿರಾಡಿ, ಮೊಣಕೈ ಬಗ್ಗಿಸದೆ ತಲೆ ಮೇಲೆ ಕೈಗಳನ್ನು ಎತ್ತಿ. ದೃಷ್ಟಿಯೂ ಕೈಗಳನ್ನೇ ನೋಡುತ್ತಿರಲಿ. ಉಸಿರು ಬಿಡುವಾಗ ತೊಡೆಗಳು ಮುಂದಿರುವಂತೆ ಬಗ್ಗಿ. ಬೆನ್ನು ಸಾಧ್ಯವಾದಷ್ಟು ಬಗ್ಗಿರಬೇಕು. ಕೈಯಿಂದ ಕಾಲ್ಬೆರಳು ಸ್ಪರ್ಶಿಸಲು ಪ್ರಯತ್ನಿಸಬೇಕು. ತಲೆ ಮೊಣಕಾಲಿನ ಮೇಲಿರಲಿ.
ಹಾಗೇ ಹಿಂದಕ್ಕೆ ತರಲು ಪ್ರಯತ್ನಿಸಿ. ಸ್ನಾಯುಗಳು ಹಿಗ್ಗಿದ ಅನುಭವವಾಗುವರೆಗೂ ಇದನ್ನು ಮುಂದುವರಿಸಿ. ಉಸಿರು ಎಳೆದು ಹೊಟ್ಟೆಯನ್ನು ಹಿಡಿದಿಡಿ. ಬಳಿಕ ನಿಧಾನವಾಗಿ ಉಸಿರು ಬಿಡಿ. ಪದ್ಮಾಸನ ಭಂಗಿಗೆ ಮರಳಿ. ಈ ಆಸನವನ್ನು ಆರಂಭದಲ್ಲಿ 10 ಬಾರಿ ಬಳಿಕ ಹೆಚ್ಚು ಮಾಡುತ್ತಾ ಹೋಗಿ.
ಪವನಮುಕ್ತಾಸನ
ಗ್ಯಾಸ್ಟ್ರಿಕ್ ಸಮಸ್ಯೆ, ಅಜೀರ್ಣ, ಮಲಬದ್ಧತೆ ನಿವಾರಿಸಲು ಇದು ಅತ್ಯುತ್ತಮ ಆಸನ ಭಂಗಿಯಾಗಿದೆ. ಮೊಣಕಾಲುಗಳು ಹೊಟ್ಟೆಯ ಮೇಲೆ ಒತ್ತಡ ಹಾಕಿ ಬೊಜ್ಜು ಕರಗಲು ನೆರವಾಗುತ್ತದೆ.
ಮಾಡುವ ವಿಧಾನ
ನೆಲದ ಮೇಲೆ ಮಲಗಿ ಕೈಗಳು ದೇಹದ ಎರಡೂ ಬದಿಯಲ್ಲಿರಲಿ. ಪಾದಗಳು ವಿಸ್ತರಿಸಲಿ. ಹಿಮ್ಮಡಿಗಳು ಒಂದಕ್ಕೊಂದು ಸ್ಪರ್ಶಿಸುವಂತಿರಲಿ. ಮೊಣಕಾಲುಗಳನ್ನು
ಮಡಚಿ. ದೀರ್ಘವಾಗಿ ಉಸಿರು ತೆಗೆದುಕೊಂಡು ಹೊರಗೆ ಬಿಡುವಾಗ ಮಡಚಿದ ಕಾಲುಗಳನ್ನು ಎದೆಯ ಸಮೀಪ ತನ್ನಿ. ತೊಡೆಗಳು ಹೊಟ್ಟೆಯ ಮೇಲೆ ಒತ್ತಡ
ಹಾಕುವಂತಿರಲಿ. ಕೈಗಳನ್ನು ತೊಡೆಗಳ ಕೆಳಗೆ ತಂದು ಮತ್ತೆ ಉಸಿರಾಡಿ. ಉಸಿರು ಬಿಡುವಾಗ ತಲೆಯನ್ನು ಮೇಲಕ್ಕೆ ಎತ್ತಿ. ಗಲ್ಲವು ಮೊಣಕಾಲನ್ನು ಸ್ಪರ್ಶಿಸಲಿ.
ಸ್ವಲ್ಪ ಹೊತ್ತು ಹಾಗೇ ಇದ್ದು ದೀರ್ಘ ಉಸಿರು ತೆಗೆದುಕೊಂಡು ನಿಧಾನವಾಗಿ ಬಿಡುತ್ತ ಮೊದಲಿನ ಸ್ಥಿತಿಗೆ ಬನ್ನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.