Uttar Pradesh: ಪ್ರೇಮಸಂಬಂಧ-ಪುತ್ರಿಯ ಗಂಟಲು ಸೀಳಿ, ತಲೆ ಕಡಿದು ಹ*ತ್ಯೆಗೈದ ತಂದೆ!
Team Udayavani, Sep 3, 2024, 1:31 PM IST
ಬಹ್ರೈಚ್(ಉತ್ತರಪ್ರದೇಶ): ಅಪ್ರಾಪ್ತ ವಯಸ್ಸಿನ ಮಗಳು ತನ್ನ ಮಾತು ಮೀರಿ ಪ್ರೀತಿಸಿದ್ದಕ್ಕೆ ಆಕೆಯ ಗಂಟಲು ಸೀಳಿ, ತಲೆಯನ್ನು ಕಡಿದು ಭೀಬತ್ಸವಾಗಿ ಕೊಲೆಗೈದ ಘಟನೆ ಉತ್ತರಪ್ರದೇಶದ ಮೋತಿಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆಗೀಡಾದ (Victim’s) ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ ಐಆರ್(FIR) ದಾಖಲಿಸಿ, ಆರೋಪಿ ತಂದೆಯನ್ನು ಬಂಧಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:Actor Jr NTR: ಆಂಧ್ರ, ತೆಲಂಗಾಣ ಪ್ರವಾಹ; 1 ಕೋಟಿ ರೂ. ದೇಣಿಗೆ ನೀಡಿದ ನಟ ಜೂ.ಎನ್ ಟಿಆರ್
ಮೋತಿಪುರ್ ನ ಲಕ್ಷ್ಮಣ್ ಪುರ್ ಮತೇಹಿ ಗ್ರಾಮದ ನಿವಾಸಿ ನಯೀಮ್ ಖಾನ್ ಎಂಬಾತ ತನ್ನ 17 ವರ್ಷದ ಪುತ್ರಿಯನ್ನು ದಾರುಣವಾಗಿ ಹತ್ಯಗೈದಿರುವುದಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪವಿತ್ ಮೋಹನ್ ತ್ರಿಪಾಠಿ ತಿಳಿಸಿದ್ದಾರೆ.
ಹರಿತವಾದ ಆಯುಧದಿಂದ ಆಕೆಯ ಗಂಟಲು ಸೀಳಿದ ನಂತರ, ತಲೆ, ಕೈ, ಕಾಲುಗಳನ್ನು ಕತ್ತರಿಸಿ, ಆಕೆಯ ಛಿದ್ರವಾದ ಶವದ ಬಳಿ ಕುಳಿತುಕೊಂಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಈ ಬಾಲಕಿ ತನ್ನದೇ ಗ್ರಾಮದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದು, ಎರಡು ಬಾರಿ ಈಕೆ ಆತನ ಜೊತೆ ಮನೆ ಬಿಟ್ಟು ಹೋಗಿದ್ದಳು ಎಂದು ತ್ರಿಪಾಠಿ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ, ಕೋರ್ಟ್ ಗೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.