UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್
Team Udayavani, Jan 13, 2025, 11:54 PM IST
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಭೂ ಸಂತ್ರಸ್ತರಿಗೆ ಭೂ ಪರಿಹಾರ ಮೊತ್ತದಲ್ಲಿ ತುಂಬಾ ಹೆಚ್ಚಳ ಮಾಡಲಾಗಿದೆ. ಭೂಸಂತ್ರಸ್ತರನ್ನು ಸಂಪರ್ಕಿಸಿ ಸಮರ್ಪಕ ದಾಖಲೆ ಹೊಂದಿದವರಿಗೆ ಪರಿಹಾರ ಮೊತ್ತವನ್ನು ನೇರವಾಗಿ ಪಾವತಿಸಲಾ ಗುತ್ತದೆ ಎಂದು ಯುಕೆಟಿಎಲ್ ಅಧಿಕಾರಿ ವೆಂಕಟೇಶ್ ಹೇಳಿದ್ದಾರೆ. ರಾಜ್ಯ ಸರಕಾರದ ಸುತ್ತೋಲೆ/ಜಿಲ್ಲಾಡಳಿತದ ಆದೇಶದಲ್ಲಿ ಯಾವುದು ಹೆಚ್ಚಿನ ಭೂ ಪರಿಹಾರವನ್ನು ಸೂಚಿಸಿ ದೆಯೋ ಅದನ್ನು ಭೂಪರಿಹಾರಕ್ಕೆ ಪರಿಗಣಿಸಲಾಗುವುದು ಎಂದರು.
ತೋಟಗಾರಿಕೆ ಇಲಾಖೆ ನಿಗದಿಪಡಿಸಿದ ಅಡಿಕೆ ಮರಗಳ ಪ್ರಾಯಕ್ಕೆ ಅನುಗುಣವಾಗಿ ಕನಿಷ್ಠ 10 ಸಾ. ರೂ. ರಿಂದ 16 ಸಾ.ರೂ.ದವರೆಗೆ, ತೆಂಗಿನ ಮರಗಳಿಗೆ ಕನಿಷ್ಠ 16 ಸಾ. ರೂ.ದಿಂದ ಗರಿಷ್ಠ 20 ಸಾ. ರೂ.ವರೆಗೆ ಪರಿಹಾರ ಧನ ನೀಡಲಾಗುವುದು. 2019ರಲ್ಲಿ ಯುಕೆಟಿಎಲ್ ಗುತ್ತಿಗೆ ಪಡೆದಿದ್ದು, ನವೆಂಬರ್ 2020ರಲ್ಲಿ ವಿದ್ಯುತ್ ಮಾರ್ಗ ಪೂರ್ಣವಾಗಬೇಕಿತ್ತು. ಕೋವಿಡ್ ಸಮಸ್ಯೆಯಿಂದಾಗಿ ಅದನ್ನು 6 ತಿಂಗಳು ಮುಂದೂಡಲಾಯಿತು. ಕಾಸರಗೋಡು ಭಾಗದಲ್ಲಿ ಬಹುತೇಕ ಭೂಸ್ವಾಧೀನವಾಗಿದೆ ಎಂದಿದ್ದಾರೆ.
ಯೋಜನೆಯ ವೆಚ್ಚ 700 ಕೋಟಿ ರೂ., ಅದರಲ್ಲಿ ಸ್ಟಲೈಟ್ ಪವರ್ ಕಂಪೆನಿಯು ಈವರೆಗೆ 500 ಕೋಟಿ ರೂ.ವ್ಯಯಿಸಿದೆ. ನಂದಿಕೂರಿನಲ್ಲಿ ಬೇಸ್ ಹಾಗೂ ಕಾಸರಗೋಡಿನಲ್ಲಿ ಸಬ್ ಸ್ಟೇಷನ್ ನಿರ್ಮಾಣ ಪೂರ್ಣಗೊಂಡಿದ್ದು, ಕರ್ನಾಟಕದಲ್ಲಿ 68 ಮತ್ತು ಕೇರಳದಲ್ಲಿ 40 ಕಿ.ಮೀ. ಮಾರ್ಗ ಆಗಬೇಕಿದ್ದು, ಕೇರಳದಲ್ಲಿ ಬೇಸ್ ನಿರ್ಮಿಸಲಾಗಿದೆ ಎಂದರು.
ಅರಣ್ಯ ಇಲಾಖೆ ಮತ್ತು ರಾಜ್ಯ/ಕೇಂದ್ರ ಸರಕಾರದ ಜತೆಯಾಗಿ ಯುಕೆಟಿಎಲ್ ಯೋಜನೆಯನ್ನು ಪರಿಸರ ಕಾಪಾಡುವ ನಿಟ್ಟಿನಲ್ಲಿ ಮರ ಕಡಿಯುವುದನ್ನು ಕಡಿಮೆಗೊಳಿ ಸಲು ಟವರಿನ ಎತ್ತರವನ್ನು ಹೆಚ್ಚಿಸ ಲಾಗುವುದು. ಜಿಲ್ಲಾಡಳಿತದ ಸಹಕಾರದೊಂದಿಗೆ ಕಾಮಗಾರಿ ನಡೆಯುತ್ತಿದ್ದು, ಉಡುಪಿಯ 8 ಕಡೆ ಹಾಗೂ ದ.ಕ. ಜಿಲ್ಲೆಯ 36 ಕಡೆ ಕೆಲಸವನ್ನು ಪೂರ್ಣಗೊಳಿಸಲಾಗಿದೆ.
ಬಂಟ್ವಾಳ, ಮಂಗಳೂರು, ಮೂಡು ಬಿದಿರೆ, ಮೂಲ್ಕಿ ತಾಲೂಕು ಗಳಲ್ಲಿÉ 161 ಕಡೆ ಒಟ್ಟು 177 ಟವರ್ ಬೇಸ್ ನಿರ್ಮಿಸಬೇಕಿದೆ. ಅದರಲ್ಲಿ ಈಗಾಗಲೇ 42 ಟವರ್ ಬೇಸ್ ಪೂರ್ಣಗೊಂಡಿದೆ. ರಾಷ್ಟ್ರದಲ್ಲಿ ವಿದ್ಯುತ್ ಗ್ರಿಡ್ ಬಲಪಡಿಸುವ ಯೋಜನೆ ಇದಾಗಿದ್ದು, ಕರ್ನಾಟಕಕ್ಕೆ ಶೇ.37ರಷ್ಟು ಪ್ರಯೋಜನ ದೊರಕಲಿದೆ. ವಿದ್ಯುತ್ ಸಾಗಣೆಯಿಂದ ಯಾರಿಗೂ ಸಮಸ್ಯೆಯಾಗದು. ಯೋಜನೆಯ ಮಾರ್ಗ, ನಕ್ಷೆ ಎಲ್ಲವನ್ನೂ ಆರ್‌ಇಸಿ ಕಂಪೆನಿ ಅಂತಿಮಗೊಳಿಸಿದ್ದು, ಕೇಂದ್ರ ಸರಕಾರದ ಇಂಧನ ಸಚಿವಾಲಯವು ಮಾರ್ಗವನ್ನು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನಿರ್ಮಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.