ಭಾರತಕ್ಕೆ ಹಾರ್ಪೂನ್ ಸೆಟ್ ಒದಗಿಸಲು ಅಮೆರಿಕ ಅಸ್ತು
Team Udayavani, Aug 3, 2021, 8:00 PM IST
ವಾಷಿಂಗ್ಟನ್ : ನೌಕಾ ನಿಗ್ರಹ ಕ್ಷಿಪಣಿ ವ್ಯವಸ್ಥೆಯಾದ “ಹಾರ್ಪೂನ್ ಜಾಯಿಂಟ್ ಕಾಮನ್ ಟೆಸ್ಟ್ ಸೆಟ್’ (ಜೆಸಿಟಿಎಸ್) ಮತ್ತು ಅದಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ಭಾರತಕ್ಕೆ ಒದಗಿಸಲು ಅಮೆರಿಕ ಒಪ್ಪಿಗೆ ನೀಡಿದೆ. 82 ದಶಲಕ್ಷ ಡಾಲರ್ ವೆಚ್ಚದಲ್ಲಿ ಈ ಹಾರ್ಪೂನ್ ಗಳನ್ನು ಭಾರತ ಖರೀದಿಸಲಿದೆ.
ಉಭಯ ದೇಶಗಳ ವ್ಯೂಹಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಒಂದು ಹಾರ್ಪೂನ್ ಸೆಟ್, ಬಿಡಿ ಭಾಗಗಳು, ಪರೀಕ್ಷಾ ಸಾಮಗ್ರಿ, ಸಿಬ್ಬಂದಿ ತರಬೇತಿಗೆ ಸಂಬಂಧಿಸಿದ ಪ್ರಕಟಣೆಗಳು ಕೂಡ ಈ ಒಪ್ಪಂದದಲ್ಲಿ ಸೇರಿವೆ.
2016ರ ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾಗ, ಅಮೆರಿಕವು ಭಾರತವನ್ನು “ಪ್ರಮುಖ ರಕ್ಷಣಾ ಪಾಲುದಾರ’ ಎಂದು ಘೋಷಿಸಿತ್ತು. ಜತೆಗೆ, ಭಾರತದೊಂದಿಗೆ ರಕ್ಷಣಾ ತಂತ್ರಜ್ಞಾನದ ಹಂಚಿಕೆ, ರಕ್ಷಣಾ ಉತ್ಪಾದನೆಯಲ್ಲಿ ಕೈಗಾರಿಕಾ ಸಹಭಾಗಿತ್ವವನ್ನೂ ಹೊಂದುವುದಾಗಿ ಹೇಳಿತ್ತು.
ಇದನ್ನೂ ಓದಿ :ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.